Thursday, October 16, 2025

Latest Posts

ಹೊಟೇಲ್ ಶೈಲಿಯ ಸ್ವೀಟ್ ಕಾರ್ನ್ ಸೂಪ್ ಈಗ ಮನೆಯಲ್ಲೇ ತಯಾರಿಸಿ…

- Advertisement -

ಸ್ಟೀಟ್ ಕಾರ್ನ್ ತಿನ್ನೋಕ್ಕೆ ಎಷ್ಟು ಟೇಸ್ಟಿನೋ, ಆರೋಗ್ಯಕ್ಕೂ ಅಷ್ಟೇ ಉತ್ತಮ. ಇದನ್ನ ಬೇಯಿಸಿ ತಿಂದ್ರೆ ಮಲಬದ್ಧತೆ ಸಮಸ್ಯೆ, ಹೊಟ್ಟೆ ನೋವಿನ ಸಮಸ್ಯೆ, ಜೀರ್ಣಕ್ರಿಯೆ ಸಮಸ್ಯೆ ಸೇರಿ ಇನ್ನೂ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಆದ್ರೆ ಬರೀ ಬೇಯಿಸಿ ತಿನ್ನೋ ಬದಲು, ಇದನ್ನು ಇನ್ನೂ ಆರೋಗ್ಯಕರ ಮತ್ತು ರುಚಿಕರ ಮಾಡಿ ತಿನ್ನಬಹುದು. ಹಾಗಾಗಿ ನಾವಿಂದು ಇದರ ಸೂಪ್ ಮಾಡೋದನ್ನ ಹೇಳಲಿದ್ದೇವೆ.

ಪನೀರ್ ಪೆಪ್ಪರ್ ಫ್ರೈ ಹೀಗೆ ತಯಾರಿಸಿ ನೋಡಿ..

ಬೇಕಾಗುವ ಸಾಮಗ್ರಿ: ಒಂದು ಬೌಲ್ ಬೇಯಿಸಿದ ಸ್ವೀಟ್ ಕಾರ್ನ್, 1 ಸಣ್ಣಗೆ ಹೆಚ್ಚಿದ ಕ್ಯಾರೆಟ್, 5 ಸಣ್ಣಗೆ ಹೆಚ್ಚಿದ ಬೀನ್ಸ್, 2 ಸ್ಪೂನ್ ಫ್ರೆಶ್ ಕ್ರೀಮ್, ಒಂದು ಕ್ಯೂಬ್ ಬೆಣ್ಣೆ, 1 ಸ್ಪೂನ್ ಪೆಪ್ಪರ್ ಪುಡಿ, 1 ಹಸಿ ಮೆಣಸಿನಕಾಯಿ, ಚಿಕ್ಕ ತುಂಡು ಹಸಿ ಶುಂಠಿ, ನಾಲ್ಕು ಸ್ಪೂನ್ ಸ್ಪ್ರಿಂಗ್ ಆನಿಯನ್, 15 ಎಸಳು ಬೆಳ್ಳುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು.

ಬದನೆ ಗೊಜ್ಜು ಹೀಗೆ ಮಾಡಿದ್ರೆ ಸಖತ್ ಟೇಸ್ಟಿಯಾಗಿರತ್ತೆ..

ಮಾಡುವ ವಿಧಾನ : ಮೊದಲು ಸ್ವೀಟ್ ಕಾರ್ನ್ ಮತ್ತು ನೀರು ಹಾಕಿ ರುಬ್ಬಿ, ಥಿಕ್ ಪೇಸ್ಟ್ ತಯಾರಿಸಿಕೊಳ್ಳಿ. ಈಗ ಒಂದು ಪ್ಯಾನ್ ಬಿಸಿ ಮಾಡಿ, ಅದಕ್ಕೆ ಕೊಂಚ ಬೆಣ್ಣೆ ಹಾಕಿ 7 ಬೆಳ್ಳುಳ್ಳಿ ಎಸಳು, ಹಸಿ ಮೆಣಸಿನಕಾಯಿ, ಶುಂಠಿ, ಸ್ಪ್ರಿಂಗ್‌ ಆನಿಯನ್ ಹಾಕಿ ಹುರಿಯಿರಿ. ಇದಕ್ಕೆ 2 ಸ್ಪೂನ್ ಬೇಯಿಸಿದ ಸ್ವೀಟ್ ಕಾರ್ನ್, ಕ್ಯಾರೆಟ್, ಬೀನ್ಸ್ ಹಾಕಿ ಹುರಿಯಿರಿ.

ಸೋರೆಕಾಯಿ ಸೇವನೆಯಿಂದ ಆರೋಗ್ಯ ಲಾಭದ ಬಗ್ಗೆ ಕೇಳಿದ್ರೆ ಆಶ್ಚರ್ಯ ಪಡ್ತೀರಾ..

ಈಗ ಪೇಸ್ಟ್ ಮಾಡಿಟ್ಟುಕೊಂಡ ಸ್ವೀಟ್ ಕಾರ್ನ್ ಮಿಕ್ಸ್ ಮಾಡಿ. ಇದಕ್ಕೆ ಒಂದು ಗ್ಲಾಸ್ ನೀರು ಹಾಕಿ 5 ನಿಮಿಷ ಮಂದ ಉರಿಯಲ್ಲಿ ಬೇಯಿಸಿ. ಈಗ ಇದಕ್ಕೆ ಫ್ರೆಶ್ ಕ್ರೀಮ್, ಪೆಪ್ಪರ್ ಪುಡಿ ಹಾಕಿ ಮಿಕ್ಸ್ ಮಾಡಿದ್ರೆ, ಸ್ವೀಟ್ ಕಾರ್ನ್ ಸೂಪ್ ರೆಡಿ.

- Advertisement -

Latest Posts

Don't Miss