Political News: ಇಂದು ರಾಜರಾಜೇಶ್ವರಿ ಕ್ಷೇತ್ರದಲ್ಲಿ ಮತಯಾಚನೆ ಮಾಡುವ ಮುನ್ನ ಡಿಸಿಎಂ ಡಿ.ಕೆ.ಶಿವಕುಮಾರ್ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ, ರಾಜರಾಜೇಶ್ವರಿಯ ದರ್ಶನ ಮಾಡಿ, ಆಶೀರ್ವಾದ ಪಡೆದು, ಬಳಿಕ ಪ್ರಚಾರ ಕಾರ್ಯ ಆರಂಭಿಸಿದರು.
ಈ ವೇಳೆ ಮಾತನಾಡಿದ ಅವರು ಮತದಾನ ಕೇವಲ ನಮ್ಮ ಕೆಲಸ ಅಲ್ಲ ಅದು ನಮ್ಮ ಹಕ್ಕು,ನಮ್ಮ ಕರ್ತವ್ಯ. ಈ ದೇಶದ ನಾಯಕನ ಆಯ್ಕೆಯಲ್ಲಿ...
Political News: ಮದ್ಯನೀತಿ ಪ್ರಕರಣದಡಿ ಜೈಲು ಸೇರಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ರನ್ನು ಅವರ ಪತ್ನಿ, ಸ್ವತಂತ್ರ ಹೋರಾಟಗಾರರಿಗೆ ಹೋಲಿಸಿದ್ದಾರೆ. ಹಿಂದಿನ ಜನ್ಮದಲ್ಲಿ ಅರವಿಂದ್ ಕೇಜ್ರಿವಾಾಲ್ ಅವರು ಸ್ವಾತಂತ್ರ ಹೋರಾಟಗಾರರಾಗಿದ್ದರು ಎಂದೆನ್ನಿಸುತ್ತದೆ. ಇನ್ನುವರೆಗೂ ಅವರು ಹೋರಾಡುತ್ತಲೇ ಇದ್ದಾರೆ ಎಂದು ಹೇಳಿದ್ದಾರೆ.
ಕೇಜ್ರಿವಾಲ್ ಪತ್ನಿ ಸುನಿತಾ ಕೇಜ್ರಿವಾಲ್ ದೆಹಲಿಯಲ್ಲಿ ನಡೆದ ಇಂಡಿಯಾ ಒಕ್ಕೂಟದ ಪ್ರತಿಭಟನೆಯಲ್ಲಿ ಭಾಗಿಯಾಗಿ...
Political News: ಈ ಬಾರಿ ಭಾರತ ರತ್ನ ಘೋಷಣೆಯಾದವರಲ್ಲಿ ಬಿಜೆಪಿ ಭೀಷ್ಮ ಲಾಲ್ ಕೃಷ್ಣ ಅಡ್ವಾಣಿ ಅವರ ಹೆಸರು ಕೂಡ ಇದೆ. ಅಡ್ವಾಣಿಯವರಿಗೆ ವಯಸ್ಸಾದ ಕಾರಣ, ಪ್ರಧಾನಿ ಮೋದಿ ಅವರ ಮನೆಗೆ ಹೋಗಿ, ಅವರನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿ, ಬಳಿಕ ಭಾರತ ರತ್ನ ಪ್ರಶಸ್ತಿ ಘೋಷಿಸಿದ್ದರು. ಅದೇ ರೀತಿ ಅವರ ಮನೆಗೆ ಹೋಗಿ,...
Political News: ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ, ನೀವು ಕನಿಷ್ಠ 200 ಸ್ಥಾನಗಳನ್ನು ಗೆದ್ದು ತೋರಿಸಿ ಎಂದು ಬಿಜೆಪಿಗೆ ಚಾಲೆಂಜ್ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಕೃಷ್ಣನಗರ ಲೋಕಸಭಾ ಕ್ಷೇತ್ರದಲ್ಲಿ ಸಂಸದೆ ಮಹುವಾ ಮೊಯಿತ್ರಾ ಪರ ಪ್ರಚಾರ ಮಾಡುವಾಗ ಭಾಷಣದ ವೇಳೆ ಮಾತನಾಡಿದ ಬ್ಯಾನರ್ಜಿ, ಈ ಬಾರಿ 400 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿರುವ ಬಿಜೆಪಿ,...
Political News: ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು. ಮಂಡ್ಯ ಕ್ಷೇತ್ರವನ್ನು ಬಿಜೆಪಿ ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ. ಹಾಗಾಗಿ ಮಂಡ್ಯ ಕ್ಷೇತ್ರದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರೆ. ಆದರೆ ಸುಮಲತಾ ಅಂಬರೀಷ್ ಪಕ್ಷೇತರರಾಗಿ ಸ್ಪರ್ಧಿಸಲು ಈ ಮೊದಲು ನಿರ್ಧರಿಸಿದ್ದರು. ಆದರೆ ಬಿ.ವೈ.ವಿಜಯೇಂದ್ರ ಜೊತೆ, ಮತ್ತು ತಮ್ಮ ಅಭಿಮಾನಿಗಳ ಜೊತೆ ಸಭೆ ನಡೆಸಿ,...
Hubli News: ಹುಬ್ಬಳ್ಳಿ: ಗುಡ್ ಫ್ರೈಡೆ ಅಂಗವಾಗಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಕರ್ನಾಟಕ ಸ್ಟೇಟ್ ಕ್ರಿಶ್ಚಿಯನ್ ಮೈನಾರಿಟಿ ವೆಲ್‌ಫೇರ್ ಅಸೋಸಿಯೇಶನ್ (ರಿ) ವತಿಯಿಂದ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಯಿತು. ಶಾಂತಿ ಸೌಹಾರ್ದತೆಯ ಹಿನ್ನೆಲೆಯಲ್ಲಿ ಇಂತಹದೊಂದು ಶಾಂತಿ ಮೆರವಣಿಗೆ ಸಾಕಷ್ಟು ಮೆರಗನ್ನು ತಂದಿದೆ.
ಪ್ರತಿವರ್ಷದಂತೆ ಕ್ರೈಸ್ತ ಸಮುದಾಯದ ವತಿಯಿಂದ ಶುಭ ಶುಕ್ರವಾರ "Good Friday" ಹಬ್ಬವನ್ನು ಹುಬ್ಬಳ್ಳಿ ಪಟ್ಟಣದಲ್ಲಿ LIVE...
Big Boss News: ಯಾರೋ ಅಪರಿಚಿತರು ಕಳಿಸಿದ ಲಿಂಕ್, ಯಾರೋ ನಿಮಗೆ ಗಿಫ್ಟ್ ಬಂದಿದೆ ಎಂದು ಕಳಿಸುವ ಲಿಂಕ್, ಹೀಗೆ ಯಾವುದ್ಯಾವುದೋ ಲಿಂಕ್ ಪ್ರೆಸ್ ಮಾಡಬೇಡಿ. ಇದು ನಿಮ್ಮ ಮೊಬೈಲ್ ಹ್ಯಾಕ್ ಮಾಡುತ್ತೆ ಅಂತಾ ಹಲವು ಬಾರಿ ಎಚ್ಚರಿಸಲಾಗಿದೆ. ಆದರೂ ಕೂಡ ವಿದ್ಯಾವಂತರೇ ಇಂಥ ಲಿಂಕ್ ಕ್ಲಿಕ್ ಮಾಡಿ, ಕಷ್ಟಕ್ಕೆ ಒಳಗಾಗುತ್ತಿದ್ದಾರೆ.
ನಟಿ, ಮಾಜಿ ಬಿಗ್‌ಬಾಸ್...
Dharwad News: ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಶಿರಹಟ್ಟಿಯ ಶ್ರೀ ಜಗದ್ಗುರು ಫಕೀರ ದಿಂಗಾಲೇಶ್ವರ ಶ್ರೀಗಳು ಸುದ್ದಿಗೋಷ್ಠಿ ನಡೆಸಿದ್ದಾರೆ.
ಕಳೆದ ಬುಧವಾರದಂದು ಹುಬ್ಬಳ್ಳಿ ಮೂರು ಸಾವಿರ ಮಠದಲ್ಲಿ ಸುದ್ದಿಗೋಷ್ಠಿ ನಡೆಸಿ, ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿಯನ್ನು ಬದಲಾವಣೆ ಮಾಡಬೇಕು ಎಂದು ಗಡುವು ನೀಡಿದ್ದರು. ಇಂದು ದಿಂಗಾಲೇಶ್ವರ ಶ್ರೀಗಳು ಮತ್ತೊಮ್ಮೆ ಸುದ್ದಿಗೋಷ್ಠಿ ಮಾಡಿದ್ದು, ಮಾರ್ಚ್ 31 ಕ್ಕೆ...
Hubli News: ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಈಗ ಶಬ್ದ ಮಾಲಿನ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದೆ. ಬೈಕ್ ಮೂಲಕ ಕರ್ಕಶ ಶಬ್ದ ಮಾಡಿ ಅವಳಿನಗರದಲ್ಲಿ ಶಬ್ದ ಮಾಲಿನ್ಯ ಮಾಡುವ ಬೈಕ್ ಸವಾರರಿಗೆ ಬಿಸಿ ಮುಟ್ಟಿಸಿದ್ದಾರೆ.
ಡಿಸಿಪಿ ಟ್ರಾಫಿಕ್ ಆ್ಯಂಡ್ ಕ್ರೈಮ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಕರ್ಕಶ ಶಬ್ದ ಮಾಡುವ ಬೈಕ್ ಸವಾರರ ಬೈಕ್...
Hassan News: ಹಾಸನ : ಬೈಕ್‌ನಿಂದ ಆಯತಪ್ಪಿ ಬಿದ್ದು ಹೆಡ್‌ಕಾನ್ಸ್‌ಟೇಬಲ್ ಸಾವನ್ನಪ್ಪಿದ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ, ಜೋಡಿಗುಬ್ಬಿ ಕ್ರಾಸ್ ಬಳಿ ಈ ಘಟನೆ ನಡೆದಿದೆ.
ವೆಂಟೇಶ್ (55) ಸಾವನ್ನಪ್ಪಿದ ಹೆಡ್‌ಕಾನ್ಸ್‌ಟೇಬಲ್ ಆಗಿದ್ದು, ಇವರು ಕೊಣನೂರು ಪೊಲೀಸ್ ಠಾಣೆಯಲ್ಲಿ ಹೆಡ್‌ಕಾನ್ಸ್‌ಟೇಬಲ್ ಆಗಿದ್ದರು. ಸಮನ್ಸ್ ನೀಡಿ ಬೈಕ್‌ನಲ್ಲಿ ಪೊಲೀಸ್ ಠಾಣೆಗೆ ವಾಪಾಸ್ಸಾಗುತ್ತಿದ್ದ ವೇಳೆ ಈ...