Friday, December 13, 2024

Latest Posts

ಹುಲ್ಲಿನ ಬಣ್ಣ ನೀಲಿ ಎಂದ ಕತ್ತೆ, ಇಲ್ಲ ಹಸಿರು ಎಂದ ಚಿರತೆ.. ಮುಂದೇನಾಯ್ತು..?

- Advertisement -

Story: ಒಂದು ಕಾಡಿನಲ್ಲಿ ಕತ್ತೆ ಮತ್ತು ಚಿರತೆ ನಡುವೆ ವಾದ ಶುರುವಾಯಿತು. ಕತ್ತೆ ಹೇಳಿತು ಈ ಹುಲ್ಲು ನೀಲಿ ಎಂದು. ಅದಕ್ಕೆ ಚಿರತೆ ಹೇಳಿತು, ಇಲ್ಲ ಈ ಹುಲ್ಲು ಹಸಿರಾಗಿದೆ ಎಂದು. ಅದಕ್ಕೆ ಇಬ್ಬರೂ ಸೇರಿ, ಕಾಡಿನ ರಾಜನ ಬಳಿ ಹೋಗಿ, ಇದರ ಬಣ್ಣ ಯಾವುದೆಂದು ತಿಳಿಯೋಣವೆಂದು ನಿರ್ಧರಿಸಿದರು. ಹಾಗಾದರೆ ಕಾಡಿನ ರಾಜ ಸಿಂಹ ಹುಲ್ಲಿನ ಬಣ್ಣದ ಬಗ್ಗೆ ಏನು ಹೇಳುತ್ತದೆ ಎಂದು ಈ ಕಥೆಯ ಮೂಲಕ ತಿಳಿಯೋಣ ಬನ್ನಿ.

ಕತ್ತೆ ಮತ್ತು ಚಿರತೆ ಸಿಂಹದ ಬಳಿ ಬಂದಾಗ, ಸಿಂಹ, ಹೌದು ಇದು ನೀಲಿ ಬಣ್ಣದ ಹುಲ್ಲು. ಈ ವಾದದಲ್ಲಿ ಕತ್ತೆಯದೇ ಗೆಲುವು. ನೀನಿನ್ನು ಹೋಗಬಹುದು ಎಂದು ಹೇಳುತ್ತದೆ. ಕತ್ತೆ ತಾನು ಗೆದ್ದೆ ಎಂದು ಬೀಗಿ, ಅಲ್ಲಿಂದ ಎದ್ದು ಹೋಗುತ್ತದೆ. ಮತ್ತು ಚಿರತೆಗೆ ಒಂದು ತಿಂಗಳು ಮಾತನಾಡಬಾರದು ಅನ್ನುವ ಶಿಕ್ಷೆ ಸಿಗುತ್ತದೆ. ಆಗ ಚಿರತೆ, ನಾನು ನಿಮ್ಮ ಬಳಿ ಕೆಲ ವಿಷಯಗಳನ್ನು ಮಾತನಾಡಬೇಕು. ಅದಕ್ಕಾದರೂ ಅವಕಾಶ ಮಾಡಿಕೊಡಿ ಎಂದು ಕೇಳುತ್ತದೆ. ಸಿಂಹ ಒಪ್ಪಿಗೆ ನೀಡುತ್ತದೆ.

ಆಗ ಚಿರತೆ, ನೀವೇ ನೋಡಿದಿರಿ. ಹುಲ್ಲಿನ ಬಣ್ಣ ಹಸಿರಾಗಿತ್ತು. ಆದರೆ ನೀವು ಅದು ನೀಲಿ ಬಣ್ಣವೆಂದು ಏಕೆ ಹೇಳಿದಿರಿ. ಮತ್ತು ಸರಿಯಾದ ಉತ್ತರ ಕೊಟ್ಟ ನನಗೇಕೆ ಈ ಶಿಕ್ಷೆ ಎಂದು ಕೇಳಿತು. ಅದಕ್ಕೆ ಉತ್ತರಿಸಿದ ಸಿಂಹ, ಅದು ಹಸಿರು ಬಣ್ಣವೇ ಇದೆ ಅನ್ನೋದು ನನಗೆ ಗೊತ್ತು. ನಾನು ಈ ಹುಲ್ಲು ಹಸಿರು ಬಣ್ಣವಾಗಿದೆ ಎಂದಿದ್ದರೆ, ಕತ್ತೆ ಇಲ್ಲ ಅದು ನೀಲಿ ಎಂದು ನನ್ನೊಡನೆ ವಾದ ಮಾಡುತ್ತಿತ್ತು. ಕತ್ತೆ ಎಂದಿಗೂ ತಾನು ತಪ್ಪು ಮಾತಾಡುತ್ತಿದ್ದೇನೆ ಎಂದು ಒಪ್ಪಿಕೊಳ್ಳುತ್ತಿರಲಿಲ್ಲ. ಅದಕ್ಕೆ ಹಾಗೆ ಹೇಳಿ ಕಳಿಸಿದೆ. ಆದರೆ ನೀನು ಬುದ್ಧಿವಂತ. ನೀನು ನಾನು ಹೇಳಿದ ಹಾಗೆ ಕೇಳುತ್ತಿ ಎಂಬ ನಂಬಿಕೆ ಇದೆ ನನಗೆ. ಹಾಗಾಗಿ ನೀನು ಮಾತನಾಡಬಾರದು ಅನ್ನುವ ಶಿಕ್ಷೆ ಕೊಟ್ಟಿದ್ದೇನೆ ಎಂದಿತು.

ಈ ಕಥೆಯ ಸಂದೇಶವೇನೆಂದರೆ, ಮೂರ್ಖರೊಂದಿಗೆ ಎಂದಿಗೂ ವಾದ ಮಾಡಬಾರದು ಎನ್ನುವುದು ಮೊದಲ ಸಂದೇಶ. ನೀವು ಬುದ್ಧಿವಂತರಾಗಿದ್ದರೆ, ಅದು ನಿಮ್ಮ ಬಳಿಯೇ ಇರಬೇಕು. ಅದನ್ನು ತೋರಿಸಲು ಇನ್ನೊಬ್ಬರೊಂದಿಗೆ ವಾದ ಮಾಡಬಾರದು ಅನ್ನೋದು ಇನ್ನೊಂದು ಸಂದೇಶ. ಇನ್ನು ಕೊನೆಯ ಸಂದೇಶವೇನೆಂದರೆ, ಸಿಂಬ ಕಾಡಿನ ರಾಜ. ಅವನು ರಾಜಕಾರಣಿ ಇದ್ದಂತೆ. ಅವನು ಕತ್ತೆಯ ಮನಸ್ಸಿಗೂ ಖುಷಿಪಡಿಸಿದ. ಚಿರತೆಗೂ ಸಮಾಧಾನ ಮಾಡಿದ.

ನಾಗಹತ್ಯೆ ಮಾಡಿದರೆ ಎಂಥ ದೋಷ ಅಂಟಿಕೊಳ್ಳುತ್ತದೆ..?

ಈ ಸಮಯದಲ್ಲಿ ಎಂದಿಗೂ ಕಸ ಗುಡಿಸಬಾರದು.. ಇದರಿಂದ ದರಿದ್ರ ಸಂಭವಿಸುವ ಸಾಧ್ಯತೆ ಹೆಚ್ಚು..

ವೃದ್ಧೆ ಜಗನ್ನಾಥನಿಗೆ ಮೀನಿನ ಖಾದ್ಯ ನೈವೇದ್ಯ ಮಾಡಿದಾಗ ನಡೆಯಿತೊಂದು ಪವಾಡ..

- Advertisement -

Latest Posts

Don't Miss