Sunday, September 8, 2024

Latest Posts

ಅಹಿತಕರ ಘಟನೆಗಳು ನಡೆದಾಗ ತಕ್ಷಣಕ್ಕೆ ಕಡಿವಾಣ ಹಾಕೋದು ಪೋಲಿಸರ ಕರ್ತವ್ಯ: ಸಚಿವ ಸಂತೋಷ್ ಲಾಡ್

- Advertisement -

Hubli News: ಹುಬ್ಬಳ್ಳಿ: ಮೃತ ಅಂಜಲಿ ಕುಟುಂಬಕ್ಕೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಸಚಿವ ಸಂತೋಷ್ ಲಾಡ್, ನೇಹಾ ಹತ್ಯೆ ಘಟನೆ ನಡೆದ ನಂತರ ಇನ್ನೊಂದು ಘಟನೆ ನಡೆದಿದೆ. ಅಹಿತಕರ ಚಟುವಟಿಕೆಗಳಲ್ಲಿ ಯುವಕರು ಬಲಿಯಾಗ್ತಿದ್ದಾರೆ. ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಯುವಕರಿಗೆ ಜಾಗೃತಿ ಮೂಡಿಸಿವ ಕೆಲಸ ಮಾಡಬೇಕು. ಇದನ್ನ ಸಿಐಡಿ ತನಿಖೆಗೆ ಸರ್ಕಾರ ಕೊಡಬೇಕು ಅಂತ ನಾನು ಮನವಿ ಮಾಡ್ತಿನಿ ಎಂದಿದ್ದಾರೆ.

ಗೃಹ ಸಚಿವರು ಕೂಡ ಬರುತ್ತಾರೆ ಅಂತ ಹೇಳಿದ್ದಾರೆ. ಈಗಾಗಲೇ ಕುಟುಂಬಸ್ಥರು ಹೇಳಿದ್ದಾರೆ ದೂರು ಮೊದಲು ಕೊಟ್ಟಿದ್ವಿ ಅಂತ. ಈಗಾಗಲೇ ಕ್ರಮ ಕೂಡ ಆಗಿದೆ. ಡ್ರಗ್ಸ್ ಎಲ್ಲಾ ಕಡೆ ಇದೆ ಟ್ಯಾಬ್ಲೆಟ್ ನಲ್ಲಿ ಕೂಡ ಬಂದಿದೆ.  ಅದನ್ನ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರು ಪಾತ್ರ ಮುಖ್ಯ. ನಾನು ಸರ್ಕಾರ ಪರವಾಗಿ ಮಾತನಾಡುತ್ತಿಲ್ಲ. ಇಂತಹದ್ದು ಕಂಡು ಬಂದ್ರೆ ತಡೆಗಟ್ಟಲು ಸಹಾಯವಾಗುತ್ತೆ. ಈಗಾಗಲೇ ತನಿಖೆ ನಡೆಯುತ್ತದೆ ಗೃಹ ಸಚಿವರು ಬಂದು ಈ ಕುರಿತು ಮಾತಾನಾಡುತ್ತಾರೆ. ಅಹಿತಕರ ಘಟನೆಗಳು ನಡೆದಾಗ ತಕ್ಷಣಕ್ಕೆ ಕಡಿವಾಣ ಹಾಕೋದು ಪೋಲಿಸರ ಕರ್ತವ್ಯ. ದಿನಾ ನಡೆಯುವ ಕೆಲಸಗಳು ನಮಗೆ ಕೂಡ ಗೊತ್ತಾಗುವುದಿಲ್ಲ. ಅಂತಹ ಅಹಿತಕರ ಘಟನೆಗಳು ನಡೆದ್ರೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.

ಅಕ್ರಮ ಸಾರಾಯಿ ವಿಚಾರ ವಾಗಿ ಜನರು ಕೂಡ ಎಚ್ಚೆತ್ತುಕೊಂಡು ಪ್ರತಿಭಟನೆ ಮಾಡಬೇಕು. ಎಲ್ಲವನ್ನು ನಾವ ಒಬ್ಬರೇ ಹೇಗೆ ತೆಗೆದು ಹಾಕಲು ಸಾಧ್ಯವಿಲ್ಲ. ಎಲ್ಲರು ಕೈ ಜೋಡಿಸಿದಾಗ ಇಂತಹದ್ದನ್ನು ತೆಗೆದುಹಾಕಬಹುದು. ನಾನು ಬಿಜೆಪಿ ರಾಜಕಾರಣ ಮಾಡುತ್ತಿದ್ದಾರೆ ಅಂತ ಹೇಳೋದಿಲ್ಲ. ನನಗೆ ಮೈಯಲ್ಲಿ ಹುಷಾರಿಲ್ಲದ ಕಾರಣ ಬರಲು ಆಗಿಲ್ಲ. ಅವರು ಕೇಳಿದ ಪ್ರಶ್ನೆ ಸರಿಯಾಗಿದೆ. ನಾನು ಅದಕ್ಕೆ ಅವರಿಗೆ ಉತ್ತರ ಕೂಡ ಹೇಳಿದ್ದೇನೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.

ಇನ್ನು ಇದೇ ವೇಳೆ ಮಾತನಾಡಿದ ಶಾಸಕ ಪ್ರಸಾದ್ ಅಬ್ಬಯ್ಯ, ನಾವು ಇಂತಹ ಘಟನೆಯನ್ನ ಖಂಡಿಸುತ್ತೇನೆ. ಈಗಾಗಲೇ ಎರಡು ಪ್ರಕರಣಗಳು ನಡೆದಿದೆ. ಡ್ರಗ್ಸ್ ವಿಚಾರವಾಗಿ ನಾನು ಮೊದಲು ತೆಗೆದುಹಾಕಬೇಕು ಅಂತ ಮೊದಲಿಂದ ಹೇಳಕೊಂಡಿಬಂದಿದ್ದೇನೆ. ಅದನ್ನ ತಡೆಗಟ್ಟಲು ನಾನು ಹಲವಾರು ಬಾರಿ ಇಲಾಖೆ ಮೀಟಿಂಗ್ ಮಾಡಿದ್ದೇನೆ. ನಾನು ಕೊಲೆಯಾದ ಸಂದರ್ಭದಲ್ಲಿ ಬಂದಿಲ್ಲ ಅಂತ ಟೀಕೆ ಮಾಡ್ತಿದ್ದಾರೆ. ನಾನು ಪೊಟೊ ಪೋಸ್ ಗೆ ಬರೋ ಅವಶ್ಯಕತೆಯಿಲ್ಲ. ನಮ್ಮದು ಬೇರೆ ಅಫಿಶೀಯಲ್ ಕೆಲಸ ಇತ್ತು ಬರಲು ಆಗಿಲ್ಲ. ಇಂತಹ ಘಟನೆಯಾದಾಗ ಪೊಟೊ ಫೋಸ್ ಬರುವ ಅವಶ್ಯಕತೆ ಇಲ್ಲ. ಈ ಕೇಸ್ ನಲ್ಲಿ ಯಾರ ಯಾರ ಹರಿಕಥೆ ಇದೆ ಗೊತ್ತಾಗುತ್ತದೆ. ಈಗಾಗಲೇ ತನಿಖೆ ನಡೆಯುತ್ತಿದೆ,ಎಲ್ಲವೂ ಹೊರ ಬರಲಿದೆ. ಸೋಮವಾರ ಗೃಹಸಚಿವರು ಹುಬ್ಬಳ್ಳಿಗೆ ಬರುತ್ತಾರೆ ಅಂತ ಹೇಳಿದ್ದಾರೆ ಎಂದು ಶಾಸಕ ಪ್ರಸಾದ್ ಅಬ್ಬಯ್ಯ ಹೇಳಿದ್ದಾರೆ.

ಅಪಘಾತದ ಸಮಯದಲ್ಲಿ ನಟಿ ಪವಿತ್ರಾ ಜಯರಾಮ್ ಜೊತೆ ಇದ್ದ ನಟ ಚಂದು ಆತ್ಮಹ*ತ್ಯೆಗೆ ಶರಣು

ಮಾಜಿ ಪ್ರಧಾನಿ ದೇವೇಗೌಡರ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಸಿಎಂ ಸಿದ್ದರಾಮಯ್ಯ

ಎಚ್ಚರಿಕೆ!!: ಹಾಸನ ಜಿಲ್ಲೆಯಲ್ಲಿ ಪ್ರತ್ಯಕ್ಷವಾಯ್ತಾ ಉತ್ತರ ಭಾರತದ ಕುಖ್ಯಾತ ‘ಚಡ್ಡಿ ಬನಿಯನ್ ಗ್ಯಾಂಗ್’

- Advertisement -

Latest Posts

Don't Miss