Friday, June 20, 2025

Latest Posts

ಹಿಂದಿನ ಕಾಲದ ಸುಂದರಿಯರು ಇದೇ ಸೌಂದರ್ಯ ಸಲಹೆಗಳನ್ನು ಪಾಲಿಸುತ್ತಿದ್ದರು..

- Advertisement -

ಹಿಂದಿನ ಕಾಲದಲ್ಲಿ ಮಹಿಳೆಯರು ಕೆಮಿಕಲ್ ಮುಕ್ತವಾದ ವಸ್ತುಗಳನ್ನು ಬಳಸಿ, ತಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತಿದ್ದರು. ಆದ್ರೆ ಇಂದಿನ ಕಾಲದಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಕಾಸ್ಟ್ಲಿ ವಸ್ತುಗಳನ್ನು ಬಳಸಿದರೂ, ನಮ್ಮ ಸ್ಕಿನ್ ಅತ್ಯುತ್ತಮವಾಗುವುದಿಲ್ಲ. ಹಾಗಾಗಿ ನಮಗೆ ಮೇಕಪ್‌ನ ಸಹಾಯ ಬೇಕೇ ಬೇಕಾಗುತ್ತದೆ. ಹಾಗಾದ್ರೆ ಹಿಂದಿನ ಕಾಲದ ಸುಂದರಿಯರು ಯಾವ ವಸ್ತುವನ್ನು ಬಳಸಿ ಸೌಂದರ್ಯ ಇಮ್ಮಡಿಗೊಳಿಸುತ್ತಿದ್ದರು ಅಂತಾ ತಿಳಿಯೋಣ ಬನ್ನಿ..

ಚಳಿಗಾಲದಲ್ಲಿ ತ್ವಚೆಯ ಆರೈಕೆ ಹೀಗೆ ಮಾಡಿ..

ಮೊದಲನೇಯ ವಸ್ತು ಬೇವಿನ ಎಲೆ. ಬೇವಿನ ಎಲೆಯನ್ನ ಬಳಸುವುದರಿಂದ ಕೆರೆತ, ಗುಳ್ಳೆಗಳು ಇತ್ಯಾದಿ ಸಮಸ್ಯೆ ದೂರವಾಗುತ್ತದೆ. ನಿಮ್ಮ ದೇಹದಲ್ಲಿ ಗುಳ್ಳೆಗಳಾಗುತ್ತಿದ್ದರೆ, ನಿಮ್ಮ ಮೈ ಕೈ ಹೆಚ್ಚು ಕಡಿತವಾಗುತ್ತಿದ್ದರೆ, ನೀವು ಬೇವಿನ ಸೋಪು ಬಳಸಿದರೆ, ಆ ಎಲ್ಲ ಸಮಸ್ಯೆ ದೂರವಾಗುತ್ತದೆ. ಅಲ್ಲದೇ ತಲೆಗೂದಲಿಗೆ ಬೇವಿನ ಎಣ್ಣೆ ಬಳಸಿದರೆ, ಕೂದಲುದುರುವ ಸಮಸ್ಯೆಯೂ ಕಡಿಮೆಯಾಗುತ್ತದೆ. 5ರಿಂದ 10 ಬೇವಿನ ಎಲೆಯನ್ನು ನೀರಿಗೆ ಹಾಕಿ, 20 ನಿಮಿಷ ಕುದಿಸಿ. ಮತ್ತು ತಣಿಸಿ.

ನಂತರ ಅದರಲ್ಲಿ ಹತ್ತಿ ಅದ್ದಿ, ನಿಮ್ಮ ಮುಖದ ಮೇಲೆ ಮೊಡವೆ ಕಲೆ ಇದ್ದಲ್ಲಿ, ಅಲ್ಲಿ ಹಚ್ಚಿದ್ರೆ, ಆ ಕಲೆ ಮಾಯವಾಗುತ್ತದೆ. ಇನ್ನು ಕೂದಲಿಗೆ ವಾರಕ್ಕೆರಡು ಬಾರಿ ಬೇವಿನ ಎಣ್ಣೆಯಿಂದ ಮಸಾಜ್ ಮಾಡಿ, ನಂತರ ತಲೆಸ್ನಾನ ಮಾಡಿದ್ದಲ್ಲಿ, ನಿಮ್ಮ ಕೂದಲು ಆರೋಗ್ಯಕರವಾಗಿರುತ್ತದೆ.

ದಟ್ಟವಾದ, ಸುಂದರವಾದ ಕೇಶರಾಶಿ ಬೇಕೆಂದಲ್ಲಿ ಈ ತಪ್ಪು ಎಂದಿಗೂ ಮಾಡಬೇಡಿ.. ಭಾಗ2

ಎರಡನೇಯ ವಸ್ತು ಕೇಸರಿ. ವಾರಕ್ಕೆ ಮೂರು ಬಾರಿ ಆದ್ರೂ ರಾತ್ರಿ ನೀವು ಕೇಸರಿ ಹಾಲನ್ನ ಕುಡಿದರೆ, ನಿಮ್ಮ ಸ್ಕಿನ್ ಗ್ಲೋ ಆಗುತ್ತದೆ. ಇನ್ನು ನಿಮಗೆ ಕೇಸರಿ ಫೇಸ್‌ಪ್ಯಾಕ್ ಹಾಕುವುದಿದ್ದರೆ, ಕೊಂಚ ಕೇಸರಿಯನ್ನು ಕೆನೆಯಲ್ಲಿ ಬೆರೆಸಿ, ರಾತ್ರಿಯಿಡೀ ನೆನೆಸಿಡಿ. ಮರುದಿನ ಬೆಳಿಗ್ಗೆ ಅದನ್ನ ಚೆನ್ನಾಗಿ ಅರೆದು, ಮುಖಕ್ಕೆ ಹಚ್ಚಿ, ಒಣಗಿನ ಬಳಿಕ ಮುಖ ತೊಳೆಯಿರಿ. ಇದನ್ನ ವಾರಕ್ಕೊಮ್ಮೆ ಹಾಕಿದರೂ ಸಾಕು. ಇದರಿಂದ ನಿಮ್ಮ ಸ್ಕಿನ್ ಗ್ಲೋ ಆಗುತ್ತದೆ.

ಮೂರನೇಯ ವಸ್ತು ಜೇನುತುಪ್ಪ. ನಿಸರ್ಗದಿಂದ ಸಿಕ್ಕ ಕೊಡುಗೆಗಳಲ್ಲಿ ಜೇನುತುಪ್ಪವೂ ಒಂದು. ಒಂದು ಸ್ಪೂನ್ ಜೇನುತುಪ್ಪ, ಒಂದು ಸ್ಪೂನ್ ಕೆನೆ, ಒಂದು ಚಮಚ ಕಡಲೆ ಹಿಟ್ಟನ್ನ ಚೆನ್ನಾಗಿ ಮಿಕ್ಸ್ ಮಾಡಿ. 10 ನಿಮಿಷ ಹಾಗೆ ಬಿಡಿ. ನಂತರ ಮುಖಕ್ಕೆ ಈ ಪೇಸ್ಟನ್ನ ಹಚ್ಚಿ 15 ನಿಮಿಷ ಬಿಟ್ಟು ಫೇಸ್‌ವಾಶ್ ಮಾಡಿದ್ರೆ, ನಿಮ್ಮ ತ್ವಚೆ ಸಾಫ್ಟ್ ಆಗುತ್ತದೆ.

- Advertisement -

Latest Posts

Don't Miss