ಬೆಂಗಳೂರು: ನಿನ್ನೆ ರಾತ್ರಿವರೆಗೂ ಕಾಂಗ್ರೆಸ್ ನಾಯಕರಿಗೆ ಸಾಥ್ ನೀಡಿದ್ದ ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ಇದೀಗ ದಿಢೀರನೆ ಮುಂಬೈ ಸೇರಿದ್ದಾರೆ. ಶ್ರೀಮಂತ್ ಪಾಟೀಲ್ ರವರಿಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಂಬೈನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದಿನ ವಿಶ್ವಾಸಮತಕ್ಕೆ ಹಾಜರಾಗಲಿದ್ದ ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ಇಂದು ಮುಂಬೈನಲ್ಲಿ...
ಬೆಂಗಳೂರು: ಅತೃಪ್ತ ಶಾಸಕರ ಅರ್ಜಿ ಕುರಿತು ಇಂದು ಸುಪ್ರೀಂಕೋರ್ಟ್ ನೀಡಿರುವ ಮಧ್ಯಂತರ ತೀರ್ಪಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪಿನ ಕುರಿತು ಟ್ವೀಟ್ ಮಾಡಿರುವ ಕೆಪಿಪಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಅತೃಪ್ತ ಶಾಸಕರು ವಿಪ್ ಉಲ್ಲಂಘನೆ ಮಾಡಲು ಸಹಕಾರಿಯಾಗಲೆಂದೇ ಸುಪ್ರೀಂ ಕೋರ್ಟ್ ಆದೇಶ ನೀಡಿದಂತಿದೆ ಅಂತ ಅಸಮಾಧಾನ ಹೊರಹಾಕಿದ್ದಾರೆ.
ಬಳಿಕ ಮತ್ತೊಂದು ಟ್ವೀಟ್...
ಬೆಂಗಳೂರು: ರಾಜ್ಯ ರಾಜಕೀಯ ಬಿಕ್ಕಟ್ಟಿಗೆ ತಾವು ಕಾರಣ ಅನ್ನೋ ಆರೋಪಕ್ಕೆ ಇಂದು ಸಚಿವ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಕೊಟ್ಟಿರುವ ಕೆಲಸವನ್ನು ನಾನು ಮಾಡ್ತಿದ್ದೇನೆ ಹೊರತು ಬೇರೆ ಯಾವ ಇಲಾಖೆಯಲ್ಲೂ ಹಸ್ತಕ್ಷೇಪ ಮಾಡಿಲ್ಲ ಅಂತ ಹೇಳಿದರು. ಅಲ್ಲದೆ ತಮ್ಮ ಮೇಲೆ ದೈವ ಹಾಗೂ ತಂದೆ ತಾಯಿ ಆಶೀರ್ವಾದ ಇದೆ ಹೀಗಾಗಿ ನನಗೆ ಯಾವ ನಿಂಬೆಹಣ್ಣೂ...
ನವದೆಹಲಿ: ತಮ್ಮ ರಾಜೀನಾಮೆ ಕುರಿತಾಗಿ ವಿಧಾನಸಭಾ ಸ್ಪೀಕರ್ ವಿಳಂಬ ಮಾಡುತ್ತಿದ್ದಾರೆಂದು ಅತೃಪ್ತ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ನಾಳೆಗೆ ಕಾಯ್ದಿರಿಸಿದೆ.
ಇಂದು ಬೆಳಗ್ಗಿನಿಂದಲೂ ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠ, ಅತೃಪ್ತ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ಮತ್ತು ಸ್ಪೀಕರ್ ಪರ ವಕೀಲ ಅಭಿಷೇಕ್ ಮನು...
ಮುಂಬೈ: ಸ್ಪೀಕರ್ ಸೂಚನೆಯಂತೆ ಕ್ರಮಬದ್ಧವಾಗಿ ರಾಜೀನಾಮೆ ನೀಡಿ ಮತ್ತೆ ಮುಂಬೈ ಸೇರಿರುವ ಅತೃಪ್ತ ಶಾಸಕರು ಇದೀಗ ಟೆಂಪಲ್ ರನ್ ಮಾಡ್ತಿದ್ದಾರೆ. ಇಂದು ಶಿರಡಿಯಲ್ಲಿರುವ ಸಾಯಿ ಬಾಬಾ ಸನ್ನಿಧಿಗೆ ತೆರಳಿ ಬಾಬಾ ದರ್ಶನ ಪಡೆದಿದ್ರು.
ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ಕಾಂಗ್ರೆಸ್-ಜೆಡಿಎಸ್ ಶಾಸಕರಾದ ಮಹೇಶ್ ಕುಮಟಳ್ಳಿ, ಎಚ್.ವಿಶ್ವನಾಥ್, ಶಿವರಾಮ್ ಹೆಬ್ಬಾರ್,ರಮೇಶ್ ಜಾರಕಿಹೊಳಿ, ನಾರಾಯಣಗೌಡ, ಬಿ.ಸಿ ಪಾಟೀಲ್, ಕೆ.ಗೋಪಾಲಯ್ಯ,...
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಎದುರಾಗಿರುವ ಬಿಕ್ಕಟ್ಟಿಗೆ ಬಿಜೆಪಿ ಕಾರಣ ಅಲ್ಲವೇ ಅಲ್ಲ. ಆದ್ರೆ ಪಕ್ಷೇತರರ ಬೆಂಬಲ ಮಾತ್ರ ಕೇಳಿದೆವು ಅಂತ ಮಾಜಿ ಡಿಸಿಎಂ, ಬಿಜೆಪಿ ಶಾಸಕ ಆರ್. ಅಶೋಕ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಆಶೋಕ್,ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ ಮತ್ತು ಡಿಕೆಶಿ ಅತೃಪ್ತರ ಸಮಸ್ಯೆ ಆಲಿಸದೆ ನಿರ್ಲಕ್ಷ್ಯ ಮಾಡಿದ್ದೇ ರಾಜ್ಯದಲ್ಲಿ ಇಂತಹ ಪರಿಸ್ಥಿತಿ ಎದುರಾಗಲು ಕಾರಣವಾಗಿದೆ....
ನವದೆಹಲಿ: ಕಳೆದೊಂದು ವಾರದಿಂದ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಅತೃಪ್ತ ಶಾಸಕರ ಮುಂಬೈ ವಾಸ್ತವ್ಯಕ್ಕೆ ಇಂದು ಸುಪ್ರೀಂ ಕೋರ್ಟ್ ತೆರೆ ಎಳೆದಿದೆ. ಇಂದು ಸಂಜೆಯೊಳಗೆ ಬೆಂಗಳೂರಿಗೆ ತೆರಳಿ ಸ್ಪೀಕರ್ ಭೇಟಿಯಾಗುವಂತೆ ಸುಪ್ರೀಂ ಕೋರ್ಟ್ ಅತೃಪ್ತ ಶಾಸಕರಿಗೆ ಸೂಚನೆ ನೀಡಿದೆ.
ರಾಜ್ಯದಲ್ಲಿ ಬಿಕ್ಕಟ್ಟಿಗೆ ಕಾರಣರಾಗಿರೋ ಅತೃಪ್ತ ಶಾಸಕರು ಇಂದು ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಸ್ಪೀಕರ್ ರಾಜೀನಾಮೆ ಅಂಗೀಕಾರ ಮಾಡೋದಕ್ಕೆ ಇಲ್ಲ...
ಬೆಂಗಳೂರು: ಶಾಸಕರ ಸಾಲು ಸಾಲು ರಾಜೀನಾಮೆಯಿಂದ ಸರ್ಕಾರ ಸಂಖ್ಯಾಬಲವನ್ನೇ ಕಳೆದುಕೊಂಡಿದ್ದು ಸಿಎಂ ರಾಜೀನಾಮೆ ನೀಡಬೇಕು ಅನ್ನೋ ಬಿಜೆಪಿ ಒತ್ತಾಯಕ್ಕೆ ಪ್ರತಿಕ್ರಿಯೆ ನೀಡಿರೋ ಕುಮಾರಸ್ವಾಮಿ, ನಾನೇಕೆ ರಾಜೀನಾಮೆ ಕೊಡಬೇಕು ಅಂತ ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಕೆ.ಕೆ ಗೆಸ್ಟ್ ಹೌಸ್ ಬಳಿ ಕಾಂಗ್ರೆಸ್ ನಾಯಕರೊಂದಿಗೆ ಚರ್ಚೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಎಚ್. ಡಿ ಕುಮಾರಸ್ವಾಮಿ, ನಾನ್ಯಾಕೆ ರಾಜೀನಾಮೆ...
ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ ಕುರಿತಾಗಿ ಸ್ಪೀಕರ್ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಅನ್ನೋ ಆರೋಪಕ್ಕೆ ಸ್ಪೀಕರ್ ರಮೇಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ರಾಜೀನಾಮೆ ಅಂಗೀಕಾರ ವಿಚಾರದಲ್ಲಿ ಬಿಜೆಪಿಯವರು ಅವಸರ ಯಾಕೆ ಅಂತ ಪ್ರಶ್ನಿಸಿದ್ದಾರೆ.
ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಶಾಸಕರ ರಾಜೀನಾಮೆ ಅಂಗೀಕರಿಸೋ ವಿಚಾರದಲ್ಲಿ ಪಕ್ಷದ ನಾಯಕರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಅನ್ನೋ ಬಿಜೆಪಿ ಆರೋಪಕ್ಕೆ...
ಬೆಂಗಳೂರು: ಮುಂಬೈನಲ್ಲಿರೋ ಅತೃಪ್ತ ಶಾಸಕರೆಲ್ಲರೂ ನನ್ನ ಸ್ನೇಹಿತರು ಅವರಿಗೆ ತಿಳುವಳಿಕೆ ಹೇಳಿ ವೈಯಕ್ತಿಕವಾಗಿ ಮಾತನಾಡಿಕೊಂಡು ಬರ್ತೀನಿ ಅಂತ ಬಹಳ ಹುಮ್ಮಸ್ಸಿನಿಂದ ಮುಂಬೈಗೆ ತೆರಳಿದ್ದ ಸಚಿವ ಡಿಕೆಶಿ ಇದೀಗ ಬರಿಗೈಲಿ ವಾಪಸ್ಸಾಗಲಿದ್ದಾರೆ.
ಇಂದು ಬೆಳಗ್ಗೆ 8 ಗಂಟೆ ವೇಳೆಗೆ ಅತೃಪ್ತರು ತಂಗಿದ್ದ ರಿನೈಸೆನ್ಸ್ ಹೋಟೆಲ್ ಒಳಕ್ಕೆ ಹೋಗಲು ಯತ್ನಸಿದ್ದ ಸಚಿವ ಡಿಕೆಶಿಗೆ ಮುಂಬೈ ಪೊಲೀಸರು ತಡೆಯೊಡ್ಡಿದ್ರು....