Beauty Tips: ಅಂದವಾದ, ಉದ್ದನೆಯ ಕೂದಲು ಯಾರಿಗೆ ತಾನೇ ಬೇಡ ಹೇಳಿ..? ಇಂದಿನ ಪೀಳಿಗೆಯವರಿಗಂತೂ ಚೆಂದದ ಕೂದಲು ಸಿಗುವುದೇ ಕಷ್ಟ. ಏಕೆಂದರೆ, ಬಳಸುವ ನೀರು, ಸೇವಿಸುವ ಆಹಾರ, ಧೂಳು ಇವುಗಳಿಂದ ಕೂದಲಿನ ಆರೋಗ್ಯ ಹಾಳಾಗುತ್ತಿದೆ. ಹಾಗಾಗಿ ಇಂದು ನಾವು ಕೂದಲಿನ ಆರೈಕೆ ಮಾಡಿಕೊಳ್ಳುವ ಸರಿಯಾದ ವಿಧಾನವನ್ನು ಹೇಳಲಿದ್ದೇವೆ.
ಮೊದಲನೇಯದಾಗಿ ಕೂದಲು ವಾಶ್ ಮಾಡುವಾಗ ಬಿಸಿ ನೀರಿನ ಬಳಕೆ ಮಾಡಬೇಡಿ. ಕೆಲವರಿಗೆ ದೇಹದ ಜೊತೆ ತಲೆಗೂ ಬಿಸಿ ನೀರಿನಿಂದಲೇ ಸ್ನಾನ ಮಾಡಿದಾಗ ಸಮಾಧಾನವಾಗುತ್ತದೆ. ಆದರೆ ತಲೆಗೂದಲಿಗೆ ಬಿಸಿ ನೀರನ್ನು ಬಳಸಿದರೆ, ಕೂದಲು ಹೆಚ್ಚು ಉದುರುತ್ತದೆ. ಡ್ಯಾಂಡ್ರಫ್ ಸಮಸ್ಯೆ ಉಂಟಾಗುತ್ತದೆ. ಕೂದಲಿನ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಹಾಗಾಗಿ ತಲೆಗೂದಲಿಗೆ ಬಿಸಿ ನೀರು ಬಳಸಬೇಡಿ.
ಎರಡನೇಯದಾಗಿ ಹೆಚ್ಚು ಕೆಮಿಕಲ್ ಇರುವ ಶ್ಯಾಂಪೂ, ಎಣ್ಣೆ ಬಳಸಬೇಡಿ. ಕೆಮಿಕಲ್ ಯುಕ್ತವಾದ ಶ್ಯಾಂಪೂವೇ ಈಗ ಮಾರುಕಟ್ಟೆಯಲ್ಲಿ ಸಿಗುತ್ತಿದೆ. ಆದರೆ ನೀವು ಆ ಶ್ಯಾಂಪೂಗಳನ್ನು ಬಳಸುವ ಬದಲು, ಸೀಗೇಕಾಯಿ ಪುಡಿ, ಅಂಟಲಕಾಯಿ ಪುಡಿಗಳನ್ನು ಬಳಸಿ, ಅಥವಾ ನೀವೇ ಮನೆಯಲ್ಲಿ ಇದರಿಂದ ಶ್ಯಾಂಪೂ ತಯಾರಿಸಿ, ಬಳಸಿ. ಇನ್ನು ತಲೆಗೂದಲಿಗೆ ತೆಂಗಿನ ಎಣ್ಣೆ, ಹರಳೆಣ್ಣೆ ಉತ್ತಮ ಆಯ್ಕೆಯಾಗಿದೆ.
ಮೂರನೇಯದಾಗಿ ಟವೆಲ್‌ನಿಂದ ಕೂದಲು ರಬ್ ಮಾಡಬೇಡಿ. ಕೆಲವರು ಕೂದಲು ಒಣಗಿಸುವ ಭರದಲ್ಲಿ, ಟವೆಲ್‌ನಿಂದ ಕೂದಲು ಕಿತ್ತು ಹೋಗುವ ಹಾಗೆ ರಬ್ ಮಾಡ್ತಾರೆ. ಇದರಿಂದ ಹಸಿಯಾಗಿರುವ ಕೂದಲು, ಬೇಗ ಉದುರುತ್ತದೆ. ಹಾಗಾಗಿ ಸ್ಮೂತ್ ಆಗಿ ಕೂದಲನ್ನು ಆರಿಸಿಕೊಳ್ಳಿ. ಹೇರ್ ಡ್ರೈಯರ್, ಹೇರ್ ಸ್ಟ್ರೈಟ್ನರ್ ಹೆಚ್ಚು ಬಳಸಬೇಡಿ.
ನಾಲ್ಕನೇಯದಾಗಿ ಅಗತ್ಯಕ್ಕಿಂತ ಹೆಚ್ಚು ಬಾರಿ ಕೂದಲು ಬಾಚಬೇಡಿ. ಅದರಲ್ಲೂ ತಲೆಸ್ನಾನ ಮಾಡಿದ ಬಳಿಕ, ತಲೆಗೂದಲು ಯಾವತ್ತೂ ಬಾಚಬಾರದು. ಇದರಿಂದ ಕೂದಲು ಉದುರುತ್ತದೆ. ಕೂದಲ ಬೆಳವಣಿಗೆಯಲ್ಲೂ ಕುಂಠಿತಗೊಳ್ಳುತ್ತದೆ. ಹಾಗಾಗಿ ಕೂದಲನ್ನು ಚೆನ್ನಾಗಿ ಒಣಗಿಸಿ, ಕೊಂಚ ಹೊತ್ತಿನ ಬಳಿಕವೇ, ತಲೆ ಬಾಚಿ.
ಐದನೇಯದಾಗಿ ನಿಮ್ಮ ಕೂದಲನ್ನು ಟೈಟ್ ಆಗಿ ಕಟ್ಟಬೇಡಿ. ಕೂದಲು ಟೈಟ್ ಆಗಿ ಕಟ್ಟುವುದರಿಂದಲೇ, ಕೂದಲು ಉದುರಲು ಶುರುವಾಗುತ್ತದೆ. ಅದರಲ್ಲೂ ಯಾವುದೇ ಕಾರಣಕ್ಕೂ ತಲೆಸ್ನಾನ ಮಾಡಿದ ಬಳಿಕ ಈ ತಪ್ಪು ಮಾಡಲೇಬಾರದು. ಹೀಗೆ ಮಾಡಿದ್ದಲ್ಲಿ, ಕೂದಲು ತುಂಡು ತುಂಡಾಗುತ್ತದೆ. ಕೂದಲೆಳೆ ಎರಡು ಭಾಗವಾಗುತ್ತದೆ. ಈ ಮೂಲಕ ಕೂದಲ ಬೆಳವಣಿಗೆ ನಿಲ್ಲುತ್ತದೆ.
ಆಫರ್, ಡಿಸ್ಕೌಂಟ್ ಇಲ್ಲದೇ ಗ್ರಾಹಕರು ನಿಮ್ಮ ಬಳಿ ಬರಬೇಕೇ..? ಹೀಗೆ ಮಾಡಿ..
ತನ್ನ 29ನೇ ವಯಸ್ಸಿನಲ್ಲೇ ಕೋಟಿ ಕೋಟಿ ರೂಪಾಯಿ ಗಳಿಸಿದ ಹುಡುಗಿ.. ಹೇಗೆ..?