Monday, September 9, 2024

Latest Posts

2 ವರ್ಷದ ಪುಟ್ಟ ಮಗುವಿನ ಜೊತೆ ದಿನವೂ ಫುಡ್ ಡಿಲೆವರಿ ಮಾಡುವ ತಂದೆಯ ಕಥೆ

- Advertisement -

National News:  ಓರ್ವ ಜವಾಬ್ದಾರಿಯುವತ ಅಪ್ಪನಾಗಲಿ ಅಮ್ಮನಾಗಲಿ, ಅವರಿಗೆ ತಮ್ಮ ಮಕ್ಕಳನ್ನು ಜೋಪಾನ ಮಾಡುವುದೇ ಮುಖ್ಯವಾದ ಕೆಲಸವಾಗಿರುತ್ತದೆ. ಅಪ್ಪ ಅಮ್ಮ ಕಷ್ಟಪಟ್ಟು ದುಡಿಯುವುದೇ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ. ದೆಹಲಿಯಲ್ಲಿ ಇಂಥದ್ದೇ ಜವಾಬ್ದಾರಿಯುತ ಅಪ್ಪ ಓರ್ವ ವ್ಯಕ್ತಿಯ ಕಣ್ಣಿಗೆ ಬಿದ್ದಿದ್ದು, ಆ ವ್ಯಕ್ತಿ ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ವಿವರಿಸಿದ್ದಾರೆ.

ಎರಡು ವರ್ಷದ ತನ್ನ ಪುಟ್ಟ ಮಗಳನ್ನು ಹೊತ್ತುಕೊಂಡು ಜೋಮೆಟೋ ಡಿಲೆವರಿ ಬಾಯ್ ದೆಹಲಿಯ ಮಾರುಕಟ್ಟೆಯೊಂದರಲ್ಲಿ ಇರುವ ಸ್ಟಾರ್ ಬಕ್ಸ್‌ಗೆ ಹೋಗಿದ್ದಾನೆ. ಅಲ್ಲಿ ಫುಡ್ ತೆಗೆದುಕೊಂಡು, ಡಿಲೆವರಿ ಮಾಡಬೇಕಾಗಿತ್ತು. ಈ ವೇಳೆ ಸ್ಟಾರ್ ಬಕ್ಸ್ ಮ್ಯಾನೇಜರ್ ಡಿಲೆವರಿ ಬಾಯ್ ಸೋನು ಜೊತೆ ಅವನ ತೋಳಿನಲ್ಲಿ ಇದ್ದ ಅವನ ಮಗುವನ್ನು ಗಮನಿಸಿ, ಈ ಮಗು ಯಾರು. ಇವಳನ್ಯಾಕೆ ನೀನು ನಿನ್ನ ಕೆಲಸದ ವೇಳೆ ಹಿಡಿದು ತಿರುಗುತ್ತಿದ್ದಿ ಎಂದು ಕೇಳಿದ್ದಾರೆ.

ಆಗ ಸೋನು ಈ ಬಗ್ಗೆ ವಿವರಿಸಿದ್ದು, ಪತ್ನಿ ತೀರಿ ಹೋದ ಕಾರಣ, ಮಗು ಅನಾಥವಾಗಿದೆ. ಹಾಗಾಗಿ ಮನೆಯಲ್ಲಿ ಮಗುವನ್ನು ಒಬ್ಬಳೇ ಬಿಟ್ಟು ಬರುವ ಹಾಗಿಲ್ಲ. ಮಗುವನ್ನು ತನ್ನೊಂದಿಗೆ ಡಿಲೆವರಿ ತೆಗೆದುಕೊಳ್ಳಲು ಮತ್ತು ತಲುಪಿಸುವ ವೇಳೆ ಕರೆದುಕೊಂಡು ಹೋಗಲೇಬೇಕಾಗಿದೆ. ಸಿಂಗಲ್ ಪೇರೆಂಟ್ ಆಗಿದ್ದ ಕಾರಣ, ಸೋನುಗೆ ಈ ಜವಾಬ್ದಾರಿ ತೆಗೆದುಕೊಳ್ಳಲೇಬೇಕಾಗಿದೆ ಎಂದು ಸೋನು ಹೇಳಿದ್ದಾನೆ.

ಸೋನುವಿನ ಮಾತು ಕೇಳಿ ಮ್ಯಾನೇಜರ್‌ ಸೋನು ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದು, ಮಗುವಿಗೆ ಸ್ಟಾರ್ ಬಕ್ಸ್ ಐಸ್‌ಕ್ರೀಮ್ ನೀಡಿ, ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ಮಕ್ಕಳು ಅಂದರೆ ಭಾರ ಎನ್ನುವ ಅಪ್ಪಂದಿರುವ ಇರುವ ಈ ಕಾಲದಲ್ಲಿ, ಸೋನು ರೀತಿಯ ಅಪ್ಪ ನಿಜಕ್ಕೂ ಅತ್ಯುತ್ತಮರೆನ್ನಿಸುತ್ತಾರೆ.

- Advertisement -

Latest Posts

Don't Miss