Tuesday, October 22, 2024

Latest Posts

ಸೊಳ್ಳೆಗಳನ್ನು ಓಡಿಸಲು ಇಲ್ಲಿದೆ ಉತ್ತಮ ಪರಿಹಾರ..

- Advertisement -

ಬೇಸಿಗೆಗಾಲದಲ್ಲಿ ಸೊಳ್ಳೆಗಳ ದರ್ಬಾರ್ ಜೋರಾಗಿಯೇ ಇರತ್ತೆ. ಈ ಕಾರಣಕ್ಕಾದ್ರೂ ಫ್ಯಾನ್ ಹಾಕಲೇಬೇಕಾಗುತ್ತದೆ. ಕೆಲವೊಮ್ಮೆ ಫ್ಯಾನ್ ಹಾಕಿದ್ರೂ, ಸೊಳ್ಳೆ ಹೋಗುವುದಿಲ್ಲ. ಅಲ್ಲದೇ, ಸೊಳ್ಳೆ ಕಚ್ಚುವುದರಿಂದ ಹಲವು ಆರೋಗ್ಯ ಸಮಸ್ಯೆ ಬರುತ್ತದೆ. ಹಾಗಾಗಿಯೇ ನಾವಿವತ್ತು, ಸೊಳ್ಳೆಯನ್ನು ಓಡಿಸುವ ಬಗ್ಗೆ ಕೆಲವು ಟಿಪ್ಸ್‌ಗಳನ್ನ ತಂದಿದ್ದೇವೆ. ಆ ಬಗ್ಗೆ ತಿಳಿಯೋಣ ಬನ್ನಿ..

ಮೊದಲು ಸೊಳ್ಳೆಗಳನ್ನು ಓಡಿಸಲು ಬೇಕಾದ ಸಾಮಗ್ರಿಯನ್ನು ಸೇರಿಸಿಕೊಳ್ಳಬೇಕು. ನಾಲ್ಕರಿಂದ ಐದು ಪಲಾವ್ ಎಲೆ, ನಾಲ್ಕುಕರ್ಪೂರ, ಬೇವಿನ ಎಣ್ಣೆ, ಅಥವಾ ಸಾಸಿವೆ ಎಣ್ಣೆ ಮತ್ತು ಬೆಂಕಿ ಪೆಟ್ಟಿಗೆ. ಮೊದಲು ಕರ್ಪೂರವನ್ನ ಚೆನ್ನಾಗಿ ಕುಟ್ಟಿ ಪುಡಿ ಮಾಡಿ, ಅದನ್ನ 8 ಸ್ಪೂನ್ ಎಣ್ಣೆಗೆ ಮಿಕ್ಸ್ ಮಾಡಬೇಕು. ನಂತರ ಒಂದು ಸಣ್ಣದಾದ ಮಣ್ಣಿನ ಬೌಲ್ ತೆಗೆದುಕೊಂಡು, ಅದರಲ್ಲಿ ಪಲಾವ್ ಎಲೆಗಳನ್ನ ಚಿಕ್ಕ ಚಿಕ್ಕ ತುಂಡುಗಳಾಗಿ ಮಾಡಿ ಹಾಕಿ, ಅದಕ್ಕೆ ಎಣ್ಣೆ ಮತ್ತು ಕರ್ಪೂರದ ಮಿಶ್ರಣವನ್ನು ಸೇರಿಸಿ.

ಈ ಮಿಶ್ರಣಕ್ಕೆ ಬೆಂಕಿ ಪಟ್ಟಣದ ಕಡ್ಡಿ ಗೀರಿ, ಬೆಂಕಿ ಹಚ್ಚಿ, ಅದನ್ನ ಆರಿಸಿ, ಹೊಗೆ ಬಂದಾಗ, ಹೆಚ್ಚು ಸೊಳ್ಳೆ ಇರುವ ಕಡೆ ಇಡಬೇಕು. ನೆನಪಿರಲಿ, ಈ ಹೊಗೆ ಇಟ್ಟ ಜಾಗದಲ್ಲಿರುವ ಬಾಗಿಲನ್ನ ಮುಚ್ಚಿರಬೇಕು. ಆಗ, ಆ ಹೊಗೆಗೆ ಸೊಳ್ಳೆಗಳು ಸಾಯುತ್ತದೆ. ನೀವು ಬಳಸುವ ಕರ್ಪೂರ ಮತ್ತು ಪಲಾವ್ ಎಲೆ ಪರಿಮಳಯುಕ್ತವಾಗಿರಲಿ. ಆಗಲೇ ಇದರ ಎಫೆಕ್ಟ್ ಆಗುತ್ತದೆ.

- Advertisement -

Latest Posts

Don't Miss