Thursday, June 1, 2023

Latest Posts

ಬಾಬಾ ಪಾದಕ್ಕೆರಗಿದ ಅತೃಪ್ತರು..!

- Advertisement -

ಮುಂಬೈ: ಸ್ಪೀಕರ್ ಸೂಚನೆಯಂತೆ ಕ್ರಮಬದ್ಧವಾಗಿ ರಾಜೀನಾಮೆ ನೀಡಿ ಮತ್ತೆ ಮುಂಬೈ ಸೇರಿರುವ ಅತೃಪ್ತ ಶಾಸಕರು ಇದೀಗ ಟೆಂಪಲ್ ರನ್ ಮಾಡ್ತಿದ್ದಾರೆ. ಇಂದು ಶಿರಡಿಯಲ್ಲಿರುವ ಸಾಯಿ ಬಾಬಾ ಸನ್ನಿಧಿಗೆ ತೆರಳಿ ಬಾಬಾ ದರ್ಶನ ಪಡೆದಿದ್ರು.

ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ಕಾಂಗ್ರೆಸ್-ಜೆಡಿಎಸ್ ಶಾಸಕರಾದ ಮಹೇಶ್ ಕುಮಟಳ್ಳಿ, ಎಚ್.ವಿಶ್ವನಾಥ್, ಶಿವರಾಮ್ ಹೆಬ್ಬಾರ್,ರಮೇಶ್ ಜಾರಕಿಹೊಳಿ, ನಾರಾಯಣಗೌಡ, ಬಿ.ಸಿ ಪಾಟೀಲ್, ಕೆ.ಗೋಪಾಲಯ್ಯ, ಪ್ರತಾಪಗೌಡ ಪಾಟೀಲ್, ಪಕ್ಷೇತರ ಶಾಸಕ ಶಂಕರ್, ಎಸ್.ಟಿ ಸೋಮಶೇಖರ್, ಭೈರತಿ ಬಸವರಾಜ್ ಇಂದು ಶಿರಡಿಗೆ ತೆರಳಿ ಸಾಯಿ ಬಾಬಾ ದರ್ಶನ ಪಡೆದ್ರು. ಅನರ್ಹತೆಯ ತೂಗುಗತ್ತಿ ತೂಗುತ್ತಿರೋ ಮಧ್ಯೆ ಅತೃಪ್ತ ಶಾಸಕರು ಬಾಬಾ ಮಂದಿರಕ್ಕೆ ಭೇಟಿ ನೀಡಿ ಬಾಬಾ ಪಾದಕ್ಕೆ ನಮಸ್ಕರಿಸಿ ಪ್ರಾರ್ಥನೆ ಸಲ್ಲಿಸಿದ್ರು.

ಇನ್ನು ವಿಶೇಷ ದರ್ಶನ ಪಡೆದ ಶಾಸಕರಿಗೆ ದೇವಸ್ಥಾನದ ಆಡಳಿತ ಮಂಡಳಿಯವರು ಸನ್ಮಾನ ಮಾಡಿ ಬಾಬಾ ಮೂರ್ತಿಯನ್ನು ನೆನಪಿನ ಕಾಣಿಯನ್ನಾಗಿ ನೀಡಿದ್ರು.

ಅತೃಪ್ತರಿಗೆ ಆಟ, ಯಡಿಯೂರಪ್ಪಾಗೆ ಪ್ರಾಣಸಂಕಟ..! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=ezK-AnnKDnE
- Advertisement -

Latest Posts

Don't Miss