ಸಂಕ್ರಾಂತಿಯನ್ನ ಭಾರತದ ಎಲ್ಲಾ ರಾಜ್ಯಗಳಲ್ಲೂ ಆಚರಿಸಲಾಗತ್ತೆ. ಆದ್ರೆ ಅದಕ್ಕೆ ಹೆಸರು ಬೇರೆ ಬೇರೆ ಅಷ್ಟೆ. ಅದೇ ರೀತಿ ಈ ದಿನ ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಸಿಹಿ ತಿಂಡಿಗಳನ್ನ ತಯಾರಿಸಲಾಗತ್ತೆ. ತಮಿಳರು ಮಾಡುವ ಸ್ವೀಟ್ ಪೊಂಗಲ್ ರೆಸಿಪಿಯನ್ನ ನಾವಿಂದು ನಿಮಗೆ ತಿಳಿಸಲಿದ್ದೇವೆ.
ಬೇಕಾಗುವ ಸಾಮಗ್ರಿ: ಒಂದು ಕಪ್ ಅಕ್ಕಿ, ಅರ್ಧ ಕಪ್ ಹೆಸರು ಬೇಳೆ, ಎರಡು ಕಪ್ ಬೆಲ್ಲ, ಅರ್ಧ ಕಪ್ ತುಪ್ಪ, ಅರ್ಧ ಕಪ್ ಹಾಲು, ನಾಲ್ಕು ಏಲಕ್ಕಿ, 2 ಲವಂಗ, ಕಾಲು ಕಪ್ ಗೋಡಂಬಿ ಮತ್ತು ದ್ರಾಕ್ಷಿ.
ಮೆಹೆಂದಿ ಜೊತೆ ಇದನ್ನ ಮಿಕ್ಸ್ ಮಾಡಿದ್ರೆ, ನಿಮ್ಮ ಕೂದಲ ಕಲರ್ ಸೂಪರ್ ಆಗಿರತ್ತೆ ನೋಡಿ..
ಮಾಡುವ ವಿಧಾನ: ಮೊದಲು ಅಕ್ಕಿಯನ್ನು ಹುರಿದುಕೊಂಡು ಸಪರೇಟ್ ಆಗಿ ಇರಿಸಿ. ಅದೇ ಪಾತ್ರೆಯಲ್ಲಿ ಹೆಸರುಬೇಳೆ ಹುರಿದುಕೊಳ್ಳಿ. ನಂತರ ಎಲರಡೂ ತಣ್ಣಗಾದ ಮೇಲೆ, ನೀರಿನಿಂದ ಸ್ವಚ್ಛಗೊಳಿಸಿ. ಈಗ ಕುಕ್ಕರ್ನಲ್ಲಿ ಹೆಸರುಬೇಳೆ, ಅಕ್ಕಿ ಹಾಕಿ 3ವರೆ ಕಪ್ ನೀರು, ಅರ್ಧ ಕಪ್ ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, 3 ವಿಶಲ್ ಬರುವವರೆಗೂ ಬೇಯಿಸಿ. ಮೂರು ವಿಶಲ್ ಬಂದು 15 ನಿಮಿಷವಾದ ಮೇಲೆ ಕುಕ್ಕರ್ ಓಪೆನ್ ಮಾಡಿ.
ಈ ಬಾರಿ ಸಂಕ್ರಾಂತಿಗೆ ಮನೆಯಲ್ಲೇ ತಯಾರಿಸಿ ಈ ಸ್ಪೆಶಲ್ ಎಳ್ಳು ಬೆಲ್ಲ..
ಈಗ ಗ್ಯಾಸ್ ಆನ್ ಮಾಡಿ ಪ್ಯಾನ್ ಇಟ್ಟು ಅದಕ್ಕೆ ಬೆಲ್ಲ ಮತ್ತು ನೀರು ಹಾಕಿ, ಲೈಟ್ ಆಗಿ ಬೆಲ್ಲದ ಪಾಕ ತಯಾರಿಸಿಕೊಳ್ಳಿ. ಮಂದ ಉರಿಯಲ್ಲಿ ಪಾಕ ತಯಾರಿಸಿಕೊಳ್ಳಿ. ಪಾಕ ತಯಾರಾದ ಬಳಿಕ ಕುಕ್ಕರನ್ನು ಗ್ಯಾಸ್ ಮೇಲಿರಿಸಿ, ಈ ಪಾಕವನ್ನು ಬೆಂದ ಅನ್ನ ಮತ್ತು ಬೇಳೆಗೆ ಸೇರಿಸಿಕೊಳ್ಳಿ. ಜೊತೆಗೆ ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 5ನಿಮಿಷ ಬಿಸಿ ಮಾಡಿ. ಇದಕ್ಕೆ ಕೊಂಚ ಜಜ್ಜಿದ ಏಲಕ್ಕಿ ಮತ್ತು ಲವಂಗವನ್ನು ಸೇರಿಸಿ. ನಂತರ ತುಪ್ಪದಲ್ಲಿ ಹುರಿದ ಗೋಡಂಬಿ ಮತ್ತು ದ್ರಾಕ್ಷಿ ಸೇರಿಸಿದ್ರೆ ಸ್ವೀಟ್ ಪೊಂಗಲ್ ರೆಡಿ.