ಅಮೆರಿಕ: ಅಕ್ರಮ ವಲಸಿಗರನ್ನು ಅಮೆರಿಕದಿಂದ ಹೊರದಬ್ಬುವ ಕೆಲಸಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೃಢ ನಿರ್ಧಾರ ಕೈಗೊಂಡಿದ್ದಾರೆ. ಅಲ್ಲದೆ ವಲಸಿಗರನ್ನು ಅನ್ಯಗ್ರಹ ಜೀವಿಗಳಿಗೆ ಹೋಲಿಕೆ ಮಾಡೋ ಮೂಲಕ ಕಿಡಿ ಕಾರಿದ್ದಾರೆ.
ಅಕ್ರಮ ವಲಸಿಗರನ್ನು ಪ್ರಾಣಿಗಳು ಅಂತ ಮೂದಲಿಸಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಅವರನ್ನು ‘ಅನ್ಯಗ್ರಹ ಜೀವಿಗಳು’ ಅಂತ ಕರೆದಿದ್ದಾರೆ. ಮಧ್ಯ ಅಮೆರಿಕ ಹಾಗೂ ಮೆಕ್ಸಿಕೋದಿಂದ ಅತ್ಯಧಿಕವಾಗಿ ಅಮರಿಕದಲ್ಲಿ ಅಕ್ರಮವಾಗಿ ವಲಸಿಗರು ನೆಲೆಸಿದ್ದಾರೆ. ಇದನ್ನು ನಿಭಾಯಿಸೋದೇ ಅಮೆರಿಕಕ್ಕೆ ದೊಡ್ಡ ತಲೆನೋವಾಗಿದೆ. ವಲಸಿಗರನ್ನು ದೇಶದಿಂದ ಹೊರದಬ್ಬಲು ಟ್ರಂಪ್ ಇದೀಗ ಮೆಕ್ಸಿಕೋ ಮತ್ತು ಗ್ವಾಟೆಮಾಲಾ ಸಹಯೋಗದೊಂದಿಗೆ ವಲಸಿಗರ ಅಕ್ರಮ ವಾಸ್ತವ್ಯಕ್ಕೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಈ ವಾರ ಕಾರ್ಯಾಚರಣೆ ಶುರುವಾಗಲಿದ್ದು ಸುಮಾರು 12 ಮಿಲಿಯನ್ ಅಕ್ರಮ ವಲಸಿಗರನ್ನು ಹೊರಗಟ್ಟಲಿದ್ದಾರೆ ಟ್ರಂಪ್.
ಇನ್ನು ಮೆಕ್ಸಿಕೋ ಪ್ರಜೆಗಳ ಅಕ್ರಮ ವಾಸ್ತವ್ಯ ಕುರಿತಾದ ಪ್ರಕರಣಗಳು ಇತ್ಯರ್ಥವಾಗೋವರೆಗೂ ಮಧ್ಯ ಅಮೆರಿಕಾದ ವಲಸಿಗರಿಗೆ ಆಶ್ರಯ ನೀಡೋದಾಗಿ ಮೆಕ್ಸಿಕೋ ಒಪ್ಪಿಕೊಂಡಿದೆ. ಅಲ್ಲದೆ ಮಧ್ಯ ಅಮೆರಿಕಾದಿಂದ ಅಕ್ರಮ ವಲಸಿಗರು ಪ್ರವೇಶಿಸದಂತೆ ರಾಷ್ಟ್ರೀಯ ಭದ್ರತಾ ಪಡೆಯನ್ನು ನಿಯೋಜಿಸೋ ಜವಾಬ್ದಾರಿಯನ್ನು ಮೆಕ್ಸಿಕೋ ವಹಿಸಿಕೊಂಡಿದೆ. ಒಂದು ವೇಳೆ ಜವಾಬ್ದಾರಿ ನಿಭಾಯಿಸಲು ವಿಫಲವಾದ್ರೆ ಅಮೆರಿಕಾಕ್ಕೆ ಬರುವ ಮೆಕ್ಸಿಕೋ ಸರಕುಗಳ ಮೇಲೆ ಹೆಚ್ಚಿನ ಶುಲ್ಕ ವಿಧಿಸೋ ಷರತ್ತು ಹಾಕೋ ಮೂಲಕ ಟ್ರಂಪ್ ಎಚ್ಚರಿಸಿದ್ದಾರೆ.
ಅಮೆರಿಕಾದಲ್ಲಿ ಸಾಧನೆ ಮಾಡಿದ ಕನ್ನಡಿಗ ವಿಜಯ್ ಪ್ರಕಾಶ್..!! ಮಿಸ್ ಮಾಡದೇ ಈ ವಿಡಿಯೋ ನೋಡಿ