Spiritual: ಒಂದೊಂದು ರಾಶಿಯವರಿಗೂ ಒಂದೊಂದು ಗುಣವಿರುತ್ತದೆ. ಕೆಲವರಿಗೆ ಸದಾ ನಗುವ ಗುಣ, ಕೆಲವರು ಸದಾ ಪೆಚ್ಚು ಮೋರೆ ಹಾಕಿಕೊಂಡಿರುತ್ತಾರೆ. ಇನ್ನು ಕೆಲವರದ್ದು ಹೊಟ್ಟೆ ಕಿಚ್ಚಿನ ಗುಣ. ಮತ್ತೆ ಕೆಲವರದ್ದು ಸಿಟ್ಟಿನ ಗುಣ. ಹೀಗೆ ಒಂದೊಂದು ರಾಶಿಯವರ ಗುಣ, ಒಂದೊಂದು ರೀತಿ ಇರುತ್ತದೆ. ಇಂದು ನಾವು ಯಾವ 4 ರಾಶಿಯವರು ನೋಡಲು ಆಕರ್ಷಕರಾಗಿರುತ್ತಾರೆ ಅಂತಾ ಹೇಳಲಿದ್ದೇವೆ.
ವೃಷಭ ರಾಶಿ. ವೃಷಭ ರಾಶಿಯವರು ನೋಡಲು ಆಕರ್ಷಕವಾಗಿರುತ್ತಾರೆ. ಇವರು ಗಮನ ಸೆಳೆಯುವ ಮುಖಚರ್ಯೆ ಹೊಂದಿರುತ್ತಾರೆ. ಇವರು ಕಣ್ಣನ್ನು ನೋಡಿಯೇ ಹಲವರು ಇವರತ್ತ ಆಕರ್ಷಿತಗೊಳ್ಳುತ್ತಾರೆ. ಬಾಲಿವುಡ್‌ನಲ್ಲಿ ಈ ರಾಶಿಯ ಹಲವು ಆಕರ್ಷಕ ಕಲಾವಿದರಿದ್ದಾರೆ. ಮಾಧುರಿ ದೀಕ್ಷಿತ್, ವರುಣ್ ಧವನ್, ಅನುಷ್ಕಾ ಶರ್ಮಾ, ಸನ್ನಿ ಲಿಯೋನ್ ಮತ್ತು ಕ್ರಿಕೇಟಿಗ ಸಚಿನ್ ತೆಂಡೂಲ್ಕರ್ ಸಹ ವೃಷಭ ರಾಶಿಯವರು.
ಕಟಕ ರಾಶಿ. ತಾಳ್ಮೆಯ ಗುಣವುಳ್ಳವರು. ಯಾರನ್ನೂ ಅಷ್ಟು ಬೇಗ ಸ್ನೇಹಿತರನ್ನಾಗಿ ಮಾಡಿಕೊಳ್ಳುವುದಿಲ್ಲ. ಹಾಗೆ ಏನಾದರೂ ಸ್ನೇಹ ಮಾಡಿದರೆ, ಅಥವಾ ಪ್ರೀತಿ ಮಾಡಿದರೆ, ಕೊನೆಯವರೆಗೂ ಅದನ್ನು ಕಾಪಾಡಿಕೊಳ್ಳುವ ಗುಣವಿದೆ. ಅದೇ ರೀತಿ ದ್ವೇಷ ಮಾಡಿದರೆ, ಸಾಯುವವರೆಗೂ ದ್ವೇಷ ಸಾಧಿಸುತ್ತಾರೆ. ಕಟಕ ರಾಶಿಯವರು ನೋಡಲು ಅಂದವಾಗಿರುತ್ತಾರೆ. ಕತ್ರೀನಾ ಕೈಫ್, ಕರಿಷ್ಮಾ ಕಪೂರ್, ಧೋನಿ, ಪ್ರಿಯಾಂಕಾ ಛೋಪ್ರಾ ಇವರೆಲ್ಲರೂ ಕಟಕ ರಾಶಿಯವರಾಗಿದ್ದಾರೆ.
ತುಲಾ ರಾಶಿ. ತುಲಾ ರಾಶಿಯವರು ನೋಡಲು ಸುಂದರವಾಗಿರುತ್ತಾರೆ. ಕಲೆಯಲ್ಲಿ ಸಾಧನೆ ಮಾಡುವ ಇವರು, ನೋಡಲು ಆಕರ್ಷಕವಾಗಿರುತ್ತಾರೆ. ನೋಟದಲ್ಲೇ ಆಕರ್ಷಿಸುವ ಚೆಂದ ಇವರಿಗಿರುತ್ತದೆ. ತುಲಾ ರಾಶಿಯವರಿಗೆ ಒಂದಲ್ಲ, ಒಂದು ಕಲೆ ಇರುತ್ತದೆ. ಅಮಿತಾ ಬಚ್ಚನ್, ಹೇಮಾ ಮಾಲೀನಿ, ರಣ್ಬೀರ್ ಕಪೂರ್, ದೀಪಿಕಾ ಪಡುಕೋಣೆ ಇವರೆಲ್ಲವೂ ತುಲಾ ರಾಶಿಯವರು.
ಮಕರ ರಾಶಿ. ಮಕರ ರಾಶಿಯವರು ನೋಡಲು ಆಕರ್ಷಕವಾಗಿರುತ್ತಾರೆ. ಶಿಸ್ತಿನಿಂದ ಇರುವವರು ಈ ರಾಶಿಯವರು. ಮನೆ ಜನರನ್ನು ಇವರು ಹೆಚ್ಚಾಗಿ ಇಷ್ಟಪಡುತ್ತಾರೆ. ಹೃತಿಕ್ ರೋಷನ್, ರಾಹುಲ್ ದ್ರಾವೀಡ್, ಸಲ್ಮಾನ್ ಖಾನ್ ಮಕರ ರಾಶಿಯವರಾಗಿದ್ದಾರೆ.