Monday, December 23, 2024

Latest Posts

ಪುರಾಣ ಕಥೆಗಳಲ್ಲಿ ಬರುವ 7 ಚಿರಂಜೀವಿಗಳಿವರು.. ಭಾಗ 2

- Advertisement -

ಈ ವಿಷಯಕ್ಕೆ ಸಂಬಂಧಿಸಿದಂತೆ ಮೊದಲ ಭಾಗದಲ್ಲಿ 7 ಚಿರಂಜೀವಿಗಳಲ್ಲಿ 3 ಚಿರಂಜೀವಿಗಳ ಬಗ್ಗೆ ನಾವು ಸಂಪೂರ್ಣ ವಿವರಣೆ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ ಇನ್ನುಳಿದ 4 ಚಿರಂಜೀವಿಗಳ ಬಗ್ಗೆ ವಿವರಣೆ ನೀಡಲಿದ್ದೇವೆ..

ನಾಲ್ಕನೇಯವರು ವಿಭೀಷಣ. ರಾವಣನ ತಮ್ಮನಾದರೂ ಕೂಡ ವಿಭೀಷಣ, ರಾಮನ ಭಕ್ತನಾಗಿದ್ದ, ಅಹಿಂಸೆಯ ಮಾರ್ಗದಲ್ಲಿ ನಡೆಯುವವನಾಗಿದ್ದ. ರಾವಣನ ನಾಭಿಗೆ ಬಾಣ ಬಿಟ್ಟರೆ ಅವನ ಮೃತ್ಯುವಾಗುತ್ತದೆ ಎಂದು ರಾಮನಿಗೆ ಹೇಳಿ, ರಾವಣನ ಅಂತ್ಯವಾಗುಂತೆ ಮಾಡಿದವನೇ, ವಿಭೀಷಣ. ವಿಭೀಷಣ ರಾಮನ ಶರಣಾಗತಿಗೆ ಬಂದಾಗ, ರಾಮನೇ ವಿಭೀಷಣನಿಗೆ ಧೀರ್ಘಾಯಸ್ಸಿನ ವರವನ್ನು ನೀಡಿದ ಎನ್ನಲಾಗಿದೆ.

ಐದನೇಯವರು ಅಶ್ವತ್ಥಾಮ. ದ್ರೋಣಾಚಾರ್ಯರ ಏಕೈಕ ಪುತ್ರನಾದ ಅಶ್ವತ್ಥಾಮ ಚಿರಂಜೀವಿಯಾಗಿದ್ದಾನೆ. ದ್ರೋಣರ ಪ್ರಾಣ ಹೋಗಲು ಕೂಡ ಅಶ್ವತ್ಥಾಮನಿಗಿದ್ದ ಈ ವರವೇ ಕಾರಣವಾಗಿತ್ತು. ಪಾಂಡವರು ಇದನ್ನೇ ಆಯುಧವನ್ನಾಗಿ ಮಾಡಿ, ಅಶ್ವತ್ಥಾಮ ಹತೋ ಕುಂಜರಃ ಎಂದಿದ್ದರು. ಇಲ್ಲಿ ಕುಂಜನ ಎಂದರೆ ಆನೆ. ಆದರೆ ಕುಂಜರ ಎನ್ನುವ ವೇಳೆ, ಅದು ದ್ರೋಣರಿಗೆ ಕೇಳುವ ವೇಳೆ, ಕೃಷ್ಣ ಪಾಂಚಜನ್ಯವನ್ನ ಊದಿಬಿಟ್ಟ. ಹಾಗಾಗಿ ಕುಂಜರ ಎಂಬ ಪದ ದ್ರೋಣರಿಗೆ ಕೇಳಲಿಲ್ಲ. ಅವರು ದೇಹ ಬಿಟ್ಟು, ಆತ್ಮ ಸಮೇತರಾಗಿ, ದೇವರ ಬಳಿ ಈ ಬಗ್ಗೆ ಕೇಳಲು ಹೋಗುತ್ತಾರೆ. ಇದೇ ಸರಿಯಾದ ಸಮಯವೆಂದು ಪಾಂಡವರು ದ್ರೋಣರ ಆತ್ಮ ಅವರ ದೇಹ ಸೇರದಂತೆ ಮಾಡುತ್ತಾರೆ.

ಆರನೇಯವರು ಕೃಪಾಚಾರ್ಯ. ಮಹಾಭಾರತ ಯುದ್ಧ ನಡೆಯುವ ವೇಳೆ, ಕೌರವರ ಪರವಾಗಿ ಯುದ್ಧ ಮಾಡುವವರಲ್ಲಿ ಕೃಪಾಚಾರ್ಯರೂ ಒಬ್ಬರಾಗಿದ್ದರು. ಕೃಪಾಚಾರ್ಯರ ಸಹೋದರಿ, ಅಶ್ವತ್ಥಾಮನ ಅಮ್ಮನಾಗಿದ್ದಳು. ಕೃಪಾಚಾರ್ಯರು ಕೌರವರು ಮತ್ತು ಪಾಂಡವರಿಗೆ ಸಮವಾಗಿ ಯುದ್ಧ ಕೌಶಲ್ಯಗಳನ್ನು ಕಲಿಸಿದವರು. ಆದರೂ ಕೂಡ, ವಿಧಿಯಿಲ್ಲದೇ, ಕೌರವರ ಪರ ಹೋರಾಡಬೇಕಾಯಿತು. ಆದರೆ ಇವರಿಗೆ ಸಾವು ಬರಲಿಲ್ಲ. ಹಾಗಾಗಿ ಇವರು 7 ಚಿರಂಜೀವಿಗಳಲ್ಲಿ ಒಬ್ಬರಾಗಿದ್ದಾರೆ.

ಏಳನೇಯವರು ಬಲೀಂದ್ರ. ವಿರೋಚನನ ಪುತ್ರ ಮತ್ತು ಪ್ರಹ್ಲಾದನ ಮೊಮ್ಮಗನಾಗಿದ್ದ ಬಲೀಂದ್ರ,  ಮಾಡಿ ಇಡೀ ಲೋಕವನ್ನೇ ಗೆಲ್ಲಲು ಹೊರಟಿದ್ದ. ಹಾಗೇನಾದರೂ ಬಲೀಂದ್ರ ಇಡೀ ಲೋಕವನ್ನೇ ಗೆದ್ದರೆ, ಲೋಕಕ್ಕೆ ಒಳ್ಳೆಯದಲ್ಲ ಎಂದು ವಾಮನ ಮೂರ್ತಿಯಾಗಿ ಬಂದ ವಿಷ್ಣು, ಬಲೀಂದ್ರನನ್ನು ಲೋಕ ಗೆಲ್ಲುವುದರಿಂದ ತಡೆದ. ಆದರೆ ಬಲೀಂದ್ರನಿಗೆ ಚಿರಂಜೀವಿಯಾಗುವ ವರದಾನ ಕೊಟ್ಟ.

ಪಾಪಗಳನ್ನು ಮಾಡಿದ ಊರ್ವಶಿ ಅಪ್ಸರೆಯಾಗಲು ಕಾರಣವೇನು..?

ಅರ್ಜುನನ ರುಂಡವನ್ನು ಮುಂಡದಿಂದ ಬೇರ್ಪಡಿಸಿದವರು ಯಾರು ಗೊತ್ತೇ..?

ದೂರ್ವಾಸ ಮುನಿಗಳ ವಿಚಿತ್ರ ಬೇಡಿಕೆಯನ್ನ ಶ್ರೀರಾಮ ಹೇಗೆ ನೆರವೇರಿಸಿದ ಗೊತ್ತಾ..? ಭಾಗ 1

- Advertisement -

Latest Posts

Don't Miss