ನಾವು ಆರೋಗ್ಯಕರ ಆಹಾರವನ್ನೇ ತಿನ್ನಬೇಕು. ಆರೋಗ್ಯವಾಗಿರಬೇಕು. ವಯಸ್ಸಾದರೂ ನಮ್ಮಲ್ಲಿ ಶಕ್ತಿ ಇರಬೇಕು ಎಂದು ಬಯಸುತ್ತೇವೆ. ಆದ್ರೆ ಅದು ಪೂರ್ತಿಯಾಗಿ ಸಾಧ್ಯವಾಗುವುದಿಲ್ಲ. ನಾವು ಸ್ವಲ್ಪವಾದರೂ ಜಂಕ್ ಫುಡ್ ತಿಂದೇ ತಿನ್ನುತ್ತೇವೆ. ಹಾಗಾಗಿ ಇಂದು ನಾವು ಯಾವ 10 ಆಹಾರಗಳ ಸೇವನೆ ಸ್ಲೋ ಪಾಯ್ಸನ್‌ಗೆ ಸಮ ಅಂತಾ ತಿಳಿಯೋಣ ಬನ್ನಿ..
ಗಂಟಲ ಕಿರಿ ಕಿರಿಯನ್ನು ಹೋಗಲಾಡಿಸುವುದು ಹೇಗೆ..?
ಮೊದಲನೇಯ ಆಹಾರ ಚಹಾ. ಚಹಾ ನನಗೆ ಸೇರಲ್ಲ ಅಂತಾ ಹೇಳುವವರು ತುಂಬಾನೇ ವಿರಳ. ಯಾಕಂದ್ರೆ ಹಲವರ ಮುಂಜಾನೆ ಶುರುವಾಗೋದೇ ಚಹಾ ಕುಡಿದ ಮೇಲೆ. ಕೆಲವರಿಗೆ ಒಂದು ದಿನ ಚಹಾ ಕುಡಿದಿಲ್ಲವೆಂದಲ್ಲಿ ತಲೆ ನೋವಕ್ಕೆ ಶುರುವಾಗತ್ತೆ. ಹಾಗಾಗಿ ಬೆಳಿಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಊಟಕ್ಕೂ ಮುನ್ನ ಚಹಾ ಕುಡಿಯುತ್ತಾರೆ. ಆದ್ರೆ ಚಹಾ ಸ್ಲೋ ಪಾಯ್ಸನ್ ಇದ್ದ ಹಾಗೆ. ಇದರಲ್ಲಿ ಕೆಫಿನ್, ನಿಕೋಟಿನ್ ನಂಥ ಕೆಮಿಕಲ್ ಗಳಿದೆ. ಇದರಲ್ಲಿರುವ ಕೆಮಿಕಲ್ ನಮ್ಮ ದೇಹದಲ್ಲಿ 80ಕ್ಕೂ ಹೆಚ್ಚು ರೋಗವನ್ನು ತರಿಸೋ ಶಕ್ತಿಯನ್ನ ಹೊಂದಿದೆ.
ಎರಡನೇಯ ಆಹಾರ ಕಾಫಿ. ನಮ್ಮಲ್ಲಿ ಹಲವರು ಕಾಫಿ ಪ್ರಿಯರಿದ್ದಾರೆ. ಕೆಲವರಿಗೆ ಹೇಗೆ ಚಾ ಇಲ್ಲದಿದ್ದಲ್ಲಿ ತಲೆ ನೋವುತ್ತದೆಯೋ, ಅದೇ ರೀತಿ ಇನ್ನು ಕೆಲವರಿಗೆ ಕಾಫಿ ಕುಡಿಯದಿದ್ದಲ್ಲಿ, ತಲೆ ನೋವು ಶುರುವಾಗತ್ತೆ. ಇನ್ನು ಕೆಲವರು ತಲೆ ನೋವು ಶುರುವಾಯ್ತು ಅಂತಾ ಕಾಫಿ ಕುಡಿಯುವವರೂ ಇದ್ದಾರೆ. ಆದ್ರೆ ಕಾಫಿಯಲ್ಲಿ ಕೆಫಿನ್ ಅಂಶವಿದ್ದು, ಇದು ಹಲವು ರೋಗಗಳು ಬರಲು ಕಾರಣವಾಗುತ್ತದೆ. ಹಾಗಾಗಿ ಇದನ್ನು ಸ್ಲೋ ಪಾಯ್ಸನ್ ಎಂದು ಕೆರಯುತ್ತಾರೆ. ಅಲ್ಲದೇ ಗರ್ಭಿಣಿಯರು ಟೀ, ಕಾಫಿ ಕುಡಿದರೆ, ಅದರ ದುಷ್ಪರಿಣಾಮ ನಿಮ್ಮ ಮಕ್ಕಳ ಮೇಲೂ ಬೀಳುತ್ತದೆ.
ಜೀವನದಲ್ಲಿ ಅಪ್ಪಿ ತಪ್ಪಿಯೂ ಈ 5 ತಪ್ಪುಗಳನ್ನು ಮಾಡಬೇಡಿ..
ಮೂರನೇಯ ಆಹಾರ ಸಕ್ಕರೆ. ಸಕ್ಕರೆ, ಸಿಹಿ ತಿಂಡಿ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಡಯಟ್ ಮಾಡುವವರಿಗೆ ಮತ್ತು ಶುಗರ್ ಬಂದವರಲ್ಲಿ ಕೆಲವರಿಗಷ್ಟೇ ಸಿಹಿ ಅಂದ್ರೆ ಇಷ್ಟವಾಗಲ್ಲ. ಅದನ್ನ ಬಿಟ್ರೆ, ಹಲವರು ಸ್ವೀಟ್ಸ್ ಇಷ್ಟ ಪಡ್ತಾರೆ., ಆದ್ರೆ ಸಕ್ಕರೆ ಮತ್ತು ಸಕ್ಕರೆ ಬಳಸಿ ತಯಾರಿಸಿದ ಸ್ವೀಟ್ಸ್ ತಿಂದ್ರೆ ನಿಮಗೆ ಕ್ಯಾನ್ಸರ್ ಸೇರಿ, ಹಲವು ಖಾಯಿಲೆ ಬರುವುದು ಖಂಡಿತ. ಹಾಗಾಗಿಯೇ ಇದನ್ನು ಸ್ಲೋ ಪಾಯ್ಸನ್ ಎಂದು ಪರಿಗಣಿಸಲಾಗಿದೆ.
ನಾಲ್ಕನೇಯ ಆಹಾರ ಉಪ್ಪು. ನೀವು ಯಾವುದೇ ಸ್ವಾದಿಷ್ಟ ಖಾರಾ ಪದಾರ್ಥ ತಯಾರಿಸಿದರೂ, ಅದಕ್ಕೆ ಉಪ್ಪು ಬೀಳಲಿಲ್ಲವೆಂದಲ್ಲಿ, ಅದು ರುಚಿಯಾಗಲು ಸಾಧ್ಯವೇ ಇಲ್ಲ. ಎಲ್ಲ ಪದಾರ್ಥಗಳ ಜೀವಾಳವೇ, ಉಪ್ಪು. ಹಾಗಂತ ಅಗತ್ಯಕ್ಕಿಂತ ಹೆಚ್ಚು ಉಪ್ಪು ತಿಂದರೆ, ಬಿಪಿ, ಹಾರ್ಟ್ ಪ್ರಾಬ್ಲಮ್ ಸೇರಿ ಹಲವು ಆರೋಗ್ಯ ಸಮಸ್ಯೆ ಬರುತ್ತದೆ. ಹಾಗಾಗಿ ಇದನ್ನು ಸ್ಲೋ ಪಾಯ್ಸನ್ ಎಂದು ಪರಿಗಣಿಸಲಾಗಿದೆ. ನೀವು ಉಪ್ಪಿನ ಬದಲು ಸೈಂಧವ ಲವಣವನ್ನು ಬಳಸಬಹುದು. ಆದ್ರೆ ಇದನ್ನ ಕೂಡ ಲಿಮಿಟಿನಲ್ಲೇ ಬಳಸಬಹುದು.
ಐದನೇಯ ಆಹಾರ ಮೈದಾ. ಚಾಟ್ಸ್ ತಯಾರಿಸುವವರಲ್ಲಿ ಹೆಚ್ಚಿನವರು ಮೈದಾವನ್ನೇ ಬಳಸುತ್ತಾರೆ. ಎಷ್ಟೋ ಸಿಹಿ ಪದಾರ್ಥಗಳನ್ನು ಮೈದಾ ಬಳಸಿಯೇ ಮಾಡುತ್ತಾರೆ. ಬ್ರೆಡ್, ಬಿಸ್ಕತ್, ರಸ್ಕ್, ರೋಟಿಗಳನ್ನೆಲ್ಲ ಮೈದಾದಿಂದಲೇ ತಯಾರಿಸೋದು. ಇವೆಲ್ಲ ಎಷ್ಟು ರುಚಿಕರವಾಗಿ, ಕ್ರಿಸ್ಪಿಯಾಗಿ ಇರತ್ತೋ, ಅಷ್ಟೇ ಆರೋಗ್ಯಕ್ಕೆ ಹಾನಿಕಾರಕ.
ಉಳಿದ ಆಹಾರಗಳು ಯಾವುದು ಅನ್ನೋದನ್ನ ಮುಂದಿನ ಭಾಗದಲ್ಲಿ ತಿಳಿಯೋಣ.