Friday, April 18, 2025

Latest Posts

ಹೊಟ್ಟೆಕಿಚ್ಚಿನ ಸ್ವಭಾವದವರು ಈ 4 ರಾಶಿಯವರು..

- Advertisement -

Horoscope: ಒಂದೊಂದು ರಾಶಿಯವರಿಗೆ ಒಂದೊಂದು ಗುಣಗಳಿರುತ್ತದೆ. ಕೆಲವರು ಸದಾ ನಗು ನಗುತ್ತಲೇ ಇರುತ್ತಾರೆ. ಎಂಥ ಕಷ್ಟವಿದ್ದರೂ ಅದನ್ನು ಮುಚ್ಚಿಟ್ಟುಕೊಳ್ಳುತ್ತಾರೆ. ಇನ್ನು ಕೆಲವರು ದುಃಖದಲ್ಲೇ ಇರುತ್ತಾರೆ. ಅವರಿಗೆ ಏನೇ ಸೌಲಭ್ಯವಿದ್ದರೂ, ಎಷ್ಟೇ ಪ್ರೀತಿ, ಕಾಳಜಿ ಕೊಟ್ಟರೂ ಅತೃಪ್ತರಾಗಿರುತ್ತಾರೆ. ಇಂದು ನಾವು ಯಾವ 4 ರಾಶಿಯವರಿಗೆ ಹೊಟ್ಟೆಕಿಚ್ಚಿನ ಸ್ವಭಾವವಿರುತ್ತದೆ ಎಂದು ತಿಳಿಯೋಣ ಬನ್ನಿ..

ಮೇಷ ರಾಶಿ. ಮೇಷ ರಾಶಿಯವರು ಜಾಣರು, ತಾಳ್ಮೆಯ ಸ್ವಭಾವದವರಾಗಿರುತ್ತಾರೆ. ಯಶಸ್ಸಿಗಾಗಿ ಎಷ್ಟು ಕಷ್ಟಪಡಬೇಕೋ, ಅಷ್ಟು ಕಷ್ಟ ಪಟ್ಟೇ ಪಡುತ್ತಾರೆ. ಆದರೆ ಇವರಿಗಿಂತ ಹೆಚ್ಚು ಸಾಧನೆ ಮಾಡಿದವರನ್ನು, ಅದರಲ್ಲೂ ತಮ್ಮವರ ಸಾಧನೆ ಕಂಡರೂ ಇವರಿಗೆ ಸಹಿಸಲು ಆಗುವುದಿಲ್ಲ. ಅಷ್ಟು ಹೊಟ್ಟೆ ಕಿಚ್ಚು ಪಡುತ್ತಾರೆ.

ಸಿಂಹ ರಾಶಿ. ಕಾಡಿನ ರಾಜ ಹೇಗೆ ಸಿಂಹವೋ, ಹಾಗೆ ಸಿಂಹ ರಾಶಿಯವರಿಗೆ ನಾಯಕತ್ವದ ಗುಣವಿರುತ್ತದೆ. ಅವರು ಎಲ್ಲ ಕೆಲಸದಲ್ಲೂ ಯಶಸ್ಸು ಪಡೆದು, ನಾಯಕತ್ವ ಸಾಧಿಸುವಲ್ಲಿ ಸಫಲರಾಗಿರುತ್ತಾರೆ. ಹೀಗೆ ಬರೀ ಗೆಲುವೇ ಸಾಧಿಸುವ ಇವರಿಗೆ ಸೋಲನ್ನಪ್ಪುವ ಮನಸ್ಸಾಗುವುದಿಲ್ಲ. ಹಾಗಾಗಿ ಇನ್ನೊಬ್ಬರ ಗೆಲುವಿಗೆ ಇವರು ಹೊಟ್ಟೆಕಿಚ್ಚು ಪಡುತ್ತಾರೆ.

ಕನ್ಯಾ ರಾಶಿ. ಕನ್ಯಾ ರಾಶಿಯವರು ಕಷ್ಟಪಟ್ಟಾದರೂ ಮುಂದೆ ಬರಲು ಪ್ರಯತ್ನಿಸುತ್ತಾರೆ. ಎಂಥದ್ದೇ ಸಮಸ್ಯೆ ಬಂದರೂ ಎದೆಗುಂದದೆ ಎದುರಿಸಲು ಸಿದ್ಧರಾಗಿರುತ್ತಾರೆ. ಆದರೆ ಇವರಿಗೆ ಹೆಚ್ಚು ಹೊಟ್ಟೆಕಿಚ್ಚಿನ ಸ್ವಭಾವವಿರುತ್ತದೆ. ಎಷ್ಟೇ ಉತ್ತಮ ಸ್ವಭಾವ, ಒಳ್ಳೆಯ ಗುಣವಿದ್ದರೂ ಕೂಡ, ಅವರ ಹೊಟ್ಟೆಕಿಚ್ಚಿನ ಸ್ವಭಾವದ ಮುಂದೆ ಅವೆಲ್ಲವೂ ಮುಚ್ಚಿ ಹೋಗುತ್ತದೆ.

ಮಕರ ರಾಶಿ. ಮಕರ ರಾಶಿಯವರು ಯಶಸ್ವಿಯಾಗುವುದಕ್ಕೆ ಹಲವು ಪ್ರಯತ್ನಗಳನ್ನು ಮಾಡುತ್ತಾರೆ. ಹಲವರು ಯಶಸ್ಸನ್ನ ಕೂಡ ಕಾಣುತ್ತಾರೆ. ಆದರೆ ಇವರಿಗೆ ಇರುವ ಋಣಾತ್ಮಕ ಸ್ವಭಾವ ಎಂದರೆ, ಹೊಟ್ಟೆಕಿಚ್ಚಿನ ಸ್ವಭಾವ. ಸಹಾಯದ ಮನೋಭಾವ ಇವರಿಗೆ ಇದ್ದರೂ ಕೂಡ, ಕೊಂಚವಾದರೂ ಹೊಟ್ಟೆಕಿಚ್ಚಿನ ಗುಣವಿರುತ್ತದೆ.

- Advertisement -

Latest Posts

Don't Miss