Saturday, April 19, 2025

Latest Posts

ಈ 5 ಎಲೆಗಳು ಹಿಂದೂಗಳಲ್ಲಿ ಪೂಜನೀಯ ಸ್ಥಾನವನ್ನು ಪಡೆದಿವೆ..

- Advertisement -

Spiritual: ಹಿಂದೂಗಳಲ್ಲಿ ಸಾಕಷ್ಟು ನಿಯಮ, ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ಪೂಜೆ ಪುನಸ್ಕಾರಗಳೆಲ್ಲವೂ ಇರುತ್ತದೆ. ಈ ವೇಳೆ ಹಣ್ಣು- ಹಂಪಲು, ಹೂವು, ಎಲೆಗಳನ್ನು ಬಳಸಲಾಗುತ್ತದೆ. ಹಾಗಾದರೆ ಹಿಂದೂಗಳಲ್ಲಿ ಯಾವ ಎಲೆಗಳಿಗೆ ಅತ್ಯುತ್ತಮ ಸ್ಥಾನ ನೀಡಲಾಗಿದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ವೀಳ್ಯದ ಎಲೆ. ಪೂಜೆಯ ಸಂದರ್ಭದಲ್ಲಿ, ಶುಭ ಕಾರ್ಯದ ವೇಳೆ, ವೀಳ್ಯದ ಎಲೆ ಮತ್ತು ಅಡಿಕೆಯನ್ನ ಬಳಸಲಾಗುತ್ತದೆ. ನಿಶ್ಚಿತಾರ್ಥದಂಥ ಶುಭಕಾರ್ಯದ ವೇಳೆ ವೀಳ್ಯದ ಎಲೆ ಅಡಿಕೆ ನೀಡಿ, ಸಂಬಂಧ ಕೂಡಿಸಲಾಗುತ್ತದೆ.

ಬಾಳೆ ಎಲೆ. ಹಿಂದೂಗಳಲ್ಲಿ ಯಾವುದಾದರೂ ಶುಭ ಕಾರ್ಯಕ್ರಮವಿದ್ದಲ್ಲಿ, ಹಬ್ಬ ಹರಿದಿನಗಳಲ್ಲಿ ಬಾಳೆಎಲೆಯಲ್ಲಿಯೇ ಊಟ ಬಡಿಸಲಾಗುತ್ತದೆ. ಸತ್ಯನಾರಾಯಣ ಪೂಜೆಗೆ ಬಾಳೆಎಲೆಯನ್ನ ಅಲಂಕಾರಕ್ಕೆ ಬಳಸಲಾಗುತ್ತದೆ. ಶ್ರಾದ್ಧ, ತಿಥಿಯ ಸಂದರ್ಭದಲ್ಲಿ, ಬಾಳೆಎಲೆಯಲ್ಲಿ ಕಾಗೆ, ಹಸುವಿಗೆ ಊಟ ಬಡಿಸಲಾಗುತ್ತದೆ. ಬಾಳೆಎಲೆಯಲ್ಲಿ ಉಂಡರೆ, ಆರೋಗ್ಯವೂ ಅಭಿವೃದ್ಧಿಯಾಗುತ್ತದೆ.

ಗರಿಕೆ ಎಲೆ. ಗಣೇಶನಿಗೆ ಇಷ್ಟವಾಗುವ ಗರಿಕೆಗೆ ಹಿಂದೂ ಧರ್ಮದಲ್ಲಿ ಪೂಜನೀಯ ಸ್ಥಾನ ನೀಡಲಾಗಿದೆ. ಪ್ರತೀ ಮಂಗಳವಾರ ಗಣೇಶನಿಗೆ ಗರಿಕೆ ನೀಡಿದ್ದಲ್ಲಿ, ಉತ್ತಮ ವಿದ್ಯೆ, ಬುದ್ಧಿ ಪ್ರಾಪ್ತಿಯಾಗುತ್ತದೆ. ನಾವಂದುಕೊಂಡ ಕೆಲಸ ನೆರವೇರುತ್ತದೆ ಅನ್ನೋ ನಂಬಿಕೆ ಇದೆ.

ತುಳಸಿ. ತುಳಸಿ ಇಲ್ಲದ ಪೂಜೆ ಒಲ್ಲನೋ, ಹರಿ ಕೊಳ್ಳನೋ ಎಂಬ ಪದ್ಯವೇ ಇದೆ. ಅದರಂತೆ ಕೃಷ್ಣ, ವಿಷ್ಣುವನಿ ಪೂಜೆ ಮಾಡುವ ಸಂದರ್ಭದಲ್ಲಿ ತುಳಸಿಯನ್ನು ಬಳಸಲೇಬೇಕು. ಅಲ್ಲದೇ,  ನೈವೇದ್ಯ ಮಾಡುವಾಗಲೂ ತುಳಸಿಯನ್ನು ಹಾಕಿದಾಗಲೇ, ಅದು ಪರಿಪೂರ್ಣ ನೈವೇದ್ಯವಾಗುತ್ತದೆ. ಹಾಗಾಗಿ ತುಳಸಿಗೆ ಹಿಂದೂ ಧರ್ಮದಲ್ಲಿ ಉನ್ನತ ಸ್ಥಾನ ನೀಡಲಾಗಿದೆ.

ಬಿಲ್ವಪತ್ರೆ. ಶಿವನಿಗೆ ಇಷ್ಟವಾದ ಎಲೆ ಅಂದ್ರೆ ಬಿಲ್ವಪತ್ರೆ. ನೀವು ಶಿವನನ್ನು ಮೆಚ್ಚಿಸಲು ಭಕ್ಷ್ಯ ಭೋಜನಗಳನ್ನು ನೈವೇದ್ಯ ಮಾಡಬೇಕೆಂದಿಲ್ಲ. ಬದಲಾಗಿ ಜಲಾಭಿಷೇಕ, ಬಿಲ್ವಪತ್ರೆಯನ್ನು ನೀಡಿದರೆ, ಶಿವ ಒಲಿಯುತ್ತಾನೆಂದು ಹೇಳಲಾಗಿದೆ.

ಹಿಂದೂಗಳು ಚಾರ್ ಧಾಮ್ ಯಾತ್ರೆ ಮಾಡಲೇಬೇಕು ಅಂತಾ ಹೇಳೋದು ಯಾಕೆ..?

ಮನೆಯಲ್ಲಿ ನಕಾರಾತ್ಮಕತೆ ಇದ್ದರೆ ಸಿಗುತ್ತದೆ ಈ ಸೂಚನೆ..

ಈ ಪಾಪ ಮಾಡಿದ್ರೆ, ಪ್ರಾಣಿಗಳ ಯೋನಿಯಲ್ಲಿ ಜನ್ಮ ಸಿಗುತ್ತಂತೆ..

- Advertisement -

Latest Posts

Don't Miss