ರಾಮನಾಮ ಜಪದ ಮಹಿಮೆ ಎಂಥದ್ದು ಎಂಬ ಬಗ್ಗೆ ನಾವು ಈಗಾಗಲೇ ನಿಮಗೆ 2 ಕಥೆಯನ್ನು ಹೇಳಿದ್ದೇವೆ. ಈಗ ರಾಮನಾಮ ಜಪದ ಬಗ್ಗೆ ಮತ್ತೊಂದು ಕಥೆಯನ್ನ ಕೇಳೋಣ.
ಒಂದು ಊರಲ್ಲಿ ಓರ್ವ ಸಾಧು ನೆಲೆಸಿದ್ದ. ಅವನು ಢೋಲು ಬಾರಿಸುತ್ತ, ರಾಮನ ಭಜನೆ ಮಾಡುತ್ತ, ರಾಮನಾಮ ಜಪ ಮಾಡುತ್ತ ಮನೆಯಲ್ಲಿ ಕುಳಿತಿರುತ್ತಿದ್ದ. ಅವನ ಮನೆಯ ಪಕ್ಕದ ಕುಟೀರದಲ್ಲಿರುವ ಓರ್ವ ಮನುಷ್ಯನಿಗೆ, ಇವನ ರಾಮನಾಮ ಜಪದಿಂದ ತೊಂದರೆಯಾಗುತ್ತಿತ್ತು. ಸಿಟ್ಟು ಬರುತ್ತಿತ್ತು. ಕಿರಿಕಿರಿಯಾಗುತ್ತಿತ್ತು.
ಆತ ಒಂದು ದಿನ ಈ ಸಾಧುವಿನ ಕುಟೀರಕ್ಕೆ ಬಂದು, ನಿನಗಂತೂ ಮಾಡಲು ಬೇರೆ ಕೆಲಸವಿಲ್ಲ. ದಿನವಿಡೀ ರಾಮ ರಾಮ ಎನ್ನುತ್ತಿರುತ್ತಿ. ನಮಗೆ ಹಾಗಲ್ಲ, ಹೊರಗೆ ಹೋಗಿ, ದುಡಿದು ಬರಬೇಕಾಗುತ್ತದೆ. ನಿನ್ನ ರಾಮನಾಮ ಭಜನೆಯಿಂದ ನನಗೆ ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ. ಮಧ್ಯಾಹ್ನದ ಸಮಯವಾದರೂ, ನಿನ್ನ ಭಜನೆಗೊಂದು ವಿರಾಮ ಕೊಡು ಎಂದು ಸಿಟ್ಟಿನಿಂದ ಹೇಳುತ್ತಾನೆ.
ಅದಕ್ಕೆ ಸಾಧು ಹೇಳುತ್ತಾನೆ. ನೀನು ಕೂಡ ಬಿಡುವಿನ ಸಮಯದಲ್ಲಿ ರಾಮನಾಮ ಜಪ ಮಾಡು. ರಾಮನ ಭಜನೆ ಮಾಡು, ನಿನ್ನ ಮನಸ್ಸಿಗೆ ಖುಷಿ ಸಿಗುತ್ತದೆ ಎಂದು ಹೇಳುತ್ತಾನೆ. ಅದಕ್ಕೆ ಆ ಮನುಷ್ಯ ಕೇಳುತ್ತಾನೆ. ನಾನು ರಾಮ ರಾಮ ಎಂದು ಜಪ ಮಾಡುತ್ತ ಕುಳಿತರೆ, ನಿನ್ನ ರಾಮ ನನಗೆ ಊಟ ಹಾಕುತ್ತಾನಾ..? ನನ್ನ ಕುಟುಂಬವನ್ನು ಸಾಕುತ್ತಾನಾ..? ಎಂದು ಕೇಳುತ್ತಾನೆ.
ಅದಕ್ಕೆ ಸಾಧು ಹೇಳುತ್ತಾನೆ. ನಾನು ರಾಮ ನಾಮ ಜಪ ಮಾಡಿಕೊಂಡೇ ಇದ್ದೇನೆ. ರಾಮನ ದಯೆಯಿಂದ ನನಗೆ ಭರಪೂರ ಭೋಜನ ಸಿಗುತ್ತಿದೆ. ನೀನು ರಾಮನಾಮ ಜಪ ಮಾಡಿನೋಡು. ನಿನಗೂ ಊಟ ಸಿಗಬಹುದು ಎಂದು ಹೇಳುತ್ತಾನೆ. ಅದಕ್ಕೆ ಆ ಮನುಷ್ಯ ಹೇಳುತ್ತಾನೆ. ಸರಿ ನಾನು ಇಂದು ನಿನ್ನೊಂದಿಗೆ ರಾಮನಾಮ ಜಪ ಮಾಡುತ್ತೇನೆ. ನಿನ್ನ ರಾಮ ಇಂದು ನನಗೆ ಊಟ ಕೊಟ್ಟರೆ, ಜೀವನ ಪೂರ್ತಿ ರಾಮನ ಭಜನೆ ಮಾಡಿಕೊಂಡೇ ಇದ್ದು ಬಿಡುತ್ತೇನೆ. ಇಲ್ಲವಾದಲ್ಲಿ ನೀನು ಸಂಪೂರ್ಣವಾಗಿ ಈ ಢೋಲು ಬಡಿಯುವುದನ್ನ ನಿಲ್ಲಿಸಿಬಿಡಬೇಕು ಎಂದು ಹೇಳುತ್ತಾನೆ.
ಆಗ ಆ ಸಾಧು ಹೇಳುತ್ತಾನೆ. ನಿನಗೆ ಭೋಜನ ಸಿಗುತ್ತದೆ ಅನ್ನೋ ನಂಬಿಕೆ ನನಗಿದೆ. ಬಾ ನನ್ನೊಂದಿಗೆ ರಾಮನಾಮ ಜಪ ಮಾಡು ಎನ್ನುತ್ತಾನೆ. ಇಬ್ಬರೂ ಸೇರಿ, ರಾತ್ರಿಯವರೆಗೆ ರಾಮನಾಮ ಜಪ, ರಾಮ ಭಜನೆ ಮಾಡುತ್ತಾರೆ. ರಾತ್ರಿ ಊಟದ ಸಮಯವಾಗುತ್ತದೆ. ಹಸಿವಾಗಲು ಶುರುವಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ನಾನಿಂದು ಊಟ ಮಾಡಬಾರದು. ಮತ್ತು ಇವನ ರಾಮ ಸುಳ್ಳೆಂದು ನಾನು ಸಾಬೀತು ಮಾಡಬೇಕು ಎಂದುಕೊಳ್ಳುತ್ತಾನೆ. ಹಾಗಾದ್ರೆ ಆ ನಾಸ್ತಿಕ ರಾಮನಾಮ ಜಪ ಸುಳ್ಳೆಂದು ಸಾಬೀತು ಮಾಡುತ್ತಾನಾ..? ಅಥವಾ ಸಾಧವಿನ ರಾಮ ಭಕ್ತಿಯೇ ಗೆಲ್ಲುತ್ತದಾ..? ಈ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ..
ಈ ಸ್ಮಶಾನ ಮಧ್ಯದಲ್ಲಿ ಚಿತೆಯ ಎದುರು ವೇಶ್ಯೆಯರು ನೃತ್ಯ ಮಾಡುತ್ತಾರೆ.. ಯಾಕೆ ಗೊತ್ತಾ..?