ಮಲಗುವಾಗ ಒಬ್ಬೊಬ್ಬರದ್ದು ಒಂದೊಂದು ಭಂಗಿಯಿರುತ್ತದೆ. ಕೆಲವರು ಎಡಗಡೆ ಮುಖ ಮಾಡಿ ಮಲಗಿದರೆ, ಇನ್ನು ಕೆಲವರು ಬಲಗಡೆ ಮುಖ ಮಾಡಿ ಮಲಗುತ್ತಾರೆ. ಮತ್ತೆ ಕೆಲವರು ನೇರವಾಗಿ ಮಲಗಿದ್ರೆ, ಕೆಲವರು ಅಡ್ಡಲಾಗಿ ಮಲಗುತ್ತಾರೆ. ಹೀಗೆ ಮಲಗುವ ರೀತಿ ನೋಡಿಯೇ ಅವರ ಗುಣ ಎಂಥದ್ದು ಅಂತಾ ತಿಳಿಯಬಹುದು. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಮೊದಲನೇಯದ್ದು ದಿಂಬನ್ನ ಹಿಡಿದು ಅಡ್ಡಲಾಗಿ ಮಲಗೋದು. ಅಥವಾ ಕವಚಿ ಮಲಗೋದು. ಇವರು ತುಂಬಾ ಸೆನ್ಸಿಟಿವ್ ಸ್ವಭಾವದವರಾಗಿರ್ತಾರೆ. ಇವರಿಗೆ ಪ್ರತೀ ಚಿಕ್ಕ ಚಿಕ್ಕ ವಿಷಯಕ್ಕೂ ಬೇಸರವಾಗುತ್ತದೆ. ಅಲ್ಲದೇ ಇವರನ್ನು ಇವರು ಒಂಟಿ ಎಂದುಕೊಳ್ಳುತ್ತಾರೆ. ಇವರ ಬಗ್ಗೆ ಇವರಿಗೆ ಕೀಳರಿಮೆ ಇರುತ್ತದೆ. ಇವರು ಎಲ್ಲರೊಂದಿಗೂ ಖುಷಿ ಖುಷಿಯಾಗಿರಬೇಕು. ತನ್ನ ಸುತ್ತಮುತ್ತಲಿರುವವರುವ ತನ್ನ ಬಗ್ಗೆ ಪಾಸಿಟಿವ್ ಆಗಿಯೇ ಮಾತನಾಡಬೇಕು, ಯೋಚಿಸಬೇಕು ಅನ್ನೋ ಭಾವನೆ ಇವರಿಗಿರುತ್ತದೆ.
ಎರಡನೇಯದಾಗಿ ಎಡಬದಿಗೆ ಅಥವಾ ಬಲ ಬದಿಗೆ ತಿರುಗಿ, ಕಾಲು ನೇರವಾಗಿರುವಂತೆ ಮಲಗುವವರು. ಇವರು ಸಾಮಾಜಿಕವಾಗಿರಲು ಇಚ್ಛಿಸುವ ವ್ಯಕ್ತಿಗಳು. ಇವರು ಎಲ್ಲರೊಂದಿಗೂ ಉತ್ತಮವಾಗಿರಲು ಬಯಸುವವರು. ಮತ್ತು ಯಾವುದೇ ಸನ್ನಿವೇಶದಲ್ಲೂ ಧೈರ್ಯವಾಗಿರುವವರು. ಎಲ್ಲರ ಕಷ್ಟ ಕಾರ್ಪಣ್ಯಗಳನ್ನು ಆಲಿಸಿ, ಅದಕ್ಕೆ ಪರಿಹಾರ ಕೊಡುವ ಸ್ವಭಾವ ಇರುವವರು.
ಮೂರನೇಯದಾಗಿ ನೇರವಾಗಿ ಮಲಗುವವರು. ಇವರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವ ಆಸಕ್ತಿ ಹೊಂದಿರುವವರು. ಇವರ ಕೆಲಸದಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದು ಅನ್ನೋ ಮನೋಭಾವ ಉಳ್ಳವರು. ಅಲ್ಲದೇ, ನಿಯತ್ತಾಗಿ ದುಡಿದು, ಸಕಲ ಐಶ್ವರ್ಯ ಗಿಟ್ಟಿಸಿಕೊಳ್ಳುವ ಯೋಚನೆಯಲ್ಲೇ ಮುಳುಗಿರುತ್ತಾರೆ. ಇವರು ಹೊಸ ಹೊಸ ಬ್ಯುಸಿನೆಸ್ ಐಡಿಯಾಗಳನ್ನ ಯೋಚಿಸುವ ಜನರಾಗಿರುತ್ತಾರೆ.




