Spiritual: ಸ್ನಾನ ಬರೀ ದೇಹ ಶುದ್ಧಿಗೆ ಮಾತ್ರ ಮಾಡುವುದಲ್ಲ. ಇದರಿಂದ ನಮ್ಮ ಮಾನಸಿಕ ಮತ್ತು ದೈಹಿಕ, ಆಧ್ಯಾತ್ಮಿಕ ಅಭಿವೃದ್ಧಿಯಾಗುತ್ತದೆ. ಅಲ್ಲದೇ, ಹಿಂದೂ ಧರ್ಮದಲ್ಲಿ ಸ್ನಾನ ಮಾಡುವುದಕ್ಕೂ ಹಲವು ನಿಯಮಗಳಿದೆ. ಅದು ಯಾವ ನಿಯಮ..? ನಾವು ಯಾವಾಗ ಸ್ನಾನ ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ಪ್ರತೀ ಹಿಂದೂಗಳು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಬೇಕು ಎನ್ನುವ ನಿಯಮವಿದೆ. ಏಕೆಂದರೆ, ಬ್ರಾಹ್ಮಿ ಮುಹೂರ್ತ ದೇವತೆಗಳ ಮುಹೂರ್ತ. ಹಾಗಾಗಿ ಈ ಸಮಯದಲ್ಲಿ ಎದ್ದು ಸ್ನಾನಾದಿಗಳನ್ನು ಮಾಡಿ, ಪೂಜೆ ಪುನಸ್ಕಾರ ಮಾಡಿ, ತಮ್ಮ ಕೆಲಸದಲ್ಲಿ ತೊಡಗಬೇಕು. ಹೀಗೆ ಮಾಡುವವರು ಉತ್ತಮ ಆರೋಗ್ಯ, ಯಶಸ್ಸು, ಸುಖ, ಶಾಂತಿ, ಎಲ್ಲವನ್ನೂ ಪಡೆಯುತ್ತಾರೆ.
ಇದು ಸಾಧ್ಯವಾಗದಿದ್ದವರು, ಬೆಳಿಗ್ಗೆ 6 ಗಂಟೆಯೊಳಗೆ ಸ್ನಾನ ಮಾಡಬೇಕು. ಇದು ಕೂಡ ಉತ್ತಮವಾದ ಮುಹೂರ್ತವೇ. ಇದಾದ ಬಳಿಕ ನೀವು ಸ್ನಾನ ಮಾಡಿದರೆ, ನಿಮ್ಮ ಆರೋಗ್ಯ ತಕ್ಕ ಮಟ್ಟಿಗೆ ಉತ್ತಮವಾಗಿರುತ್ತದೆ. ಆದರೆ ಅದೃಷ್ಟ, ಯಶಸ್ಸು ಸಿಗುವುದು ಸ್ವಲ್ಪ ಕಷ್ಟವಾಗಬಹುದು. ಇನ್ನು ಮಧ್ಯಾಹ್ನದ ವೇಳೆ ಸ್ನಾನ ಮಾಡಬಾರದು. ಇದು ಆರೋಗ್ಯಕ್ಕೆ ಉತ್ತಮವಲ್ಲ. ಮತ್ತು ಹಿಂದೂ ಧರ್ಮದಲ್ಲಿ ಇದನ್ನು ತಪ್ಪು ಎಂದು ಹೇಳಲಾಗುತ್ತದೆ.
ಸಂಜೆ ಹೊತ್ತಿಗೆ ಸ್ನಾನ ಮಾಡಬಹುದು. ಆದರೆ ಅದು ಎರಡನೇಯ ಸಲದ ಸ್ನಾನವಾಗಬಹುದು. ನೀವು ಬೆಳಿಗ್ಗೆಯಿಂದ ಸ್ನಾನ ಮಾಡದೇ, ಸಂಜೆಯೇ ಸ್ನಾನ ಮಾಡಿದರೆ, ನಿಮ್ಮ ಆರೋಗ್ಯ ಬಹಳ ಬೇಗ ಹಾಳಾಗುತ್ತದೆ. ಸಂಜೆ ಸ್ನಾನ ಮಾಡಿ, ದೀಪ ಹಚ್ಚಿ, ದೇವರ ಧ್ಯಾನ ಮಾಡಿದರೆ, ಉತ್ತಮ. ಆಗ ಲಕ್ಷ್ಮೀಯ ಕೃಪೆ ನಿಮ್ಮ ಮೇಲಾಗುತ್ತದೆ.
Ganesh Festival Special: ಗಣಪತಿಗೆ ಏಕದಂತನೆಂದು ಕರೆಯಲು ಕಾರಣವೇನು..?