Monday, June 24, 2024

Latest Posts

Health Tips: ಜ್ವರ ಬಂದು ಹೋಗತ್ತೆ.. ಆದರೆ ಮೈ ಕೈ ನೋವು ಹೋಗಲ್ಲ.. ಯಾಕೆ..?

- Advertisement -

Health Tips: ಕೆಲವೊಮ್ಮೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕೂಡ ಹಲವು ದಿನಗಳವರೆಗೆ ಕಾಡುತ್ತದೆ. ಸಣ್ಣ ಮಟ್ಟದ ನೆಗಡಿಯಿಂದ ಶುರುವಾಗಿ, ಬಳಿಕ ಜ್ವರ ಬಂದು, ಮತ್ತೊಂದಿಷ್ಟು ದಿನ ಮೈ ಕೈ ನೋವು ತಂದೊಡ್ಡುತ್ತದೆ. ಹಾಗಾದ್ರೆ ಜ್ವರ ಬಂದು ಹೋದ್ರೂ, ಮೈ ಕೈ ನೋವು ಹೋಗದಿರಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..

ಹೀಗೆ ಗಂಟುಗಳಲ್ಲಿ ಬರುವ ನೋವುಗಳನ್ನೇ ಸಂಧಿವಾತ ಎಂದು ಕರೆಯಲಾಗುತ್ತದೆ. ಕೋವಿಡ್‌, ಚಿಕನ್ ಗುನ್ಯ, ಡೆಂಗ್ಯೂ ಆದವರಲ್ಲೂ ಜ್ವರ ಹೋದರೂ, ಗಂಟುಗಳಲ್ಲಿ ನೋವು ಇರುತ್ತದೆ. ಹಾಗಾಗಿ ನಮಗೆ ಸಂಧಿವಾತ ಶುರುವಾದಾಗ, ಅದು ಯಾವ ಕಾರಣಕ್ಕೆ ಶುರುವಾಗಿದೆ ಎಂದು ನಾವು ಮೊದಲು ತಿಳಿದುಕೊಳ್ಳಬೇಕು.

ವಯಸ್ಸಾಗಿರುವ ಕಾರಣಕ್ಕೆ ನಮಗೆ ಸಂಧಿವಾತ ಸಂಭವಿಸಿದೆಯೋ, ಅಥವಾ ಯಾವುದಾದರೂ ಜ್ವರ ಬಂದ ಬಳಿಕ ಸಂಧಿವಾತ ಶುರುವಾಗಿದೆಯೋ ಅಂತಾ ತಿಳಿದು, ಬಳಿಕ ಅದಕ್ಕೆ ಚಿಕಿತ್ಸೆ ಪಡೆಯಬೇಕು ಅಂತಾರೆ ವೈದ್ಯರು. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss