ಮನೆಯಲ್ಲಿ ಯಾವಾಗಲೂ ಸಕಾರಾತ್ಮಕ ಶಕ್ತಿಗಳೇ ಇರಬೇಕು. ಆರ್ಥಿಕ ಸ್ಥಿತಿ ಉತ್ತಮವಾಗಿರಬೇಕು. ಪತ್ನಿ- ಮಕ್ಕಳ ಜೊತ ನೆಮ್ಮದಿಯ ಸಂಸಾರ ನಡೆಸಬೇಕು. ಕೆಲಸ ಕಾರ್ಯಗಳಲ್ಲಿ ಯಾವುದೇ ಅಡೆ ತಡೆ ಇಲ್ಲದೇ, ಆರಾಮವಾಗಿರಬೇಕು ಅನ್ನೋದು ಹಲವರ ಆಸೆ. ಆದ್ರೆ ನಾವು ಮಾಡುವ ಕೆಲ ತಪ್ಪುಗಳಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಆವರಿಸಿ, ನಮ್ಮ ನೆಮ್ಮದಿ ಹಾಳು ಮಾಡುವುದರ ಜೊತೆಗೆ, ಆರ್ಥಿಕ ಪರಿಸ್ಛಿತಿಯನ್ನೂ ಹಾಳು ಮಾಡಿಬಿಡುತ್ತದೆ. ಹಾಗಾದ್ರೆ ಈ ವಿಚಾರದಲ್ಲಿ ನಾವು ಮಾಡಬಾರದ 5 ತಪ್ಪುಗಳೇನು ಅಂತಾ ತಿಳಿಯೋಣ ಬನ್ನಿ..
ಮೃತ ವ್ಯಕ್ತಿ ಪುನರ್ಜನ್ಮ ಹೇಗೆ ಪಡೆಯುತ್ತಾನೆ..?
ಮೊದಲನೇಯದಾಗಿ ಸಿಕ್ಕಸಿಕ್ಕಲ್ಲಿ ಮೂತ್ರ ಮಾಡುವುದು. ನೀವು ರಸ್ತೆಯಲ್ಲಿ ಹೋಗುವಾಗ ನಿಮಗೆ ಮಲ ಮೂತ್ರ ವಿಸರ್ಜನೆ ಮಾಡಬೇಕಾದಲ್ಲಿ, ಆ ಸ್ಥಳದ ಬಳಿ ಎಲ್ಲಿಯೂ ಸ್ಮಶಾನ ಅಥವಾ ದೇವಸ್ಥಾನವಿಲ್ಲವೆಂದು ಖಾತ್ರಿ ಪಡಿಸಿಕೊಳ್ಳಿ. ಕೆಲ ಮರಗಳ ಬುಡಕ್ಕೂ ನೀವು ಮೂತ್ರ ವಿಸರ್ಜನೆ ಮಾಡುವಂತಿಲ್ಲ. ಹೀಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿ ನಿಮ್ಮ ಮನೆಗೆ ಪ್ರವೇಶಿಸುವ ಸಾಧ್ಯತೆ ಇದೆ.
ಎರಡನೇಯದಾಗಿ ಮಧ್ಯಾಹ್ನದ ಮೇಲೆ ಕೂದಲು ಬಿಟ್ಟು ಹೊರಗೆ ಹೋಗಬಾರದು. ಇಂದಿನ ಕಾಲದಲ್ಲಿ ಇದನ್ನೆಲ್ಲ ಜನ ನಂಬುವುದಿಲ್ಲ. ಆದ್ರೆ ಹಿರಿಯರ ಪ್ರಕಾರ, ಕೆಲ ಜಾಗಗಳಲ್ಲಿ ಮಧ್ಯಾಹ್ನದ ಹೊತ್ತು, ಸಂಜೆ, ರಾತ್ರಿ ಹೊತ್ತು ಕೂದಲು ಬಿಟ್ಟು ತಿರುಗಬಾರದು, ಹೀಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿ ನಮ್ಮ ದೇಹ ಸೇರುವ ಸಾಧ್ಯತೆ ಇರುತ್ತದೆ.
ನಿಮ್ಮ ಮುಖ ನೈಸರ್ಗಿಕವಾಗಿ ಹೊಳೆಯಲು ಈ ಸಲಹೆಗಳನ್ನು ಅನುಸರಿಸಿ…!
ಮೂರನೇಯದಾಗಿ ಅಮವಾಸ್ಯೆ ಮತ್ತು ಹುಣ್ಣಿಮೆಯ ದಿನ ಎಲ್ಲಿಯೂ ಊಟ ಮಾಡಬೇಡಿ. ಅಪ್ಪಿ ತಪ್ಪಿ ಊಟ ಮಾಡಿದರೂ ಮನೆಗೆ ಬಂದ ಬಳಿಕ ಏಲಕ್ಕಿ ಸೇವಿಸಲು ಮರೆಯದಿರಿ. ಯಾಕಂದ್ರೆ ಊಟದಲ್ಲಿ ಮದ್ದು ನೀಡುವ ದುಷ್ಠ ಪದ್ಧತಿ ಈಗಲೂ ಚಾಲ್ತಿಯಲ್ಲಿದೆ. ಅಂಥವರು ಅಮವಾಸ್ಯೆ, ಹುಣ್ಣಿಮೆ ಮತ್ತು ಗ್ರಹಣದ ಸಮಯದಲ್ಲಿ ನಿಮ್ಮನ್ನು ಊಟಕ್ಕೆ ಆಹ್ವಾನಿಸಿ, ಅದರಲ್ಲಿ ಮದ್ದು ಹಾಕುತ್ತಾರೆ. ಆ ಮದ್ದು ದೇಹಕ್ಕೆ ತಾಕಬಾರದು ಅಂದ್ರೆ ಮನೆಗೆ ಬಂದು ಏಲಕ್ಕಿ ಸೇವಿಸಬೇಕು ಅನ್ನೋದು ಹಿರಿಯರ ನಂಬಿಕೆ. ಆ ಮದ್ದು ದೇಹ ಸೇರಿದರೆ, ಕೆಲವೇ ಕೆಲವು ದಿನಗಳಲ್ಲಿ ಅನಾರೋಗ್ಯದಿಂದ ಸಾವು ಸಂಭವಿಸುವ ಸಾಧ್ಯತೆ ಇರುತ್ತದೆ.
ನಾಲ್ಕನೇಯದಾಗಿ ಮಧ್ಯಾರಾತ್ರಿ 12ರಿಂದ 3 ಗಂಟೆಯೊಳಗೆ ಸಂಭೋಗ ಮಾಡುವುದು ತಪ್ಪು. ನೀವು ರಾತ್ರಿ 9ರಿಂದ 12 ಗಂಟೆಯೊಳಗೆ ಸಂಭೋಗ ಮಾಡಿದರೆ, ನಿಮ್ಮ ಮಗುವಿನಲ್ಲಿ ಸಕಾರಾತ್ಮಕ ಶಕ್ತಿ ಇರುತ್ತದೆ. ಕೆಲವರು ಮುಹೂರ್ತ ನೋಡಿ, ಗರ್ಭ ಧರಿಸುವ ಕೆಲಸ ಮಾಡುತ್ತಾರೆ. ಆದ್ರೆ 12ರ ಬಳಿಕ ಮತ್ತು 3 ಗಂಟೆಯೊಳಗೆ ಸಂಭೋಗ ಮಾಡುವುದರಿಂದ ನಕಾರಾತ್ಮಕ ಶಕ್ತಿಯಿರುವ ಮಗು ಜನಿಸುತ್ತದೆ. ಇನ್ನು ಮುಸ್ಸಂಜೆ ಹೊತ್ತಲ್ಲಿ ಸಂಭೋಗ ಮಾಡುವುದರಿಂದ ಮನೆಗೆ ದರಿದ್ರ ಸಂಭವಿಸುತ್ತದೆ. ಸಂಭಂಧ ಮುರಿದು ಬೀಳುತ್ತದೆ.
ಐದನೇಯದಾಗಿ ಮುಸ್ಸಂಜೆ ಹೊತ್ತಲ್ಲಿ ದೀಪ ಹಚ್ಚುವ ವೇಳೆ ಮಲಗುವುದು, ತಲೆ ಬಾಚಿಕೊಳ್ಳುವುದು, ಕಸ ಗುಡಿಸುವುದು, ಅಳುವುದು, ಹೆಣ್ಣು ಮಕ್ಕಳಿಗೆ ಬೈಯ್ಯುವುದು, ಹೊಡೆಯುವುದು, ಜಗಳವಾಡುವುದೆಲ್ಲ ಕೆಟ್ಟದ್ದು. ನೀವು ದೀಪ ಹಚ್ಚಿದ ಮೇಲೆ ಅಥವಾ ದೀಪ ಹಚ್ಚುವ ವೇಳೆ, ಅಂದರೆ 6 ಗಂಟೆಯ ಬಳಿಕ ಈ ಕೆಲಸವನ್ನು ಮಾಡಿದ್ರೆ, ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗುತ್ತದೆ.