Friday, November 22, 2024

Latest Posts

ಪುರಾಣ ಕಥೆಗಳಲ್ಲಿ ಬರುವ 7 ಚಿರಂಜೀವಿಗಳಿವರು.. ಭಾಗ 1

- Advertisement -

ಪುರಾಣ ಕಥೆಗಳಲ್ಲಿ ನಾವು ಎಂತೆಂಥಾ ಮಹಾ ಪುರುಷರ ಬಗ್ಗೆ ಕೇಳಿದ್ದೇವೆ. ಕೆಲವರು ಮರಣ ಹೊಂದಿದವರ ಜೀವವನ್ನ ಉಳಿಸಿದವರಿದ್ದಾರೆ. ಇನ್ನು ಕೆಲವರು ಶಾಪ ನೀಡಿ, ಜೀವವಿದ್ದವರನ್ನ ಕಲ್ಲು ಮಾಡಿದ್ದಾರೆ. ಹಾಗೆ ಅಗಾಧವಾದ ಶಕ್ತಿಯುಳ್ಳ ಮಹಾಪುರುಷರ ಬಗ್ಗೆ ನಾವು ಕೇಳಿದ್ದೇವೆ. ಅದರಲ್ಲೂ ಕೆಲವರಿಗೆ ಚಿರಂಜೀವಿಯಾಗುವ ವರ ಸಿಕ್ಕಿದೆ. ಇವರಿಗೆ ಎಂದಿಗೂ ಸಾವು ಬರುವುದಿಲ್ಲ. ಇವರು ಈ ಭೂಮಿಯ ಮೇಲೆ ಇಂದಿಗೂ ಜೀವಿಸುತ್ತಿದ್ದಾರೆ. ಹಾಗಾಗಿ ಇಂದು ನಾವು ಪುರಾಣ ಕಥೆಗಳಲ್ಲಿ ಬರುವ 7 ಚಿರಂಜೀವಿಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ..

ಮೊಜಲನೇಯವರು ಹನುಮಾನ್. ಇವರು ಹಲವರ ಇಷ್ಟದೇವರು. ಶಕ್ತಿವಾನ್, ಬಲವಾನನಾಗಿರುವ ಹನುಮಂತ, ಸದಾ ರಾಮನ ಸೇವೆ ಮಾಡುತ್ತಿದ್ದ ಎಂಬುದನ್ನು ನಾವು ಓದಿರುತ್ತೇವೆ. ಇಂಥ ಶಕ್ತಿವಾನ್ ಹನುಮಾನ್, ಚಿರಂಜೀವಿಯಾಗಿದ್ದಾನೆಂದು ಹೇಳಲಾಗಿದೆ. ರಾಮ ಮತ್ತು ಸೀತೆಯೇ ಹನುಮಂತನಿಗೆ ಚಿರಂಜೀವಿಯಾಗಿರುವ ವರವನ್ನು ನೀಡಿದ್ದಾರೆ.

ಎರಡನೇಯವರು ಮಹರ್ಷಿ ವೇದವ್ಯಾಸರು. ಮಹಾಭಾರತವನ್ನು ರಚಿಸಿರುವ ವೇದವ್ಯಾಸರ ಬುದ್ಧಿವಂತಿಕೆ ಎಷ್ಟು ಅದ್ಭುತವಾಗಿರಬೇಕು ಅನ್ನೋದನ್ನ ನಾವು ಯೋಚಿಸಬೇಕಾಗಿದೆ. ವಸಿಷ್ಠರ ಪುತ್ರರಾದ ವ್ಯಾಸರಿಗೆ ಬಾಲ್ಯದಿಂದಲೇ ಅಗಾಧ ಶಕ್ತಿ ಇತ್ತು. ಹಾಗಾಗಿ ತ್ರೇತಾಯುಗದಲ್ಲೇ ದ್ವಾಪರ ಯುಗದಲ್ಲಿ ನಡೆಯಬಹುದಾದ ಘಟನೆಯ ಬಗ್ಗೆ ಇವರು ಮಹಾಭಾರತವನ್ನು ಬರೆದಿದ್ದರು.

ಮೂರನೇಯವರು ಪರಶುರಾಮ. ದಕ್ಷಿಣ ಕನ್ನಡವನ್ನು ಪರಶುರಾಮ ಕ್ಷೇತ್ರವೆಂದು ಕರೆಯಲಾಗತ್ತೆ. ರಾಮನ ಅವತಾರವಾದ ಪರಶುರಾಮರು ಕೂಡ, ಚಿರಂಜೀವಿಗಳಾಗಿದ್ದಾರೆ. ಬ್ರಾಹ್ಮಣ ಕುಲದಲ್ಲಿ ಜನಿಸಿದ್ದರೂ, ಕ್ಷತ್ರೀಯ ಧರ್ಮವನ್ನೂ ಪಾಲಿಸಿದ ಏಕೈಕರೆಂದರೆ, ಪರಶುರಾಮರು. ಇವರನ್ನು ಹಲವರು ಕಡೆ ಪೂಜಿಸಲಾಗತ್ತೆ. ಅಲ್ಲದೇ, ಅಮರರು ಎನ್ನಲಾಗಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನ ಮುಂದಿನ ಭಾಗದಲ್ಲಿ ತಿಳಿಯೋಣ..

ಪಾಪಗಳನ್ನು ಮಾಡಿದ ಊರ್ವಶಿ ಅಪ್ಸರೆಯಾಗಲು ಕಾರಣವೇನು..?

ಅರ್ಜುನನ ರುಂಡವನ್ನು ಮುಂಡದಿಂದ ಬೇರ್ಪಡಿಸಿದವರು ಯಾರು ಗೊತ್ತೇ..?

ದೂರ್ವಾಸ ಮುನಿಗಳ ವಿಚಿತ್ರ ಬೇಡಿಕೆಯನ್ನ ಶ್ರೀರಾಮ ಹೇಗೆ ನೆರವೇರಿಸಿದ ಗೊತ್ತಾ..? ಭಾಗ 1

- Advertisement -

Latest Posts

Don't Miss