ಇಂದ್ರಲೋಕದಲ್ಲಿ ನಡೆದ ಪ್ರಸಂಗ ಕೇಳುವಾಗ, ಅದರಲ್ಲಿ ಬರುವ ಅಪ್ಸರೆಯರಲ್ಲಿ ಊರ್ವಶಿ ಕೂಡ ಒಬ್ಬರು. ಸುಂದರಿಯಾದ ಊರ್ವಶಿ ಇಂದ್ರಲೋಕದಲ್ಲಿ ನರ್ತಕಿಯಾಗಿದ್ದವಳು. ಆದರೆ ಕೆಲ ಕಥೆಗಳ ಪ್ರಕಾರ, ಊರ್ವಶಿ ಪಾಪದ ಕೆಲಸಗಳನ್ನು ಮಾಡಿದವಳಂತೆ. ಆದರೂ ಕೂಡ ಆಕೆಗೆ ಇಂದ್ರನ ಲೋಕದಲ್ಲಿ ಊರ್ವಶಿಯ ಸ್ಥಾನ ಸಿಕ್ಕಿತು. ಹಾಗಾದ್ರೆ ಪಾಪ ಮಾಡಿದ ಊರ್ವಶಿ ಅಪ್ಸರೆಯಾಗಿದ್ದು ಹೇಗೆ ಅಂತಾ ತಿಳಿಯೋಣ ಬನ್ನಿ..
ಹಿಂದೂ ಧರ್ಮದಲ್ಲಿ ತಿಥಿ ಮಾಡಲು ಕಾರಣವೇನು..?
ಊರ್ವಶಿ ಮೊದಲ ಜನ್ಮದಲ್ಲಿ ಮಾಲಿನಿ ಎಂಬ ಸೌಂದರ್ಯವತಿಯಾಗಿದ್ದಳು. ಆಕೆಯನ್ನು ಓರ್ವ ಸುಂದರ ಪುರುಷನೊಂದಿಗೆ ವಿವಾಹ ಮಾಡಿಕೊಡಲಾಯಿತು. ಆದರೂ ಕೂಡ ಮಾಲೀನಿ ಪತಿಯೊಂದಿಗೆ ಸಂಸಾರ ಮಾಡುತ್ತಿರಲಿಲ್ಲ. ಬೇರೆ ಪುರುಷರೊಂದಿಗೆ ಕಾಮಕೇಳಿ ಮಾಡುತ್ತಿದ್ದಳು. ಪತಿಯ ಮಾತನ್ನು ಕಡೆಗಣಿಸುತ್ತಿದ್ದಳು. ಹಾಗಾಗಿ ಕೊನೆ ಕೊನೆಗೆ ಆಕೆಯ ಮೈಯಲ್ಲಿ ಕೀಟಾಣುಗಳು ಹೆಚ್ಚಾಗತೊಡಗಿದವು. ಆಕೆಯ ಕೈ ಕಾಲು ಸ್ವಾಧೀನ ಕಳೆದುಕೊಂಡವು. ಕೊನೆಗೆ ರೋಗಿಷ್ಠಳಾಗಿ, ಮಾಲೀನಿ ಸಾವನ್ನಪ್ಪಿದ್ದಳು.
ನಂತರದ ಜನ್ಮದಲ್ಲಿ ಓರ್ವ ಬ್ರಾಹ್ಮಣನ ಮನೆಯಲ್ಲಿ ಸಾಕು ನಾಯಿಯಾಗಿ, ಮಾಲೀನಿ ಜನ್ಮ ಪಡೆದಳು. ಆವಾಗಲೂ ಆಕೆಯ ಮೈಮೇಲೆ ಹುಳುಗಳು ಹುಟ್ಟಿಕೊಂಡವು. ಒಮ್ಮೆ ಬ್ರಾಹ್ಮಣ ಸ್ನಾನ ಮುಗಿಸಿ, ತುಳಸಿಯ ಪೂಜೆ ಮಾಡಲು ಬಂದ. ಅವನ ಮೈಮೇಲಿನ ನೀರು ಅಲ್ಲೇ ಪಕ್ಕದಲ್ಲಿ ಕುಳಿತಿದ್ದ ನಾಯಿಯ ಮೈಮೇಲೆ ಬಿದ್ದು, ಅವಳ ರೋಗ ರುಜಿನಗಳೆಲ್ಲ ವಾಸವಾಯಿತು. ತನ್ನ ಪೂರ್ವ ಜನ್ಮದ ತಪ್ಪುಗಳೆಲ್ಲ ಅವಳಿಗೆ ನೆನಪಾಯಿತು.
ಅವಳು ಆ ಬ್ರಾಹ್ಮಣನಲ್ಲಿ, ನಾನು ಹಿಂದಿನ ಜನ್ಮದಲ್ಲಿ ನನ್ನ ಪತಿಗೆ ಮೋಸ ಮಾಡಿ, ಪರ ಪುರುಷರೊಂದಿಗೆ ಸಂಗ ಮಾಡಿದೆ. ಆ ಕಾರಣಕ್ಕೆ ನನಗೆ ರೋಗಗಳು ಬಂತು. ಮತ್ತು ಈ ಜನ್ಮದಲ್ಲಿ ನನಗೆ ಶ್ವಾನ ಯೋನಿಯಲ್ಲಿ ಜನ್ಮ ಸಿಕ್ಕಿತು. ಆದರೆ ನಾನು ಈ ಜನ್ಮದಿಂದ ಮುಕ್ತಿ ಹೊಂದ ಬೇಕೆಂದಿದ್ದೇನೆ. ನೀವು ನನಗೆ ಸಹಾಯ ಮಾಡಿ ಎನ್ನುತ್ತಾಳೆ. ಅದಕ್ಕೆ ಆ ಬ್ರಾಹ್ಮಣ, ಮಂತ್ರಾದಿಗಳನ್ನು ಹೇಳಿ, ಶುದ್ಧ ಜಲವನ್ನ ನಾಯಿಯ ಮೈಮೇಲೆ ಪ್ರೋಕ್ಷಣೆ ಮಾಡುತ್ತಾನೆ. ನಾಯಿ ಅಲ್ಲೇ ಸಾವನ್ನಪ್ಪುತ್ತದೆ.
ಮುಂದೆ ಊರ್ವಶಿಯಾಗಿ ಮಾನವ ಯೋನಿಯಲ್ಲಿ ಜನ್ಮ ತಾಳುತ್ತದೆ. ಈಕೆಯ ಸೌಂದರ್ಯ ನೋಡಿದ ಇಂದ್ರ ಮನಸೋತು, ಈಕೆಯನ್ನ ತನ್ನ ಆಸ್ಥಾನದ ನರ್ತಕಿಯಾಗಿ ಮಾಡಿಕೊಳ್ಳುತ್ತಾನೆ.