Spiritual: ನಿದ್ದೆ ಮಾಡಲು ಕೂಡ ಹಿಂದೂ ಧರ್ಮದಲ್ಲಿ ನಿಯಮಗಳಿದೆ. ಕೆಲ ಸಮಯದಲ್ಲಿ ಮಲಗಬಾರದು. ಮಲಗುವ ಮುನ್ನ ಕೆಲ ಕೆಲಸಗಳನ್ನು ಮಾಡಬಾರದು. ಮಲಗುವಾಗ ದಿಕ್ಕು ಕಂಡು ಏಳಬೇಕು. ಹೀಗೆ ಮಲಗುವಾಗಲೂ ಹಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಅಂಥ ನಿಯಮಾನುಸರಣೆಯಿಂದ ನಮ್ಮ ಆರೋಗ್ಯ ಕೂಡ ಉತ್ತಮವಾಗಿರುತ್ತದೆ. ಹಾಗಾದ್ರೆ ಯಾವುದು ಆ ನಿಯಮಗಳು ಅಂತಾ ತಿಳಿಯೋಣ ಬನ್ನಿ..
ಹಗಲಿನಲ್ಲಿ ಮಲಗಬಾರದು. ಆರೋಗ್ಯವಂತರು, ಯುವಕ, ಯುವತಿಯರು ಗಟ್ಟಿಮುಟ್ಟಾಗಿದ್ದವರು ಹಗಲಿನಲ್ಲಿ ನಿದ್ರಿಸಬಾರದು ಎಂಬ ನಿಯಮವಿದೆ. ವೃದ್ಧರು, ಶಿಶುಗಳು, ಅನಾರೋಗ್ಯ ಪೀಡಿತರು ಮಾತ್ರ ಹಗಲಿನಲ್ಲಿ ನಿದ್ರಿಸಬಹುದು. ಹಗಲು ನಿದ್ರಿಸುವುದರಿಂದ ನೀವು ಜೀವನದಲ್ಲಿ ಎಂದಿಗೂ ಉದ್ಧಾರವಾಗುವುದಿಲ್ಲ. ಅಲ್ಲದೇ, ಹಗಲು ನಿದ್ರಿಸುವುದರಿಂದ ಅನಾರೋಗ್ಯ ಸಂಭವಿಸುತ್ತದೆ.
ರಾತ್ರಿ ಮಲಗುವಾಗ ಈ ರೀತಿ ಮಲಗಬಾರದು. ರಾತ್ರಿ ಮಲಗುವಾಗ ಮುರಿದ ಮಂಚ, ಬಟ್ಟೆ ಹಾಕದೇ, ಬಾಯಿ ತೆರೆದು, ಕೂದಲು ಬಿಟ್ಟು ಮಲಗಬಾರದು. ಹೀಗೆ ಮಲಗಿದರೆ, ನಕಾರಾತ್ಮಕ ಶಕ್ತಿ ನಮ್ಮ ದೇಹ ಸೇರುವ ಸಂಭವವಿರುತ್ತದೆ. ಹಾಗಾಗಿ ಈ ರೀತಿ ಮಲಗುವುದು ನಿಷಿದ್ಧ.
ಬೆಳಿಗ್ಗೆ ಏಳುವಾಗ ಹೀಗೆ ಏಳಬೇಕು. ಬೆಳಿಗ್ಗೆ ಏಳುವಾಗ, ಬಲ ಮಗ್ಗುಲಿನಲ್ಲಿ ಏಳಬೇಕು. ಬಲ ಮಗ್ಗುಲಿನಲ್ಲಿ ಎದ್ದರೆ, ಆ ದಿನ ಉತ್ತಮವಾಗಿರುತ್ತದೆ. ನಿಮಗೆ ನೆಮ್ಮದಿ ಇರುತ್ತದೆ. ಎಡ ಮಗ್ಗುಲಿನಲ್ಲಿ ಎದ್ದರೆ, ಮಾನಸಿಕ ಸಮಸ್ಯೆ, ಆರೋಗ್ಯ ಸಮಸ್ಯೆ ಅಥವಾ ನೆಮ್ಮದಿ ಹಾಳಾಗುವ ಸಾಧ್ಯತೆ ಹೆಚ್ಚು. ಆ ದಿನಪೂರ್ತಿ ಕೆಟ್ಟದ್ದಾಗಿರುತ್ತದೆ ಅನ್ನೋ ನಂಬಿಕೆ ಇದೆ. ಹಾಗಾಗಿ ಬೆಳಿಗ್ಗೆ ಏಳುವಾಗ ಬಲ ಮಗ್ಗುಲಿನಲ್ಲೇ ಏಳಬೇಕು.
ಬೆಳಿಗ್ಗೆ ಎದ್ದ ತಕ್ಷಣ ಈ ಶ್ಲೋಕ ಹೇಳಬೇಕು. ಇನ್ನು ಬೆಳಿಗ್ಗೆ ಎದ್ದ ತಕ್ಷಣ ಯಾರ ಮುಖವೂ ನೋಡದೇ, ನಿಮ್ಮ ಅಂಗೈ ನೋಡಿ ಶ್ಲೋಕ ಹೇಳಬೇಕು. ಈ ಶ್ಲೋಕವನ್ನು ಹೇಳುವುದರಿಂದ, ನಿಮ್ಮ ದಿನ ಉತ್ತಮವಾಗಿರುತ್ತದೆ. ಶ್ಲೋಕ ಹೇಳಿದ ಬಳಿಕ ದೇವರಿಗೆ ನಮಸ್ಕರಿಸಿ, ನಿಮ್ಮ ದಿನ ಶುರು ಮಾಡಬೇಕು. ಈ ಎಲ್ಲಾ ನಿಯಮಗಳನ್ನು ನಿಮ್ಮ ಜೀವನದಲ್ಲಿ ಅನುಸರಿಸುವುದರಿಂದ, ನಿಮ್ಮ ಆರೋಗ್ಯ, ಆರ್ಥಿಕ ಪರಿಸ್ಥಿತಿ ಚೆನ್ನಾಗಿರುತ್ತದೆ. ನೆಮ್ಮದಿಯೂ ಇರುತ್ತದೆ.
ಆ ಶ್ಲೋಕ ಹೀಗಿದೆ..
ಕರಾಗ್ರೆ ವಸತೇ ಲಕ್ಷ್ಮೀ, ಕರಮಧ್ಯೆ ಸರಸ್ವತಿ
ಕರಮೂಲೇತು ಸ್ಥಿತಾ ಗೌರಿ, ಪ್ರಭಾತೇ ಕರ ದರ್ಶನಂ
ತುಳಸಿ ಗಿಡವನ್ನು ಯಾವ ರೀತಿ ಬೆಳೆಸಿದರೆ ಮನೆಯಲ್ಲಿ ಸಾಕಾರಾತ್ಮಕತೆ ಹೆಚ್ಚುತ್ತದೆ ಗೊತ್ತಾ..?
ಯಾವ ಮಹಿಳೆಗೆ ಈ 3 ಅಭ್ಯಾಸವಿರುತ್ತದೆಯೋ, ಅಂಥ ಮನೆಯಲ್ಲಿ ನೆಮ್ಮದಿಯೇ ಇರುವುದಿಲ್ಲ..