Spiritual Story: ಒಂದೊಂದು ರಾಶಿಯವರಿಗೂ ಒಂದೊಂದು ಗುಣವಿರುತ್ತದೆ. ಕೆಲವರಿಗೆ ಸಿಟ್ಟು, ಕೆಲವರಿದ್ದು ಮೌನ, ಕೆಲವರು ಸದಾ ನಗು ನಗುತ್ತಲೇ ಇರುತ್ತಾರೆ, ಇನ್ನು ಕೆಲವರು ಎಷ್ಟೇ ಅನುಕೂಲ ಇದ್ದರು, ಸಿಟ್ಟು ಮುಸುಡಿಯಲ್ಲೇ ಇರುತ್ತಾರೆ. ಸದಾ ಇನ್ನೊಬ್ಬರ ಬಗ್ಗೆ ಕೊಂಕು ಮಾತನಾಡುತ್ತಲೇ ಇರುತ್ತಾರೆ. ಅದೇ ರೀತಿ ನಾವಿಂದು ಸೌಮ್ಯ ಸ್ವಭಾವದ ರಾಶಿಯವರ ಬಗ್ಗೆ ಹೇಳಲಿದ್ದೇವೆ.
ಕರ್ಕ ರಾಶಿ: ಕರ್ಕ ರಾಶಿಯವರು ಸೌಮ್ಯ ಸ್ವಭಾವದವರು. ಜೀವನ ಸಂಗಾತಿಗೆ ಹೆಚ್ಚು ಬೆಲೆ, ಪ್ರೀತಿ, ಕಾಳಜಿ ತೋರುತ್ತಾರೆ. ಅಷ್ಟೇ ಅಲ್ಲದೇ, ಮನೆಯವರಿಗಾಗಿ ಸದಾಕಾಲ ತಮ್ಮನ್ನು ತಾವು ಮೀಸಲಿಡುತ್ತಾರೆ. ರಕ್ತ ಸಂಬಂಧಿಕರಿಗೆ ಇವರು ಹೆಚ್ಚು ಬೆಲೆ ನೀಡುತ್ತಾರೆ. ಹೆತ್ತವರ ಮರ್ಯಾದೆಗಾಗಿ ತಮ್ಮ ಆಸೆಯನ್ನು ಬದಿಗಿಡುವ ಇವರು, ನೋವನ್ನು ನುಂಗಿ ಬದುಕುತ್ತಾರೆ.
ಕುಂಭ ರಾಶಿ: ಕುಂಭ ರಾಶಿಯವರು ಬೇರೆಯವರ ವಿಷಯದಲ್ಲಿ ಸಿಟ್ಟಾದರೂ, ಸಂಗಾತಿಯ ವಿಷಯ ಬಂದಾಗ ತಾಳ್ಮೆಯಿಂದ ಇರುತ್ತಾರೆ. ಜೀವನದಲ್ಲೂ ಎಷ್ಟೇ ನೋವಿದ್ದರೂ, ಅದನ್ನೆಲ್ಲ ಬದಿಗಿಟ್ಟು, ಜೀವನ ಸಂಗಾತಿ, ಮಕ್ಕಳು, ಮನೆಯವರ ಕಾಳಜಿ ವಹಿಸುತ್ತಾರೆ.
ವೃಷಭ ರಾಶಿ: ವೃಷಭ ರಾಶಿಯವರು ಭೂಮಿಯಷ್ಟು ತಾಳ್ಮೆ ಉಳ್ಳವರು. ಇವರು ಸದಾಕಾಲ ಮನೆಜನರ ಕಾಳಜಿ ವಹಿಸುವಲ್ಲಿ ಎತ್ತಿದ ಕೈ. ಮನೆಯವರಿಗಾಗಿ ತಮ್ಮ ಆಸೆ ಆಕಾಂಕ್ಷೆಯನ್ನು ಬದಿಗಿಟ್ಟು ಬಾಳುತ್ತಾರೆ. ಗುಣದಲ್ಲೂ ಇವರು ಸೌಮ್ಯ ಸ್ವಭಾವದವರು.
ಮಿಥುನ ರಾಶಿ: ಮಿಥುನ ರಾಶಿಯವರು ಎಲ್ಲರೊಂದಿಗೂ ಅಡ್ಜಸ್ಟ್ ಆಗಿ ಹೋಗುವ ಸ್ವಭಾವದವರು. ಇವರಿಗೆ ಅಷ್ಟು ಈಸಿಯಾಗಿ ಕೋಪ ಬರುವುದಿಲ್ಲ. ಆದರೆ ಕೋಪ ಬಂದರೆ ಮಾತ್ರ,ಆ ಕೋಪಕ್ಕೆ ಮಿತಿ ಇರುವುದಿಲ್ಲ. ಸಂಗಾತಿಯ ವಿಷಯದಲ್ಲಿ ಇವರು ತಾಳ್ಮೆಯಿಂದ ಇರುತ್ತಾರೆ. ಸದಾ ಕಾಲ ಸಂಗಾತಿಯ ಕಾಳಜಿ ವಹಿಸುತ್ತಾರೆ. ಮನೆ ಜನರನ್ನು ಸದಾ ಪ್ರೀತಿಯಿಂದ ಕಾಣುವ, ರಕ್ತ ಸಂಬಂಧಕ್ಕೆ ಬೆಲೆ ಕೊಡುವ ಸ್ವಭಾವ ಇವರದ್ದಾಗಿರುತ್ತದೆ.