ನಾವು ಜೀವನದಲ್ಲಿ ಯಶಸ್ಸು ಗಳಿಸಬೇಕು. ಪ್ರಸಿದ್ಧರಾಗಬೇಕು ಅಂದ್ರೆ ಕಲ ಅಭ್ಯಾಸಗಳನ್ನು ರೂಢಿಸಿಕೊಂಡಿರಬೇಕು. ಶಿಸ್ತು ಅನ್ನೋದು ನಮ್ಮ ಜೀವನದಲ್ಲಿದ್ರೆ, ನಾವು ಅಂದುಕೊಂಡಿದ್ದನ್ನ ಸಾಧಿಸಬಹುದು. ಹಾಗಾಗಿ ಇಂದು ನಾವು ಬೆಳಿಗ್ಗೆ ಯಾವ 5 ಅಭ್ಯಾಸಗಳನ್ನು ರೂಢಿಸಿಕೊಂಡರೆ, ಒಳ್ಳೆಯದು ಅಂತಾ ತಿಳಿಯೋಣ.
ಮೊದಲನೇಯ ಅಭ್ಯಾಸ, ಸೂರ್ಯನ ಬೆಳಕು ಮೂಡುತ್ತಲೇ ಏಳುವುದು. ನಾವು ಬೆಳಿಗ್ಗೆ ಬೇಗ ಎದ್ದು, ನಮ್ಮ ಜೀವನ ಇಷ್ಟು ಸುಂದರವಾಗಿ ನಡೆಯುತ್ತಿರುವುದಕ್ಕೆ ದೇವರಿಗೆ ಧನ್ಯವಾದ ಹೇಳಬೇಕು. ಯಾಕಂದ್ರೆ ಕೆಲವರಿಗೆ ಕಣ್ಣು ಕಾಣಿಸುವುದಿಲ್ಲ, ಕೈ ಕಾಲಿನಲ್ಲಿ ಶಕ್ತಿ ಇರುವುದಿಲ್ಲ, ಕಿವಿ ಕೇಳುವುದಿಲ್ಲ, ತಿನ್ನಲು ಅನ್ನವಿರುವುದಿಲ್ಲ. ಆದ್ರೆ ನಿಮ್ಮ ಬಳಿ ಇದೆಲ್ಲವೂ ಇದ್ದು, ನಿಮ್ಮ ಕೆಲಸವನ್ನು ನೀವು ಮಾಡಿಕೊಳ್ಳಬಹುದು. ನೀವು ದುಡಿದು ತಿನ್ನುವ ತಾಕತ್ತಿದ್ದವರು ಎಂದಾದಲ್ಲಿ, ನೀವು ದೇವರಿಗೆ ಖಂಡಿತ ಧನ್ಯವಾದ ಹೇಳಿ.
ಎರಡನೇಯ ಅಭ್ಯಾಸ, ಬೆಳಿಗ್ಗೆ ಎದ್ದು ಧ್ಯಾನ ಮಾಡುವುದು. ಧ್ಯಾನ ಮಾಡುವಾಗ ಯಾವುದರ ಬಗ್ಗೆಯೂ ಯೋಚನೆ ಮಾಡಬೇಡಿ. ನೀವು ಕೆಲವರ ಜೊತೆ ಜಗಳವಾಡಿರುತ್ತೀರಿ. ಅಥವಾ ನಿಮ್ಮ ಮನಸ್ಸನ್ನ ಯಾರೋ ನೋಯಿಸಿರುತ್ತಾರೆ. ಅದನ್ನೆಲ್ಲ ಮರೆತು ನೀವು ದೇವರ ಧ್ಯಾನ ಮಾಡಬೇಕು. ನಿಮ್ಮ ಉಸಿರಿನ ಮೇಲೆ ಗಮನವಿಟ್ಟು ಧ್ಯಾನ ಮಾಡಿದ್ರೆ, ನೀವು ಏಕಾಗೃತೆ ಸಾಧಿಸಬಹುದು.
ಮೂರನೇಯ ಅಭ್ಯಾಸ, ಯೋಗ, ವ್ಯಾಯಾಮ ಮಾಡುವುದು. ನಮ್ಮ ದೇಹಕ್ಕೆ ಭೋಜನ ಮತ್ತು ನೀರು ಎಷ್ಟು ಮುಖ್ಯವೋ, ಅದೇ ರೀತಿ ವ್ಯಾಯಮ ಕೂಡ ಮುಖ್ಯ. ನಾವು ಲಿಮಿಟಿನಲ್ಲಿ ಊಟ ಮಾಡಿದ ಹಾಗೆ, ನೀರು ಕುಡಿದ ಹಾಗೆ, ವ್ಯಾಯಾಮವನ್ನೂ ಕೂಡ ಲಿಮಿಟಿನಲ್ಲೇ ಮಾಡಿ. ಇದರಿಂದ ನಿಮ್ಮ ಸೌಂದರ್ಯ ಮತ್ತು ಆರೋಗ್ಯ ಎರಡೂ ಉತ್ತಮವಾಗಿರುತ್ತದೆ. ನಿಮ್ಮ ದಿನ ಚೈತನ್ಯದಾಯಕವಾಗಿರುತ್ತದೆ.
ಎಂಥ ಕಷ್ಟ ಬಂದರೂ ಈ ಎರಡು ಮಾತನ್ನ ನೆನಪಿನಲ್ಲಿಡಿ..
ನಾಲ್ಕನೇಯ ಅಭ್ಯಾಸ, ಒಂದು ಪುಸ್ತಕದಲ್ಲಿ ಈ ದಿನ ನೀವು ಬೆಳಿಗ್ಗೆಯಿಂದ ರಾತ್ರಿಯವರೆಗೆ ಏನು ಮಾಡಲಿದ್ದೀರಿ ಎಂದು ಬರೆಯಬೇಕು. ಮತ್ತು ಅದರಲ್ಲಿ ಯಾವ ಯಾವ ಕೆಲಸಗಳನ್ನು ಬರೆದಿದ್ದೀರಿ, ಆ ಕೆಲಸವನ್ನೂ ಪೂರ್ತಿ ಮಾಡಿ ಮುಗಿಸಬೇಕು. ನೀವು ಹೀಗೆ ಅಂದುಕೊಂಡಿದ್ದನ್ನ ಮಾಡಿ ಮುಗಿಸಿದರೆ, ನೀವು ಆದಷ್ಟು ಬೇಗ ಯಶಸ್ಸು ಕಾಣುತ್ತೀರಿ.
ಐದನೇಯ ಅಭ್ಯಾಸ, ಪ್ರೇರಣಾದಾಯಕ ಪುಸ್ತಕವನ್ನು ಓದಬೇಕು. ಇದರಿಂದ ನಿಮಗೆ ಸ್ಪೂರ್ತಿ ಸಿಗುತ್ತದೆ. ಪ್ರತಿದಿನ ಸಿಗುವ ಸ್ಪೂರ್ತಿ ನಿಮ್ಮ ಯಶಸ್ಸಿನೆಡೆಗೆ ನಿಮ್ಮನ್ನು ಕರೆದೊಯ್ಯುತ್ತದೆ.