Sunday, July 26, 2026

karnataka tv

ರಾಹುಲ್ ಗಾಂಧಿ ಹುಟ್ಟಹಬ್ಬಕ್ಕೆ ಶುಭಾಶಯ ಕೋರಿದ ಪ್ರಧಾನಿ ಮೋದಿ

ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹುಟ್ಟುಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ. ಟ್ವೀಟ್ ಮೂಲಕ ಶುಭಾಶಯ ಕೋರಿರುವ ಪ್ರಧಾನಿ ನರೇಂದ್ರ ಮೋದಿ, 'ಶ್ರೀ ರಾಹುಲ್ ಗಾಂಧಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು. ದೇವರು ನಿಮಗೆ ಆರೋಗ್ಯ ಮತ್ತು ದೀರ್ಘಾಯುಷ್ಯವರನ್ನು ಆಶೀರ್ವದಿಸಲಿ' ಅಂತ ಹೇಳಿದ್ದಾರೆ. https://twitter.com/narendramodi/status/1141177274772983808 ಅಂದು ಕಾಲೆಳೆದವರ ಜೊತೆಯೇ ಇಂದು ಪೋಸ್..!!ಎಲ್ರ ಕಾಲೆಳಿತದೆ ಕಾಲ.. ! ಮಿಸ್...

ಸುಮಲತಾ ಪರ ಪ್ರಚಾರ ಮಾಡಿದೋರ ಮೇಲೆ ಕ್ರಮ ಯಾಕಿಲ್ಲ..?- ರೋಷನ್ ಬೇಗ್ ಕಿಡಿ

ಬೆಂಗಳೂರು: ಕಾಂಗ್ರೆಸ್ ನಾಯಕರ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿದ್ದ ಶಾಸಕ, ಮಾಜಿ ಸಚಿವ ರೋಷನ್ ಬೇಗ್ ಮತ್ತೆ ತಮ್ಮ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ. ನಾನು ಸತ್ಯ ಹೇಳಿದ್ದು ಪಕ್ಷ ವಿರೋಧಿ ಚಟುವಟಿಕೆಯಾದ್ರೆ ಸುಮಲತಾ ಪರ ಪ್ರಚಾರ ಮಾಡಿದ್ದವರ ಮೇಲೆ ಕ್ರಮ ಯಾಕೆ ಕೈಗೊಳ್ಳಲಿಲ್ಲ ಅಂತ ಕಿಡಿ ಕಾರಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೋಷನ್ ಬೇಗ್,...

‘ಬೇಗ್ ವಿರುದ್ಧ ಕ್ರಮ ಸರಿಯಾಗೇ ಇದೆ’- ಸಚಿವ ಕೃಷ್ಣ ಭೈರೇಗೌಡ ಸಮರ್ಥನೆ

ಶಿವಮೊಗ್ಗ: ಸರ್ಕಾರ ಉಳಿಸಿಕೊಳ್ಳೋದಕ್ಕೆ ಕೆಲ ಕಾಂಗ್ರೆಸ್ ನಾಯಕರ ಉದ್ಧಟತನ ಸಹಿಸಿಕೊಳ್ಳಲು ಸಾಧ್ಯವಿಲ್ಲ. ರೋಷನ್ ಬೇಗ್ ಅಮಾನತು ಮಾಡಿರೋದು ಸರಿಯಾಗಿಯೇ ಇದೆ ಅಂತ ಸಚಿವ ಕೃಷ್ಣ ಭೈರೇಗೌಡ ಸಮರ್ಥಿಸಿಕೊಂಡಿದ್ದಾರೆ. ಶಿವಮೊಗ್ಗ ನಗರದಲ್ಲಿ ಮಾತನಾಡಿದ ಸಚಿವ ಕೃಷ್ಣ ಭೈರೇಗೌಡ, ಶಾಸಕರಾದ ರೋಷನ್ ಬೇಗ್, ರಮೇಶ್ ಜಾರಕಿಹೊಳಿ ಮೈತ್ರಿ ಸರ್ಕಾರದ ಬಗ್ಗೆ ಎಲ್ಲೆ ಮೀರಿ ಮಾತನಾಡುತ್ತಿದ್ದಾರೆ. ಸರ್ಕಾರದ ವಿರುದ್ಧ...

ಪಾಕ್ ಕ್ಯಾಪ್ಟನ್ ಎಚ್ಚರಿಕೆ..! ನಾನೊಬ್ಬನೆ ಮನೆಗೆ ಹೋಗಲ್ಲ..!

ಭಾರತ ವಿರುದ್ಧ ಹೀನಾಯವಾಗಿ ಸೋಲು ಕಂಡಿರುವ ಪಾಕ್ ಕ್ರಿಕೆಟ್ ತಂಡ ವ್ಯಾಪಕ ಟೀಕೆಗೆ ಗುರಿಯಾಗಿದೆ.. ಪಾಕಿಸ್ತಾನ ಆಟಗಾರರನ್ನ ಭಾರತೀಯ ಕ್ರಿಕೆಟ್ ಪ್ರೇಮಿಗಳು ಟ್ರೋಲ್ ಮಾಡ್ತಿದ್ರೆ, ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಅಕ್ಷರಶಃ ರೊಚ್ಚಿಗೆದ್ದಿದ್ದಾರೆ.. ಟಾಸ್ ಗೆದ್ದರೂ ಫೀಲ್ಡಿಂಗ್ ಆಯ್ದುಕೊಂಡ ಸರ್ಫರಾಜ್ ನಡೆ ವ್ಯಾಪಕ ಟೀಕೆಗೆ ಗುರಿಯಾಗಿದೆ.. ತಂಡದ ಆಟಗಾರರು ಸಹ ಸರ್ಫರಾಜ್ ಆಯ್ಕೆಯನ್ನ ಟೀಕಿಸಿದ್ದಾರೆ.. ಈ ನಡುವೆ...

ಕಾಂಗ್ರೆಸ್ ನಿಂದ ರೋಷನ್ ಬೇಗ್ ಅಮಾನತು

ಬೆಂಗಳೂರು: ಕಾಂಗ್ರೆಸ್ ನಾಯಕರ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗವುಂಟುಮಾಡಿದ್ದ ಮಾಜಿ ಸಚಿವ ರೋಷನ್ ಬೇಗ್ ರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಕಾಂಗ್ರೆಸ್ ನಾಯಕರು ಅಲ್ಪಸಂಖ್ಯಾತರನ್ನು ಕಡೆಗಣಿಸುತ್ತಿರೋದೇ ಕಾಂಗ್ರೆಸ್ ನ ದುಸ್ಥಿಗೆ ಕಾರಣ ಅಂತ ಹೇಳಿಕೆ ನೀಡಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ ಮತ್ತು ವೇಣುಗೋಪಾಲ್ ವಿರುದ್ಧ ಬಹಿರಂಗವಾಗಿ ಅವಹೇಳನ ಮಾಡಿದ್ದ ಕಾಂಗ್ರೆಸ್...

ನಟ ಯಶ್ ತಾಯಿ ಪುಷ್ಪಾ ಮೇಲಿನ ಎಫ್ಐಆರ್ ರದ್ದು

ಬೆಂಗಳೂರಿನಲ್ಲಿ: ರಾಕಿಂಗ್ ಸ್ಟಾರ್ ಯಶ್ ಬಾಡಿಗೆ ಮನೆ ಡ್ಯಾಮೇಜ್ ವಿವಾದ ಕುರಿತಂತೆ ಯಶ್ ತಾಯಿ ವಿರುದ್ಧ ದಾಖಲಾಗಿದ್ದ ಎಫ್ ಐಆರ್ ರದ್ದುಗೊಳಿಸಿ ಹೈಕೋರ್ಟ್ ಆದೇಶ ನೀಡಿದೆ. ಬಾಡಿಗೆ ಮನೆ ಖಾಲಿ ಮಾಡುವ ವೇಳೆ ಮನೆಯ ಒಳಗೆ ಕಪಾಟುಗಳು, ಕಮೋಡ್, ಸಿಂಕ್ , ಟೈಲ್ಸ್ ಸೇರಿದಂತೆ ಇತರೆಡೆ ಡ್ಯಾಮೇಜ್ ಮಾಡಿದ್ರು ಅಂತ ಆರೋಪಿಸಲಾಗಿತ್ತು. ಮನೆಯ ಬಾಡಿಗೆ...

ಸದ್ದಿಲ್ಲದೆ ನಡೀತಿದೆ ಆಪರೇಷನ್ ಕಮಲ- ಸಿಎಂ ಕುಮಾರಸ್ವಾಮಿ ಹೊಸ ಬಾಂಬ್..!

ಬೆಂಗಳೂರು: ಮೈತ್ರಿ ಸರ್ಕಾರವನ್ನು ಪತನಗೊಳಿಸೋ ನಿಟ್ಟಿನಲ್ಲಿ ಬಿಜೆಪಿ ಮೈತ್ರಿ ಶಾಸಕರಿಗೆ 10 ಕೋಟಿ ನೀಡುವ ಆಮಿಷವೊಡ್ಡಿ ಸೆಳೆಯಲು ಡೀಲ್ ಮಾಡ್ತಿದೆ ಅಂತ ಸಿಎಂ ಕುಮಾರಸ್ವಾಮಿ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ, ರಾತ್ರಿ 11 ಗಂಟೆಗೆ ಬಿಜೆಪಿಯ ಪ್ರಮುಖ ಮುಖಂಡರು ಮೈತ್ರಿ ಶಾಸಕರಿಗೆ ಕರೆ ಮಾಡಿ ಈಗಾಗಲೇ ಮೈತ್ರಿ ಪಕ್ಷದ 10...

ಮೃತ ರೈತನ ಕುಟುಂಬಕ್ಕೆ ಸಿಎಂ ಸಾಂತ್ವನ- 5 ಲಕ್ಷ ರೂಪಾಯಿ ಪರಿಹಾರ

ಮಂಡ್ಯ: ಜಿಲ್ಲೆಯ ಸಂತೇಬಾಚಳ್ಳಿಯ ಅಘಲಯ ಗ್ರಾಮದಲ್ಲಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿದ್ದ ರೈತ ಸುರೇಶ್ ಕುಟುಂಬಸ್ಥರನ್ನು ಸಿಎಂ ಭೇಟಿ ಮಾಡಿ ಸಾಂತ್ವನ ಹೇಳಿದ್ರು. ಮೃತ ಸುರೇಶ್ ಕುಟುಂಬದವರಿಗೆ ಸಿಎಂ ಕುಮಾರಸ್ವಾಮಿ  5 ಲಕ್ಷ ಪರಿಹಾರ ನೀಡಿದ್ದಾರೆ. ಅಷ್ಟೇ ಅಲ್ಲದೆ ವಿದ್ಯಾಭ್ಯಾಸ ಮುಗಿದ ಬಳಿಕ ಸುರೇಶ್ ಪುತ್ರಿ ಸುವರ್ಣ ಹಾಗೂ ಪುತ್ರ ಚಂದ್ರಶೇಖರ್ ಗೆ ಸರ್ಕಾರಿ ಕೆಲಸ...

‘ನಿಖಿಲ್, ಪ್ರಜ್ವಲ್ ತೆರೆಮರೆಗೆ ಸರಿಯೋದು ಉತ್ತಮ’- ವೈಎಸ್ ವಿ ದತ್ತಾ ಅಚ್ಚರಿಯ ಹೇಳಿಕೆ..!

ಬೆಂಗಳೂರು: ಜೆಡಿಎಸ್ ನ ಯುವ ಮುಖಂಡರಾದ ನಿಖಿಲ್ ಮತ್ತು ಪ್ರಜ್ವಲ್ ರೇವಣ್ಣಾಗೆ ಈಗಾಗಲೇ ಸಾಕಷ್ಟು ಪ್ರಚಾರ ಸಿಕ್ಕಿದೆ. ಹೀಗಾಗಿ ಅವರು ತೆರೆ ಮರೆಯಲ್ಲಿರೋದು ಸೂಕ್ತ ಅನ್ನೋ ಮೂಲಕ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ ದತ್ತಾ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಕುಟುಂಬ ರಾಜಕಾರಣಕ್ಕೆ ಖ್ಯಾತಿ ಪಡೆದಿರೋ ಜೆಡಿಎಸ್ ನೊಳಗೇ ಕುಟುಂಬ ರಾಜಕಾರಣಕ್ಕೆ ಸಣ್ಣದೊಂದು ಭಿನ್ನರಾಗ...

ಅಮೆರಿಕದಿಂದ ‘ಅನ್ಯಗ್ರಹ ಜೀವಿ’ಗಳನ್ನು ಹೊರಹಾಕ್ತಾರಂತೆ ಟ್ರಂಪ್..!

ಅಮೆರಿಕ: ಅಕ್ರಮ ವಲಸಿಗರನ್ನು ಅಮೆರಿಕದಿಂದ ಹೊರದಬ್ಬುವ ಕೆಲಸಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೃಢ ನಿರ್ಧಾರ ಕೈಗೊಂಡಿದ್ದಾರೆ. ಅಲ್ಲದೆ ವಲಸಿಗರನ್ನು ಅನ್ಯಗ್ರಹ ಜೀವಿಗಳಿಗೆ ಹೋಲಿಕೆ ಮಾಡೋ ಮೂಲಕ ಕಿಡಿ ಕಾರಿದ್ದಾರೆ. ಅಕ್ರಮ ವಲಸಿಗರನ್ನು ಪ್ರಾಣಿಗಳು ಅಂತ ಮೂದಲಿಸಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಅವರನ್ನು 'ಅನ್ಯಗ್ರಹ ಜೀವಿಗಳು' ಅಂತ ಕರೆದಿದ್ದಾರೆ....
- Advertisement -spot_img

Latest News

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ ಮಾಜಿ ಸಿಎಂ

Political News: ನೀಟ್ ಪರೀಕ್ಷೆಯ ಪೇಪರ್ ಲೀಕ್ ಕೇಸ್‌ಗೆ ಸಂಬಂಧಿಸಿದಂತೆ ಇಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ತಮ್ಮಎಕ್ಸ್ ಖಾತೆಯಲ್ಲಿ...
- Advertisement -spot_img