ಲಿಂಬೇಹಣ್ಣಿನ ಸಿಹಿ ಉಪ್ಪಿನಕಾಯಿ ರೆಸಿಪಿ..

ಮೊದಲೆಲ್ಲ ಮನೆಯಲ್ಲೇ ರುಚಿ ರುಚಿ ಉಪ್ಪಿನಕಾಯಿ ತಯಾರಿಸಿ, ತಿನ್ನುತ್ತಿದ್ದರು. ಈಗ ಹಳ್ಳಿ ಕಡೆ ಜನ ಮಾತ್ರ ಮನೆಯಲ್ಲೇ ಉಪ್ಪಿನಕಾಯಿ ತಯಾರಿಸುತ್ತಾರೆ. ಯಾಕಂದ್ರೆ ಸಿಟಿಯಲ್ಲಿ ಹಲವರಿಗೆ ಉಪ್ಪಿನಕಾಯಿ ತಯಾರಿಸೋದು ಗೊತ್ತಿಲ್ಲ. ಗೊತ್ತಿದ್ದರೂ, ಅದನ್ನ ತಯಾರಿಸೋಕ್ಕೆ ಉದಾಸೀನ. ಆದ್ರೆ ಸುಲಭದಲ್ಲಿ ಮನೆಯಲ್ಲೇ ಉಪ್ಪಿನಕಾಯಿ ತಯಾರಿಸುವುದು ಹೇಗೆ ಅಂತಾ ತಿಳಿಯೋಣ ಬನ್ನಿ..

ಮಧುಮೇಹವನ್ನು (ಶುಗರ್) ಕಂಟ್ರೋಲಿನಲ್ಲಿಡುವುದು ಹೇಗೆ..?

ಬೇಕಾಗುವ ಸಾಮಗ್ರಿ: ನಾಲ್ಕು ನಿಂಬೆ ಹಣ್ಣು, ಒಂದೂವರೆ ಕಪ್ ಬೆಲ್ಲ, ಒಂದು ಸ್ಪೂನ್ ಖಾರದ ಪುಡಿ, ಅರ್ಧ ಸ್ಪೂನ್ ಕಪ್ಪು ಉಪ್ಪು, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಒಂದು ನಿಂಬೆಹಣ್ಣನ್ನು 8 ತುಂಡುಗಳಾಗಿ ಕತ್ತರಿಸಿ. ಇದೇ ರೀತಿ 4 ನಿಂಬೆಹಣ್ಣನ್ನು ಎಂಟು ತುಂಡು ಮಾಡಿ, ಅದರಲ್ಲಿರುವ ಬೀಜವನ್ನು ತೆಗೆಯಿರಿ. ನಂತರ ಆ ನಿಂಬೆ ಹೋಳುಗಳನ್ನು ಮಿಕ್ಸಿ ಜಾರ್‌ಗೆ ಹಾಕಿ, ತರಿತರಿಯಾಗಿ ರುಬ್ಬಿಕೊಳ್ಳಿ. ಒಂದು ಪ್ಯಾನ್‌ಗೆ ಆ ನಿಂಬೆ ಹಣ್ಣಿನ ಪೇಸ್ಟ್ ಮತ್ತು ಬೆಲ್ಲ ಹಾಕಿ, ಮಿಕ್ಸ್ ಮಾಡಿ.

ನೀವು ಚಾಕೋಲೇಟ್ ಪ್ರಿಯರಾ..? ಹಾಗಾದ್ರೆ ಈ ಸ್ಟೋರಿ ಖಂಡಿತ ಓದಿ..

ಇದರಿಂದ ಪಾಕ ತಯಾರಿಸಿ. ಈ ಮಿಶ್ರಣ ಕುದಿಯುತ್ತಿರುವಾಗಲೇ, ಖಾರದ ಪುಡಿ, ಕಪ್ಪು ಉಪ್ಪು ಮತ್ತು ಉಪ್ಪು ಹಾಕಿ, ಮಿಕ್ಸ್ ಮಾಡಿ. ಈ ರೀತಿ ಪಾಕವಾಗುವ ವೇಳೆ, ಸರಿಯಾಗಿ ಪಾಕ ತಯಾರಿಸಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ. ಅರ್ಧಂಬರ್ಧ ಪಾಕ ತಯಾರಿಸೋದು. ಅಥವಾ ಪಾಕ ಗಟ್ಟಿಯಾಗುವಂತೆ ಮಾಡಬೇಡಿ. ಪಾಕ ಹದವಾಗಿರುವಂತೆ ನೋಡಿಕೊಳ್ಳಿ. ಸರಿಯಾಗಿ ಪಾಕ ಬಂದರೆ, ಉಪ್ಪಿನಕಾಯಿ ರೆಡಿ ಅಂತ ಅರ್ಥ. ಈ ಉಪ್ಪಿನಕಾಯಿ ತಣ್ಣಗಾದ ಮೇಲೆ ಗಾಜಿನ ಜಾರಿನಲ್ಲಿ ತುಂಬಿಸಿ ಇಡಿ.

About The Author