ಇದರ ಮೊದಲ ಭಾಗದಲ್ಲಿ ನಾವು ನಾಸ್ತಿಕನೊಬ್ಬ, ರಾಮನಾಮ ಜಪ ಮಾಡುತ್ತಿದ್ದ ಸಾಧುವಿನ ಮನೆಗೆ ಬಂದು ಜಗಳ ಮಾಡಿದ್ದು, ಅವನೊಂದಿಗೆ ನಿನ್ನ ರಾಮ ಸುಳ್ಳು ಅನ್ನೋದನ್ನ ಸಾಬೀತು ಮಾಡೋಕ್ಕೆ, ಅವನ ಮನೆಯಲ್ಲೇ ಕುಳಿತು, ರಾಮನಾಮ ಜಪ ಮಾಡಲು ಸಿದ್ಧನಾಗಿದ್ದರ ಬಗ್ಗೆ ಹೇಳಿದ್ದೆವು. ಹಾಗಾದ್ರೆ ಆ ನಾಸ್ತಿಕ ರಾಮನಾಮ ಜಪ ಸುಳ್ಳೆಂದು ಸಾಬೀತು ಮಾಡುತ್ತಾನಾ..? ಅಥವಾ ಸಾಧವಿನ ರಾಮ ಭಕ್ತಿಯೇ ಗೆಲ್ಲುತ್ತದಾ..? ಇಲ್ಲವಾ..? ಮುಂದೇನಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕೊಂಚ ಹೊತ್ತಲ್ಲೇ, ಅಲ್ಲೇ ದಾರಿಯಲ್ಲಿ ಹೋಗುತ್ತಿದ್ದ ದಾರಿ ಹೋಕರು, ಇದು ಒಳ್ಳೆಯ ಜಾಗವಾಗಿದೆ. ಇಲ್ಲಿ ನಾವು ಅಡುಗೆ ಮಾಡಿ, ಊಟ ಮಾಡಿ ಮುಂದೆ ಹೋಗೋಣವೆಂದು ಹೇಳುತ್ತಾರೆ. ಇದನ್ನ ಆ ನಾಸ್ತಿಕ ಮನುಷ್ಯ ನೋಡುತ್ತಿರುತ್ತಾನೆ. ಆದ್ರೆ ಸಾಧು ಒಳಗೆ ಕುಳಿತು ಭಜನೆ ಮಾಡುತ್ತಿರುತ್ತಾನೆ. ಇತ್ತ ದಾರಿಹೋಕರು, ಭೂರಿ ಭೋಜನ ಮಾಡುತ್ತಾರೆ.
ಅಷ್ಟೊತ್ತಿಗೆ, ದರೋಡೆ ಕೋರರ ಗುಂಪು ಬರುತ್ತದೆ. ಅವರನ್ನು ನೋಡಿ, ದಾರಿಹೋಕರು, ಮಾಡಿದ ಅಡುಗೆಯನ್ನು ಅಲ್ಲೇ ಬಿಟ್ಟು ಓಡಿ ಹೋಗುತ್ತಾರೆ. ಆ ಸ್ಥಳಕ್ಕೆ ಬಂದ ದರೋಡೆಕೋರರು, ಈ ಭೋಜನ ಯಾರು ಮಾಡಿರಬಹುದು..? ನಮ್ಮನ್ನು ಕೊಲ್ಲುವುದಕ್ಕಾಗಿ, ಈ ಭೋಜನವನ್ನು ಯಾಕೆ ಮಾಡರಬಾರದು..? ಎಂದೆಲ್ಲ ಮಾತನಾಡಿಕೊಳ್ಳುತ್ತಾರೆ.
ಆಗ ಅಲ್ಲೇ ಇಣುಕಿ ನೋಡುತ್ತಿದ್ದ ನಾಸ್ತಿಕ ಈ ದರೋಡೆಕೋರರ ಕಣ್ಣಿಗೆ ಬೀಳುತ್ತಾನೆ. ಅವನನ್ನು ಎಳೆದು ತರಲಾಗತ್ತೆ. ಮತ್ತು ಈ ಅಡಿಗೆ ಮಾಡಿದ್ದು ನೀನೇ ತಾನೇ..? ಇಲ್ಲಿ ನಾವು ಎರಡನೇ ಬಾರಿಗೆ ಬರುತ್ತಿದ್ದೇವೆ. ಹಾಗಾಗಿ ನೀನು ನಮ್ಮನ್ನು ಕೊಲ್ಲಲು, ಈ ರೀತಿ ಸುಹಾಸನೆ ಭರಿತವಾದ ಭೋಜನ ಮಾಡಿ, ಅದರಲ್ಲಿ ವಿಷ ಬೆರೆಸಿದ್ದಿಯ ತಾನೇ..? ಎಂದು ಪ್ರಶ್ನಿಸುತ್ತಾರೆ.
ಅದಕ್ಕೆ ಆ ನಾಸ್ತಿಕ, ಇಲ್ಲ ಇಲ್ಲ. ನಾನು ಇಲ್ಲೇ ಈ ಸಾಧುವಿನ ಮನೆಯಲ್ಲಿ ರಾಮ ಭಜನೆ ಮಾಡುತ್ತ ಕುಳಿತಿದ್ದೆ. ಆದ್ರೆ ಇಲ್ಲಿ ಯಾರೋ ಅಡುಗೆ ಮಾಡುತ್ತಿದ್ದನ್ನು ಕಂಡು, ಇಲ್ಲಿ ಏನಾಗುತ್ತಿದೆ ಎಂದು ನೋಡಲಷ್ಟೇ ಹೊರಬಂದೆ. ಈ ಅಡಿಗೆ ಮಾಡಿದ್ದು ನಾನಲ್ಲ. ಯಾವುದೋ ದಾರಿ ಹೋಕರು ಎಂದು ಹೇಳುತ್ತಾನೆ. ಆದರೆ ದರೋಡೆಕೋರರು ಅವನ ಮಾತು ಕೇಳುವುದಿಲ್ಲ.
ಅವನಿಗೆ ಆ ಭೋಜನ ಸೇವಿಸಲು ಹೇಳುತ್ತಾರೆ. ಆಗ ಅವನು ಒಂದು ಬಟ್ಟಲಿಗೆ ಅಲ್ಲಿದ್ದ ಭೋಜನವನ್ನ ಬಡಿಸಿಕೊಂಡು ಹೊಟ್ಟೆ ತುಂಬ ತಿನ್ನುತ್ತಾನೆ. ಆಗ ದರೋಡೆಕೋರರಿಗೆ ಇವನು ಹೇಳಿದ್ದು ಸತ್ಯವೆಂದು ಎನ್ನಿಸುತ್ತದೆ. ಅವರು ಅಲ್ಲಿಂದ ಹೊರಟು ಹೋಗುತ್ತಾರೆ. ಇತ್ತ ಸಾಧುವಿನ ಬಳಿ ಬಂದ ನಾಸ್ತಿಕ, ಉಳಿದ ಭೋಜನವನ್ನು ಸಾಧುವಿಗೆ ಬಡಿಸಿ, ಊಟ ಮಾಡಲು ಹೇಳುತ್ತಾನೆ. ಮತ್ತು ನಿನ್ನ ರಾಮನಿಗೆ ನಂಬಿದ್ದಕ್ಕೆ, ನಾನು ಕಷ್ಟ ಪಡದೇ ನನಗೆ ಊಟ ಸಿಕ್ಕಿದೆ.
ನಾನು ಇನ್ನು ಮುಂದೆ ರಾಮನ ಭಜನೆ ಮಾಡುತ್ತೇನೆ. ರಾಮನ ಜಪ ಮಾಡುತ್ತೇನೆ. ನಿಯತ್ತಿನಿಂದ ಕೆಲಸವನ್ನೂ ಮಾಡುತ್ತೇನೆ. ನಿನ್ನ ಭಜನೆಗೆ ನಾನೆಂದೂ ಅಡ್ಡಿ ಬರುವುದಿಲ್ಲ. ನಾನು ಮಾಡಿದ್ದು ತಪ್ಪು ಮತ್ತು ರಾಮನಾಮ ಜಪವೇ ಶ್ರೇಷ್ಟವೆಂದು ನನಗೆ ಗೊತ್ತಾಯಿತು ಎಂದು ಹೇಳುತ್ತಾನೆ.
ಈ ಸ್ಮಶಾನ ಮಧ್ಯದಲ್ಲಿ ಚಿತೆಯ ಎದುರು ವೇಶ್ಯೆಯರು ನೃತ್ಯ ಮಾಡುತ್ತಾರೆ.. ಯಾಕೆ ಗೊತ್ತಾ..?