ಪ್ರಪಂಚಕ್ಕೆ ಮಹಾರೋಗ! ಆ ಶಿವನೇ ಚಾಟಿ ಕಣೋ : Lahari Velu Podcast

Sandalwood News: ಸ್ಯಾಂಡಲ್‌ವುಡ್ ಆಡಿಯೋ ವಿತರಕ ಲಹರಿ ವೇಲು ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಮುಂಚಿನ ಕಾಲ, ಬಾಲ್ಯದ ಬಗ್ಗೆ ಮಾತನಾಡಿದ್ದಾರೆ.

ಲಹರಿ ವೇಲು ಅವರು ಹೇಳುವುದೇನೆಂದರೆ, ಮುಂಚೆ ಎಲ್ಲಾ ಇದ್ದ ಆಟಗಳ ಬಗ್ಗೆ ಇಂದಿನ ಮಕ್ಕಳಿಗೆ ತಿಳಿದೇ ಇಲ್ಲ. ನಾನು ಬಾಲ್ಯದಲ್ಲಿ ಆಡುತ್ತಿದ್ದ ಎಲ್ಲ ಆಟಗಳ ಹೆಸರನ್ನು ಬರೆದಿಟ್ಟುಕ“ಂಡಿದ್ದೇನೆ. ಇಂದಿನ ಮಕ್ಕಳಿಗೆ ಸೆಲ್ ಫೋನ್ ಬಿಟ್ಟರೆ ಬೇರೆನೂ ತಿಳಿದಿಲ್ಲ. ಅದ“ಂದು ಮಹಾಮಾರಿಯಾಗಿ ಪರಿಣಮಿಸಿದೆ ಅಂತಾರೆ ಲಹರಿ ವೇಲು.

ಮನೆಯಲ್ಲಿ ಮುಂಚೆ ಇದ್‌ದ ಪ್ರೀತಿ, ಕಾಳಜಿ ಈಗಿಲ್ಲ. ಮನೆ ಮಂದಿ ಜತೆ ಮಾತನಾಡಲು, ಸ್ಪಂದಿಸಲು ಸಾಧ್ಯವಿಲ್ಲ. ಆದರೆ ಬೇರೆ ಯಾರೋ ಮಾಡಿರುವ ಮೆಸೇಜ್, ಕಾಲ್‌ಗೆ ಗಂಟೆಗಟ್ಟಲೆ ರಿಪ್ಲೈ ನೀಡುತ್ತಾರೆ. ಸಂಬಂಧವನ್ನು ಹಾಳು ಮಾಡುವ ಸಾಧನ ಅಂತಾರೆ ಲಹರಿ ವೇಲು. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

About The Author