ಕಣ್ಣು ದಾನ ಮಾಡೋಕ್ಕೂ ಇದೆ ರೂಲ್ಸ್..

Health Tips: ಸಾಯೋಕ್ಕೂ ಮುನ್ನ ತಮ್ಮ ಕಣ್ಣು ದಾನಮ ಮಾಡಬೇಕು ಎಂದು ಹಲವರು ಬಯಸುತ್ತಾರೆ. ಆದರೆ ಹಾಗೆ ಕಣ್ಣು ದಾನ ಮಾಡಲು ಏನೇನು ರೂಲ್ಸ್ ಫಾಲೋ ಮಾಡಬೇಕು ಎಂದು ಮಾತ್ರ, ಹಲವರಿಗೆ ಗೊತ್ತಿರುವುದಿಲ್ಲ. ಇಂದು ನಾವು ಕಣ್ಣು ದಾನ ಮಾಡೋಕ್ಕೆ ಏನೇನು ರೂಲ್ಸ್ ಇದೆ ಅಂತಾ ಹೇಳಲಿದ್ದೇವೆ.

ಯಾರೂ ಬೇಕಾದರೂ ಕಣ್ಣು ದಾನ ಮಾಡಬಹುದು. ಆದರೆ ಅವರ ಕಣ್ಣು ಆರೋಗ್ಯವಾಗಿರಬೇಕು. ಮೃತಪಟ್ಟು ಕೆಲವು ಗಂಟೆಗಳಲ್ಲೇ ಕಣ್ಣು ದಾನ ಮಾಡಿಬಿಡಬೇಕು ಎಂಬ ರೂಲ್ಸ್ ಇದೆ. ಏಕೆಂದರೆ, ಸಮಯ ಮೀರಿದರೆ,  ಕಣ್ಣಿನಿಂದ ಏನೂ ಉಪಯೋಗವಾಗುವುದಿಲ್ಲ. ಹಾಗಾಗಿ ಕಣ್ಣು ದಾನ ಮಾಡುವಾಗ, ಕೆಲ ವಿಷಯಗಳನ್ನು ಗಮನದಲ್ಲಿರಿಸಬೇಕು.

ಅದರಲ್ಲಿ ಮೊದಗಲನೇಯ ವಿಷಯ ಅಂದ್ರೆ, ನೀವು ಕಣ್ಣು ದಾನ ಮಾಡುವಾಗ, ಅದನ್ನು ನಿಮ್ಮ ಸಂಬಂಧಿಕರ ಬಳಿ ಹೇಳಿರಬೇಕು. ಏಕೆಂದರೆ, ಕಣ್ಣು ದಾನ ಮಾಡಬಯಸುವವರು ಮೃತಪಟ್ಟ ಬಳಿಕ, ಆ ಸಂಬಂಧಿಕರು ವೈದ್ಯರಿಗೆ ಮಾಹಿತಿ ನೀಡಿದರೆ, ತಕ್ಷಣ ವೈದ್ಯರು ಬಂದು, ಕಣ್ಣು ತೆಗೆದುಕೊಂಡು ಹೋಗುತ್ತಾರೆ. ಆದರೆ ನೀವು ಕಣ್ಣು ದಾನ ಮಾಡುತ್ತೇನೆಂದು ನೋಂದಣಿ ಮಾಡಿದ ವಿಷಯ ಯಾರಿಗೂ ಗೊತ್ತಿರದಿದ್ದಲ್ಲಿ, ಯಾರೂ ನಿಮ್ಮ ಸಾವಿನ ಬಗ್ಗೆ ವೈದ್ಯರಿಗೆ ಮಾಹಿತಿ ನೀಡುವುದಿಲ್ಲ. ಆಗ ನಿಮ್ಮ ಆಸೆ ಆಸೆಯಾಗಿಯೇ ಉಳಿಯುತ್ತದೆ. ನಿಮ್ಮ ಈ ತಪ್ಪು, ಓರ್ವ ವ್ಯಕ್ತಿಗೆ ದೃಷ್ಟಿ ಬರಿಸುವುದನ್ನು ತಪ್ಪಿಸುತ್ತದೆ.

ಇನ್ನು ಎರಡನೇಯದಾಗಿ ಕಣ್ಣು ದಾನ ಮಾಡುವವರ ಕಣ್ಣು ಆರೋಗ್ಯವಾಗಿರಬೇಕು. ಅವರು ಯಾವುದೇ ಖಾಯಿಲೆಗೆ ತುತ್ತಾಗಿ ಸಾಯಬಾರದು. ಕೆಲವರು ಕ್ಯಾನ್ಸರ್, ಕೊರೋನಾ ಅಥವಾ ಯಾವುದಾದರೂ ಇನ್‌ಫೆಕ್ಷನ್ ಬಂದು ಸಾವನ್ನಪ್ಪುತ್ತಾರೆ. ಅಂಥವರ ಕಣ್ಣು ದಾನ ಮಾಡಲು ಯೋಗ್ಯವಾಗಿರುವುದಿಲ್ಲ. ಹಾಗಾಗಿ ವೈದ್ಯರು ಅಂಥ ಕಣ್ಣುಗಳನ್ನು ತೆಗೆದುಕೊಳ್ಳುವುದಿಲ್ಲ. ಆರೋಗ್ಯವಾಗಿರುವ ಕಣ್ಣುಗಳನ್ನಷ್ಟೇ ದಾನ ಮಾಡಬಹುದು.

ಹೆಚ್‌ಐವಿ, ನರಗಳ ತೊಂದರೆ ಇದ್ದರೆ, ನಾಯಿ ಕಚ್ಚಿ ರೇಬಿಸ್‌ ರೋಗ ಬಂದು ಸತ್ತಿದ್ದರೆ, ಅಂಥವರ ಕಣ್ಣನ್ನು ದಾನ ಮಾಡಲಾಗುವುದಿಲ್ಲ. ಹಾಗಾಗಿ ವೈದ್ಯರು ಸಾವಿಗೆ ಕಾರಣ ತಿಳಿದು ಬಳಿಕ, ಕಣ್ಣನ್ನು ಕಲೆಕ್ಟ್ ಮಾಡಿಕೊಳ್ಳುತ್ತಾರೆ. ಏಕೆಂದರೆ, ಹೀಗೆ ರೋಗ ಬಂದು ತೀರಿಹೋದವರ ಕಣ್ಣುನ್ನು ಇನ್ನೊಬ್ಬರಿಗೆ ಹಾಕಿದರೆ, ಅವರಿಗೂ ಆ ಖಾಯಿಲೆ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಕಣ್ಣು ದಾನ ತೆಗೆದುಕೊಳ್ಳುವಾಗಲೂ, ವೈದ್ಯರು ಈ ಮುನ್ನೆಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ..

About The Author