ನಿಮಗೆ ಪ್ರತಿದಿನ ಮಾಡಿದ್ದೇ ಅಡುಗೆ ಮಾಡಿ ಮಾಡಿ ಬೋರ್ ಆಗಿದ್ರೆ, ನೀವಿವತ್ತು ತವಾ ಪುಲಾವ್ ಮಾಡಿ. ಹಾಗಾದ್ರೆ ಬನ್ನಿ, ತವ್ವಾ ಪುಲಾವನ್ನ ತಯಾರಿಸೋದು ಹೇಗೆ..? ಇದನ್ನ ತಯಾರಿಸೋಕ್ಕೆ ಬೇಕಾಗುವ ಸಾಮಗ್ರಿಗಳೇನು ಅಂತಾ ತಿಳಿಯೋಣ..
ಸಾಫ್ಟ್, ಪಿಂಕ್ ಲಿಪ್ಸ್ ನಿಮ್ಮದಾಗಬೇಕು ಅಂದ್ರೆ, ಈ ಟಿಪ್ಸ್ ಫಾಲೋ ಮಾಡಿ..
ಬೇಕಾಗುವ ಸಾಮಗ್ರಿ: 1 ಕಪ್ ಬಾಸ್ಮತಿ ಅಕ್ಕಿ, ಅರ್ಧ ಸ್ಪೂನ್ ಅರಿಶಿನ, ಅಗತ್ಯಕ್ಕೆ ತಕ್ಕಷ್ಟು ಕೆಂಪು ಮೆಣಸು ಮತ್ತು ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ, 3 ಈರುಳ್ಳಿ, 1 ಕ್ಯೂಬ್ ಬೆಣ್ಣೆ, ಅರ್ಧ ಕಪ್ ತುರಿದ ಬೀಟ್ರೂಟ್, ಚಿಟಿಕೆ ಜೀರಿಗೆ, ಅರ್ಧ ಕಪ್ ಸಣ್ಣಗೆ ಹೆಚ್ಚಿದ ಎಲೆಕೋಸು, ಒಂದು ಆಲೂಗಡ್ಡೆ, ಅರ್ಧ ಕಪ್ ಬಟಾಣಿ, ಒಂದು ಕ್ಯಾಪ್ಸಿಕಂ ಮತ್ತು ಟೊಮೆಟೋ, ಚಿಟಿಕೆ ಅರಿಶಿನ, ಒಂದು ಸ್ಪೂನ್ ಗರಂ ಮಸಾಲೆ ಪುಡಿ, ಒಂದು ಸ್ಪೂನ್ ಧನಿಯಾ ಮಸಾಲೆ, ಪಾವಭಾಜಿ ಮಸಾಲೆ, ಎರಡು ,ಸ್ಪೂನ್ ನಿಂಬೆ ಹುಳಿ, ಕಾಲು ಸ್ಪೂನ್ ಕಸೂರಿ ಮೇಥಿ, ಕೊಂಚ ಕೊತ್ತೊಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: 1 ಕಪ್ ಬಾಸ್ಮತಿ ಅಕ್ಕಿಯನ್ನು ತೊಳೆದು 20 ನಿಮಿಷ ನೆನೆಸಿಡಿ. ನಂತರ ಒಂದು ಪಾತ್ರೆಯಲ್ಲಿ ನೀರು ಬಿಸಿ ಮಾಡಿ, ನೆನೆಸಿಟ್ಟ ಅಕ್ಕಿಯನ್ನು ಅದರಲ್ಲಿ ಹಾಕಿ. ಇದರೊಂದಿಗೆ ಚಿಟಿಕೆ ಉಪ್ಪು, ಕೊಂಚ ಅರಿಶಿನ, ಹಾಕಿ 10 ನಿಮಿಷ ಮಂದ ಉರಿಯಲ್ಲಿ ಬೇಯಿಸಿ. ಈಗ ಅಕ್ಕಿ ಮುಕ್ಕಾಲು ಭಾಗವಾದರೂ ಬೆಂದಿರುತ್ತದೆ. ಗ್ಯಾಸ್ ಆಫ್ ಮಾಡಿ, ಅನ್ನವನ್ನು ನೀರಿನಿಂದ ಸಪರೇಟ್ ಮಾಡಿ, ಬದಿಗಿರಿಸಿ.
ಜೀವನದ ಬಗ್ಗೆ ಹೆಚ್ಚು ಯೋಚನೆ ಮಾಡೋದನ್ನ ನಿಲ್ಲಿಸೋದು ಹೇಗೆ..?
20 ನಿಮಿಷದ ನಂತರ ಅನ್ನ ಉದುರುದುರಾಗುತ್ತದೆ. ಈಗ ನಿಮಗೆ ಖಾರ ಬೇಕಾದಷ್ಟು ಕೆಂಪು ಮೆಣಸನ್ನು ನೀರಿನಲ್ಲಿ 10 ನಿಮಿಷ ನೆನೆಸಿಟ್ಟು, ಮಿಕ್ಸಿ ಜಾರ್‌ಗೆ ಹಾಕಿ. ಇದಕ್ಕೆ ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಮತ್ತು ಕೊಂಚ ಉಪ್ಪು ಹಾಕಿ ಚಟ್ನಿ ತಯಾರಿಸಿ.
ಈಗ ತವಾದ ಮೇಲೆ ಬೆಣ್ಣೆ ಹಾಕಿ, ಅದಕ್ಕೆ ಜೀರಿಗೆ ಸೇರಿಸಿ. ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ಒಂದು ಕ್ಯಾಪ್ಸಿಕಂ, ಒಂದು ಟೊಮೆಟೋವನ್ನೂ ಕೂಡ ಸೇರಿಸಿ, ಹುರಿಯಿರಿ. ಇದಾದ ಬಳಿಕ, ಸಣ್ಣಗೆ ಕತ್ತರಿಸಿದ ಎಲೆಕೋಸು, ತುರಿದ ಬೀಟರೂಟ್, ಬೇಯಿಸಿ, ಸಣ್ಣದಾಗಿ ಕತ್ತರಿಸಿದ ಆಲೂಗಡ್ಡೆ, ಹಸಿ ಬಟಾಣಿ, ಇವನ್ನೆಲ್ಲಾ ಹಾಕಿ ಚೆನ್ನಾಗಿ ಹುರಿಯಿರಿ.
ಸಧೃಡ ಕೂದಲಿಗಾಗಿ ಈ ಪುಡಿ ಉಪಯೋಗಿಸಿ..
ನಂತರ ಇದಕ್ಕೆ ಚಿಟಿಕೆ ಅರಿಶಿನ, ಖಾರದ ಪುಡಿ, ಧನಿಯಾ ಪುಡಿ, ಪಾವ್ ಭಾಜಿ ಮಸಾಲಾ, ಉಪ್ಪು, ಆಗಲೇ ರೆಡಿ ಮಾಡಿಟ್ಟುಕೊಂಡ ಕೆಂಪು ಚಟ್ನಿ, ಇವನ್ನೆಲ್ಲ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದಕ್ಕೆ 1 ಗ್ಲಾಸ್ ನೀರು ಸೇರಿಸಿ. ಈ ಮಿಶ್ರಣ ಕುದಿ ಬಂದ ಬಳಿಕ ಇದಕ್ಕೆ ಅನ್ನ ಸೇರಿಸಿ. ನಂತರ ಗರಂ ಮಸಾಲೆ, ಕಸೂರಿ ಮೇಥಿ, ಸಣ್ಣಗೆ ಕತ್ತರಿಸಿದ ಕೊತ್ತೊಂಬರಿ ಸೊಪ್ಪು, ನಿಂಬೆ ಹುಳಿ ಹಾಕಿ, ಎಲ್ಲರವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. 5 ನಿಮಿಷ ತವಾದ ಮೇಲೆಯೇ ಬಿಡಿ. ನಂತರ ಗ್ಯಾಸ್ ಆಫ್ ಮಾಡಿ, ಬಿಸಿ ಬಿಸಿಯಾದ ತವ್ವಾ ಪಲಾವ್ ಸರ್ವ್ ಮಾಡಿ.