27 ಆಟಗಾರರನ್ನು ಉಳಿಸಿಕೊಂಡ ಹಳೆಯ ಫ್ರಾಂಚೈಸಿಗಳು. ಇನ್ನು ಜನವರಿ 22 ರೊಳಗಾಗಿ ಹೊಸ 2 ಫ್ರಾಂಚೈಸಿಗಳಾದ ಲಕ್ನೋ ಮತ್ತು ಅಹಮದಾಬಾದ್ ತಂಡಗಳು ತಮ್ಮ 2ಆಟಗಾಗರನ್ನು ಘೋಷಿಸಲಿವೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ನಾಯಕ ಶ್ರೇಯಸ್ ಅಯ್ಯರ್ ಅವರು ಹೊಸ ಫ್ರಾಂಚೈಸಿ ಸೇರಿಸಿಕೊಳ್ಳದೆ. ಮೆಗಾ ಹರಾಜಿನಲ್ಲಿ ಆಯ್ಕೆಯಾಗಲು ಬಯಸಿದ್ದಾರೆ.
ಈಗ ಹೊಸ ಫ್ರಾಂಚೈಸಿಗಳು ನಾಯಕನ ಹುಡುಕಾಟದಲ್ಲಿ ಶ್ರೇಯಸ್ ಅಯ್ಯರ್ ಮೇಲೆ ಕಣ್ಣಿಟ್ಟಿದೆ. ಇದರ ನಡುವೆ ರಾಯಲ್ ಚಾಲೆಂಜಸ್ ಬೆಂಗಳೂರು ತಂಡ ಅಯ್ಯರ್ ಮೇಲೆ ಒಂದು ಕಣ್ಣು ಇಟ್ಟಿದೆ. ಏಕೆಂದರೆ ಅಯ್ಯರ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಯಶಸ್ವಿಯಾಗಿ ಮುನ್ನಡೆಸಿದ್ದರು.
ಇದೇ ಸಂದರ್ಭದಲ್ಲಿ ಆರ್‌ಸಿಬಿ ನಾಯಕನ ಹುಡುಕಾಟದಲ್ಲಿದೆ. ಅಯ್ಯರ್ ಖರೀದಿಯಿಂದ ಆರ್‌ಸಿಬಿಗೆ ಮಧ್ಯಮ ಕ್ರಮಾಂಕದ ಆಟಗಾರಸಿಕ್ಕಾಗೆ ಆಗುತ್ತದೆ. ಇದರ ಜೊತೆಗೆ ಆರ್‌ಸಿಬಿಗೆ ಒಬ್ಬ ನಾಯಕ ಸಿಕ್ಕಾಗೆ ಆಗುತ್ತದೆ.
ಮತೊಂದೆಡೆ ಅಯ್ಯರ್ ಹೊಸ ಫ್ರಾಂಚೈಸಿಗಳ ಜೊತೆ ಒಪ್ಪಂದಕ್ಕೆ ಸಹಿ ಹಾಕುತ್ತಾರ ಇಲ್ಲ ನೋಡಬೇಕು. ಇದರ ನಡುವೆ ಕಳೆದ ಸೀಸನ್‌ನಲ್ಲಿ ಕೆಕೆಆರ್ ತಂಡದ ನಾಯಕನಾಗಿದ್ದ ಇಯಾನ್ ಮೊರ್ಗನ್ ಅವರನ್ನು ತಂಡದಿAದ ಕೈ ಬಿಡಲಾಗಿದೆ. ಹೀಗಾಗಿ ಕೆಕೆಆರ್ ಭಾರತೀಯ ಮೂಲದ ಆಟಗಾರನ ಖರೀದಿಗೆ ಹೆಚ್ಚಿನ ಒಲವು ಹೊಂದಿದೆ. ಇದರಿಂದ ಕಲ್ಕತ್ತಾ ನೈಟ್ ರೈಡರ್ಸ್ ಕೂಡ ಶ್ರೇಯಸ್ ಅಯ್ಯರ್ ಖರೀದಿಗೆ ಯೋಜನೆ ಮಾಡುತ್ತಿದೆ ಎನ್ನಬಹುದು.
ಇನೊಂದೆಡೆ ಪಂಜಾಬ್ ಕಿಂಗ್ಸ್ ತಂಡದಲ್ಲಿ ಶ್ರೇಯಸ್ ಅಯ್ಯರ್ ಹೆಸರು ಕೇಳಿ ಬರುತ್ತಿದೆ. ಏಕೆಂದರೆ ಕೆಎಲ್ ರಾಹುಲ್ ಸ್ಥಾನಕ್ಕೆ ನಮ್ಮ ಭಾರತೀಯ ಆಟಗಾರನನ್ನು ತುಂಬಲು ಪಂಜಾಬ್ ಬಯಸಿದೆ.
ಇತ್ತ ಶ್ರೇಯಸ್ ಅಯ್ಯರ್ ಅವರ ಖರೀದೆಗೆ ಈ 3 ಪ್ರಾಂಚೈಸಿಗಳು ಪೈಪೋಟಿ ನಡೆಸುವುದಂತು ನಿಜ. ಅಯ್ಯರ್ ಅವರು 2020ರಲ್ಲಿ ತಂಡವನ್ನು ಫೈನಲ್‌ಗೆ ಕರೆದೊಯ್ದಿದರು. ಇದರಿಂದ ಅಯ್ಯರ್ ನಾಯಕನಾಗಿ ಐಪಿಎಲ್‌ನಲ್ಲಿ ಯಶಸ್ವಿಯಾಗಿದ್ದಾರೆ. ಇದೇ ಕಾರಣದಿಂದ ಮೆಗಾ ಹರಾಜಿಗೂ ಮುನ್ನವೇ 3 ತಂಡಗಳು ಹಿಟ್‌ಲೀಸ್ಟ್ನಲ್ಲಿ ಅಯ್ಯರ್ ಹೆಸರು ಕೇಳಿಬರುತ್ತಿದೆ.