ತಂಗಿಯ ಮಗನನ್ನೇ ಕೊಂದು ಹೂತು ಹಾಕಿದ ದೊಡ್ಡಮ್ಮ!

Chikkaballapura Crime News: ಚಿಕ್ಕಬಳ್ಳಾಪುರ: ಆರು ವರ್ಷದ ಗಂಡು ಮಗುವನ್ನು ಆಕೆಯ ದೊಡ್ಡಮ್ಮಳೇ ಕೊಂದು ಹೂತು ಹಾಕಿದ ಘಟನೆ ಚಿಕ್ಕಬಳ್ಳಾಪುರದ ಮುತಕದಹಳ್ಳಿ ಗ್ರಾಮದ ಮಾವಿನ ತೋಪಿನಲ್ಲಿ ನಡೆದಿದೆ.

ಅಂಬಿಕಾಳ ಸಿಟ್ಟಿಗೆ ಮುಗ್ದ ಮಗುವೊಂದು ಪ್ರಾಣ ಬಿಟ್ಟಿದೆ. ಅಂಬಿಕಾ ಹಾಗೂ ಅನಿತಾ ಇಬ್ಬರು ಅಕ್ಕ ತಂಗಿಯರು. ತಂಗಿ ಅನಿತಾ ಮೇಲಿನ ಕೋಪಕ್ಕೆ ಆಕೆಯ ಮಗನನ್ನು ಕೊಲೆ ಮಾಡಿ ಹೂತು ಹಾಕಿದ್ದಾಳೆ.

ಅಂಬಿಕಾಳ ಅನೈತಿಕ ಸಂಬಂಧಗಳಿಗೆ ತಂಗಿ ಅನಿತಾ ಅಡ್ಡಿಯಾಗುತ್ತಿದ್ದಳು ಎನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದ ಅಂಬಿಕಾ, ತಂಗಿ ಮೇಲಿನ ಕೋಪಕ್ಕೆ ಆಕೆ ಮಗನನ್ನು ಕೊಲೆ ಮಾಡಿದ್ದಾಳೆ. ಸ್ಥಳಕ್ಕೆ ಪೆರೆಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

‘ಘನ ನ್ಯಾಯಾಲಯವನ್ನ ಕಾಮೆಂಟ್ ಮಾಡುವುದಕ್ಕೆ ಯಾರಿಗೂ ಅರ್ಹತೆ ಇಲ್ಲ’

ಶಾಲಾ ಕಾಲೇಜುಗಳಿಗೆ ಬೆದರಿಕೆ ಕರೆಗಳು ಬರುತ್ತಿರುವುದು ಗಂಭೀರ ವಿಚಾರ: ಪ್ರಮೋದ್ ಮುತಾಲಿಕ್

ಜಗದೀಶ್ ಶೆಟ್ಟರ್‌ ಮೈಯಲ್ಲಿರೋದು ಜನಸಂಘದಿಂದ ಬಂದ ಬಿಜೆಪಿ ರಕ್ತ, ಕಾಂಗ್ರೆಸ್‌ನದ್ದಲ್ಲ: ಸಿಟಿ ರವಿ

About The Author