Spiritual :ಮನೆಯಲ್ಲಿರುವ ಕೆಲ ವಸ್ತುಗಳು ನಮ್ಮನ್ನು ಉದ್ಧಾರವಾಗಲು ಬಿಡುವುದಿಲ್ಲ. ಆದರೆ ಆ ವಿಷಯದ ಬಗ್ಗೆ ನಮಗೆ ಗೊತ್ತಿರುವುದಿಲ್ಲ. ಹಾಗಾಗಿ ಅಂಥ ವಸ್ತುಗಳನ್ನು ನಾವು ನಮ್ಮ ಮನೆಯಲ್ಲಿ ಇರಿಸಲು ಬಿಡಬಾರದು. ಹಾಗಾದ್ರೆ ಮನೆ ಉದ್ಧಾರವಾಗಬೇಕು ಅಂದ್ರೆ ನಾವು ಯಾವ ವಸ್ತುವನ್ನು ಮನೆಯಲ್ಲಿ ಇಡಬಾರದು ಅಂತಾ ತಿಳಿಯೋಣ ಬನ್ನಿ..
ಬಾಡಿದ ತುಳಸಿ ಗಿಡ. ಬಾಡಿದ ತುಳಸಿ ಗಿಡ ಮನೆಯಲ್ಲಿರುವುದು ಅಶುಭದ ಸಂಕೇತ. ಏಕೆಂದರೆ, ನಿಮ್ಮ ಮನೆಯಲ್ಲಿ ಏನೋ ಅಶುಭ ಘಟನೆ ನಡೆಯಲಿದೆ. ಅಥವಾ ಯಾರದ್ದಾದರೂ ಮರಣವಾಗಲಿದೆ. ಅಥವಾ ನಿಮ್ಮ ಆರ್ಥಿಕ ಪರಿಸ್ಥಿತಿ ತೀರಾ ಹದಗೆಡಲಿದೆ ಎಂದಾಗ ಮಾತ್ರ, ಚೆನ್ನಾಗಿ ಬೆಳೆಯುತ್ತಿದ್ದ ತುಳಸಿ ಗಿಡ ಬಾಡಿ ಹೋಗುತ್ತದೆ. ಹಾಗಾಗಿ ತುಳಸಿ ಗಿಡ ಬಾಡಿದ ತಕ್ಷಣ, ಹೊಸ ಗಿಡವನ್ನು ನೆಡಿ. ಅಲ್ಲದೇ ಬಾಡಿದ ತುಳಸಿ ಗಿಡ ಮನೆಯಲ್ಲಿದ್ದರೆ, ಆರ್ಥಿಕ ಪರಿಸ್ಥಿತಿ ಚೆನ್ನಾಗಿರುವುದಿಲ್ಲ.
ಮುಳ್ಳಿನ ಗಿಡ. ಮುಳ್ಳಿನ ಗಿಡ ನಕಾರಾತ್ಮಕ ಶಕ್ತಿಯನ್ನು ತೆಗೆದುಕೊಳ್ಳುತ್ತದೆ. ಹಾಗಾಗಿ ಮನೆಯಲ್ಲಿ ಮುಳ್ಳಿನ ಗಿಡವಿದ್ದರೆ, ಅಂಥ ಮನೆ ಉದ್ಧಾರವಾಗುವುದಿಲ್ಲ. ಆ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಪದೇ ಪದೇ ಜಗಳವಾಗುತ್ತದೆ. ಮನೆಯ ನೆಮ್ಮದಿ ಹಾಳಾಗುತ್ತದೆ. ಹಾಗಾಗಿ ಮನೆಯಲ್ಲಿ ಮುಳ್ಳಿನ ಗಿಡವಿರಬಾರದು.
ಹರಿದ ಚಪ್ಪಲಿ. ಚಪ್ಪಲಿ ಹರಿದರೆ, ಅದನ್ನು ಹೊಲಿಗೆ ಹಾಕಿಸಿ, ಸರಿ ಮಾಡಿಕೊಳ್ಳಿ. ಆದರೆ ಮತ್ತೆ ಸರಿ ಮಾಡಲು ಆಗದ ರೀತಿ ಚಪ್ಪಲಿ ಹರಿದರೆ, ಅದನ್ನು ಮನೆಯಿಂದ ಹೊರಗೆ ಬಿಸಾಕಿ. ಏಕೆಂದರೆ, ಹರಿದ ಚಪ್ಪಲಿ ನಕಾರಾತ್ಮಕ ಶಕ್ತಿಯನ್ನು ಬೇಗ ಸೆಳೆದುಕೊಳ್ಳುತ್ತದೆ. ಇದರಿಂದ ಮನೆಯ ಪರಿಸ್ಥಿತಿ ಹದಗೆಡುತ್ತದೆ.
ನಿಂತುಹೋದ ಗಡಿಯಾರ. ಕೆಲವೊಮ್ಮೆ ನಿಮ್ಮ ಲಕ್ಕಿ ಟೈಮ್ ಶುರುವಾಗತ್ತೆ ಅನ್ನನುವಾಗಲೇ, ನಿಮ್ಮ ಮನೆಯ ಗಡಿಯಾರ ಪರ್ಮ್‌ನೆಂಟ್ ಆಗಿ ನಿಂತು ಹೋಗುತ್ತದೆ. ಅಥವಾ ಬಿದ್ದು ಒಡೆದು ಹೋಗುತ್ತದೆ. ಆದರೂ ನೀವು ಅದೇ ಗಡಿಯಾರವನ್ನು ಬಳಸಿದರೆ, ನಿಮ್ಮ ಸಮಯ ಹಾಳಾಗುತ್ತದೆ. ಉತ್ತಮವಾಗಬೇಕಿದ್ದ ನಿಮ್ಮ ಪರಿಸ್ಥಿತಿ ಹಾಳಾಗುತ್ತದೆ. ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಹಾಗಾಗಿ ಗಡಿಯಾರ ರಿಪೇರಿ ಆಗದ ರೀತಿ ಹಾಳಾದರೆ, ಅಥವಾ ಒಡೆದುಹೋದರೆ, ಅದನ್ನು ಮನೆಯಿಂದ ಆಚೆ ಬಿಸಾಕಿ.
ಒಡೆದ ದೇವರ ವಿಗ್ರಹ. ಒಡೆದ ವಿಗ್ರಹಕ್ಕೆ ಎಂದಿಗೂ ಪೂಜೆಯಾಗಬಾರದು. ಅಲ್ಲದೇ ಒಡೆದ ವಿಗ್ರಹವನ್ನು ಮನೆಯಲ್ಲಿ ಇರಿಸಬಾರದು. ಅದನ್ನು ಯಾವುದಾದರೂ ದೇವಸ್ಥಾನಕ್ಕೋ, ಅಥವಾ ನದಿಗೋ ಹಾಕಬೇಕು. ಇಂಥ ವಿಗ್ರಹಕ್ಕೆ ಪೂಜೆಯಾದರೆ, ಮನೆಯಲ್ಲಿ ನೆಮ್ಮದಿ ಇರುವುದಿಲ್ಲ.