Sunday, September 8, 2024

Latest Posts

ಸಿದ್ದರಾಮಯ್ಯ- ಡಿಕೆಶಿ ನಡುವೆ ಒಳಜಗಳವಿದೆ. ಹಾಗಾಗಿ ಕಾಂಗ್ರೆಸ್ ಸರ್ಕಾರ ಬಹಳ ದಿನ ಇರುವುದಿಲ್ಲ: ಜೋಶಿ

- Advertisement -

Dharwad News: ಧಾರವಾಡ: ಧಾರವಾಡದ ತಡಕೋಡ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಪ್ರಚಾರ ಸಭೆ ನಡೆದಿದ್ದು, ಸಭೆಯಲ್ಲಿ ಪ್ರಹ್ಲಾದ ಜೋಶಿ ಮತಯಾಚನೆ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಪ್ರಹ್ಲಾದ್ ಜೋಶಿ,  ಧಾರವಾಡ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಅಧಿಕಾರಿಗಳು ತೊಂದರೆ ಕೊಡುತ್ತಿದ್ದಾರೆ. ಕಾಂಗ್ರೆಸ್ ಪಾರ್ಟಿ ಸರ್ಕಾರದ ಮಾತು ಕೇಳಿ ಏನೂ ಮಾಡಬೇಡಿ. ಅನಗತ್ಯವಾಗಿ ನಮ್ಮ ಕಾರ್ಯಕರ್ತರಿಗೆ ತೊಂದರೆ ಕೊಡಬೇಡಿ.ತೊಂದರೆ ಕೊಟ್ಟರೆ ನಾನೇ ಬಂದು ನಿಲ್ಲುವೆ. ಈ ಕಾಂಗ್ರೆಸ್ ಸರ್ಕಾರ ಬಹಳ ದಿನ ಇರುವುದಿಲ್ಲ. ಕಾರ್ಯಕರ್ತರಿಗೆ ತೊಂದರೆ ಕೊಟ್ಟರೆ ನಾವು ಸುಮ್ಮನಿರುವುದಿಲ್ಲ. ಭಾರತ ಸರ್ಕಾರ ನಮ್ಮದೇ ಇದೆ. ಈ ಸರ್ಕಾರ ಬಹಳ ದಿನ ಇರಲಾರದು. ಸಿದ್ದರಾಮಯ್ಯ-ಡಿಕೆಶಿ ಮಧ್ಯೆ ಒಳ ಜಗಳ ಇದ್ದೇ ಇದೆ. ಸಿದ್ದರಾಮಯ್ಯ ಇಳಿಸಬೇಕು ಅಂತಾ ಡಿಕೆಶಿ ಹೊರಟಿದ್ದಾರೆ. ಡಿಕೆಶಿ ಒಳಗೆ ಹಾಕಿಸಲು ಸಿದ್ದರಾಮಯ್ಯ ಹೊರಟಿದ್ದಾರೆ. ಹೀಗಾಗಿ ಈ ಸರ್ಕಾರ ಬಹಳ ದಿನ ಇರುವುದಿಲ್ಲ. ಇಬ್ಬರ ಮಧ್ಯೆಯೂ ಒಬ್ಬರಿಗೊಬ್ಬರಿಗೆ ಪರಸ್ಪರ ಸಂಶಯ ಇದೆ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಬಿಜೆಪಿ-ಜೆಡಿಎಸ್ ಸೇರಿ ಅತ್ಯುತ್ತಮ ಪ್ರಚಾರದ ಸಂಕಲ್ಪ ಮಾಡಿದ್ದೇವೆ.ರಾಜ್ಯದಲ್ಲಿ 28 ಸ್ಥಾನವನ್ನೆಲ್ಲ ಗೆಲ್ಲುವ ಸಂಕಲ್ಪ ಮಾಡಿದ್ದೇವೆ. ದೇಶದ ಅಭಿವೃದ್ಧಿ ವಿರೋಧಿ ಪಕ್ಷ ಕಾಂಗ್ರೆಸ್. ಕಾಂಗ್ರೆಸ್ 65 ವರ್ಷ ಆಡಳಿತ ಮಾಡಿದೆ. ಯುಪಿಎ ಆಡಳಿತದ ಹತ್ತು ವರ್ಷದಲ್ಲಿ ಐದು ದುರ್ಬಲ ಆರ್ಥಿಕ ದೇಶಗಳಲ್ಲಿ ಸೇರಿತ್ತು. ಮೋದಿ ಬಂದ ಮೇಲೆ ಏನು ಮಾಡಿದಾರೆಂದು ಕೇಳುತ್ತಾರೆ. ಇವತ್ತು ಭಾರತ ಜಗತ್ತಿನ ಐದನೇ ಪ್ರಬಲ ದೇಶವಾಗಿದೆ.ಇದು ಸಾಧ್ಯವಾಗಿಸಿದ್ದು ನರೇಂದ್ರ ಮೋದಿ. ಕಾಂಗ್ರೆಸ್ ಅವಧಿಯಲ್ಲಿ ಎಲ್ಲ ಹೊಲಸೆದ್ದು ಹೋಗಿತ್ತು. ಇವರು ಮಾಡಿದ ಹೊಲಸು ತೊಳೆಯಲು ನಾವು ಐದು ವರ್ಷ ತೆಗೆದುಕೊಂಡಿದ್ದೇವೆ. ಹೀಗಾಗಿ ಈಗ ಮೂರನೇ ಅವಧಿಗೆ ಮೋದಿ ಗ್ಯಾರಂಟಿ ಕೊಡುತ್ತಿದ್ದೇವೆ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ರಾಹುಲ್ ಗಾಂಧಿ ಬಿಟ್ಟು ಎಲ್ಲರೊಂದಿಗೂ ನಾನು ಮಾತನಾಡುವೆ. ಖರ್ಗೆ ಸೇರಿದಂತೆ ಎಲ್ಲರೊಂದಿಗೂ ನಾನು ಮಾತನಾಡುವೆ. ಆದರೆ ರಾಹುಲ್ ಗಾಂಧಿ ಜೊತೆ ಮಾತನಾಡಲು ಮಾತ್ರ ಆಗೋದಿಲ್ಲ. ಯಾಕಂದ್ರೆ ರಾಹುಲ್ ಬಾಬಾ ಮಾತನಾಡಿದ್ದು ನಮಗೆ ತಿಳಿಯೋದಿಲ್ಲ. ಕಲಾವತಿ, ಲೀಲಾವತಿ ಅಂತಾ ಏನೆನೋ ಮಾತನಾಡ್ತಾರೆ. ಅವರಿಗೆ ಚೀಟಿ ಬರೆದು ಕೊಡ್ತಾರೆ. ಅದನ್ನಷ್ಟೆ ಹೇಳ್ತಾರೆ. ಎಂಟೆಂಟು ದಿನ ಅದನ್ನೆ ರಿಪೀಟ್ ಮಾತನಾಡ್ತಾರೆ. ಗ್ರಾಮೋಪೋನ್‌ದಲ್ಲಿ ಪದೇ ಪದೇ ತಿರುಗುವ ಹಾಡಿನಂಗೆ ರಾಹುಲ್ ಮಾತು ಇರುತ್ತೆ. ಅವರು I.N.D.I.A ಒಕ್ಕೂಟ ಮಾಡಿಕೊಂಡಿದ್ದರು. ಇದರ ಫುಲ್ ಫಾರ್ಮ್ ಚೀಟಿ ಇಲ್ಲದೇ ಹೇಳೊಕೆ ರಾಹುಲ್ ಗಾಂಧಿಗೆ ಬರೋದಿಲ್ಲ. ಚೀಟಿ ಇಲ್ಲದೇ ಹೇಳಿ ಅಂತಾ ನಾನೂ ಅವರಿಗೆ ಸವಾಲ್ ಸಹ ಹಾಕಿದ್ದೇ. ಕಾಂಗ್ರೆಸ್ ಪಕ್ಷದ ಕತೆ ಮುಗಿದಿದೆ. ಕರ್ನಾಟಕ, ತೆಲಂಗಾಣ, ಹಿಮಾಚಲದಲ್ಲಿ ಮಾತ್ರ ಕಾಂಗ್ರೆಸ್ ಇದೆ. ಹಿಮಾಚಲದಲ್ಲಿ ಈಗಾಗಲೇ ಅಲುಗಾಡುತ್ತಿದೆ ಎಂದು ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ.

ಪ್ರಜ್ವಲ್ ಹೆಸರು ಹೇಳದೇ ಕೇವಲ ಬಿಜೆಪಿ ನಾಯಕರ ಸಲಹೆಯಂತೆ ಕೆಲಸ ಮಾಡೋಣವೆಂದ ಪ್ರೀತಂಗೌಡ

ನಿರುದ್ಯೋಗಿ ಅಂದ್ರೆ ಅದು ರಾಹುಲ್ ಗಾಂಧಿ ಒಬ್ಬರೇ: 70 ವರ್ಷದ ಕಾಂಗ್ರೆಸ್ ಆಡಳಿತ ಟೀಕಿಸಿದ ಮತದಾರ

ಪಾಕ್ ನಟಿಗೆ ಮೆಸೇಜ್ ಮಾಡುತ್ತಿದ್ದಾರಂತೆ ಶೋಯೇಬ್‌ ಮಲ್ಲಿಕ್.. 3ನೇ ಪತ್ನಿ ಸನಾ ಫುಲ್ ಟ್ರೋಲ್

- Advertisement -

Latest Posts

Don't Miss