ನಾವು ಮಾಡುವ ಕೆಲಸಗಳ ಮೇಲೆ ನಮ್ಮ ಜೀವನ ಅವಲಂಬಿಸಿರುತ್ತದೆ. ನಾವು ಉತ್ತಮ ಕಾರ್ಯ ಮಾಡಿದರೆ, ಉತ್ತಮ ರೀತಿಯಿಂದ ಬದುಕಬಲ್ಲೆವು. ಮುಂದಿನ ಜನ್ಮದಲ್ಲೂ ಉತ್ತಮರಾಗಿರಬಲ್ಲೆವು. ಅದೇ ಪಾಪ ಕಾರ್ಯಗಳನ್ನು ಮಾಡಿದರೆ, ಶಿಕ್ಷೆ ಅನುಭವಿಸಬೇಕಾಗುತ್ತದೆ. ಹಾಗಾಗಿ ನಾವಿಂದು ಮನುಷ್ಯನಾದವನು ಯಾವ ಕಾರ್ಯವನ್ನು ಮಾಡಿದರೆ, ಪುಣ್ಯವಂತನಾಗುತ್ತಾನೆಂಬ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೈವಾಹಿಕ ಜೀವನ ಸಂತೋಷವಾಗಿರಲು ಹೀಗೆ ಮಾಡಿ …!
ಮೊದಲನೇಯಕೆಲಸ, ಯಾವುದೇ ಕಾಲದಲ್ಲೂ, ಎಂಥದ್ಧೇ ಪರಿಸ್ಥತಿಯಲ್ಲೂ ಸತ್ಯವನ್ನೇ ಹೇಳುವುದು. ಯಾವ ಮನುಷ್ಯ ಎಂಥದ್ದೇ ಸಮಯದಲ್ಲೂ ಸತ್ಯವನ್ನೇ ಹೇಳುತ್ತಾನೋ, ಅವನು ಪುಣ್ಯವಂತ. ಅಂತೆಯೇ ಸುಳ್ಳು ಹೇಳುವವನು, ಪಾಪ ಮಾಡುವವನು, ಮೋಸ ಮಾಡುವವನು ಯಾವಾಗಲೂ ಪಾಪಿಷ್ಠನಾಗಿಯೇ ಇರುತ್ತಾನೆ. ಮತ್ತು ಅಂಥವನಿಗೆ ಉತ್ತಮ ಜನ್ಮ ಸಿಗಲು ಸಾಧ್ಯವೇ ಇಲ್ಲ.
ಎರಡನೇಯ ಕೆಲಸ, ಅನ್ನದಾನ. ಹಸಿದು ಬಂದವನಿಗೆ ನಿಮ್ಮ ಕೈಯಲ್ಲಿ ಸಾಧ್ಯವಾದರೆ, ಅನ್ನದಾನ ಮಾಡಿ. ಅದು ಮನುಷ್ಯನೇ ಆಗಬೇಕೆಂದಿಲ್ಲ. ಪ್ರಾಣಿ, ಪಕ್ಷಿಯೂ ಆಗಿರಬಹುದು. ನಿಮ್ಮ ಬಳಿ ಮೂಕ ಪ್ರಾಣಿ ಬಂದು, ಆಹಾರಕ್ಕಾಗಿ ಸನ್ನೆ ಮಾಡಿದ್ದಲ್ಲಿ, ನಿಮ್ಮ ಬಳಿ ಇದ್ದುದರಲ್ಲಿ ಕೊಂಚವಾದರೂ ಅದಕ್ಕೆ ಕೊಡಿ. ಯಾಕಂದ್ರೆ ಅನ್ನದಾನ ಮಾಡುವುದು ಕೂಡ ಪುಣ್ಯದ ಕೆಲಸ. ಹಾಗಾಗಿಯೇ ಮದುವೆ, ಮುಂಜಿ, ಗೃಹಪ್ರವೇಶ, ಶ್ರಾದ್ಧ, ತಿಥಿ ಇತ್ಯಾದಿ ಕಾರ್ಯಕ್ರಮಗಳಲ್ಲಿ ಅನ್ನದಾನ ಮಾಡಲಾಗುತ್ತದೆ.
ಈ ಕೆಲಸ ಮಾಡುವುದನ್ನು ನೀವು ಬಿಡದಿದ್ದಲ್ಲಿ, ಲಕ್ಷ್ಮೀ ನಿಮ್ಮ ಮನೆಗೆ ಕಾಲಿಡುವುದಿಲ್ಲ- ಭಾಗ 2
ಮೂರನೇಯ ಕೆಲಸ, ಭೂದಾನ. ಹಿಂದಿನ ಕಾಲದಲ್ಲಿ ರಾಜರು ಪುಣ್ಯ ಪ್ರಾಪ್ತಿಗಾಗಿ ಭೂಮಿಯನ್ನು ದಾನ ಮಾಡುತ್ತಿದ್ದರು. ಇಂದಿನ ಕಾಲದಲ್ಲಿ ಕೆಲ ಶ್ರೀಮಂತರು ಶಾಲಾ ಕಾಲೇಜುಗಳನ್ನು ಕಟ್ಟಲು, ಆಸ್ಪತ್ರೆ ಕಟ್ಟಲು, ದೇವಸ್ಥಾನ ಕಟ್ಟಲು ಭೂಮಿಯನ್ನು ದಾನ ಮಾಡುತ್ತಾರೆ. ಯಾರು ಭೂದಾನ ಮಾಡುತ್ತಾರೋ, ಅದನ್ನು ಪುಣ್ಯ ಎಂದು ಕರೆಯಲಾಗುತ್ತದೆ.
ನಾಲ್ಕನೇಯ ಕೆಲಸ, ಗೋದಾನ. ಪುರಾಣ ಕಾಲದಲ್ಲಿ ರಾಜ ಮಹಾರಾಜರು ಬ್ರಾಹ್ಮಣರಿಗೆ ಗೋದಾನ ಮಾಡುತ್ತಿದ್ದರು. ಹಿರಿಯರ ಶ್ರಾದ್ಧ ಕಾಲದಲ್ಲೂ ಗೋವನ್ನು ದಾನ ಮಾಡಲಾಗುತ್ತಿತ್ತು. ಹೀಗೆ ಮಾಡುವುದರಿಂದ ನಿಧನರಾದವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಅನ್ನೋ ನಂಬಿಕೆ ಇದೆ. ಹಾಗಾಗಿ ಗೋದಾನ ಮಾಡಲಾಗುತ್ತಿತ್ತು. ಇದು ಕೂಡ ಪುಣ್ಯದ ಕೆಲಸ ಎಂದು ಭಾವಿಸಲಾಗಿದೆ.
ಈ ಕೆಲಸ ಮಾಡುವುದನ್ನು ನೀವು ಬಿಡದಿದ್ದಲ್ಲಿ, ಲಕ್ಷ್ಮೀ ನಿಮ್ಮ ಮನೆಗೆ ಕಾಲಿಡುವುದಿಲ್ಲ- ಭಾಗ 1
ಐದನೇಯ ಕೆಲಸ, ಕನ್ಯಾದಾನ. ಸನಾತನ ಧರ್ಮದಲ್ಲಿ ಪ್ರತಿಯೊಬ್ಬರಿಗೂ ಒಂದು ಪುತ್ರ ಮತ್ತು ಒಂದು ಹೆಣ್ಣು ಸಂತಾನವಿರಬೇಕು ಅಂತಾ ಹೇಳಲಾಗುತ್ತದೆ. ಯಾಕಂದ್ರೆ ಪುತ್ರನಿಗೆ ವಿವಾಹವಾದಾಗ, ಕನ್ಯೆಯನ್ನು ಕರೆತಂದ ಋಣ ಅವರ ಮೇಲಿರುತ್ತದೆ. ಅದೇ ರೀತಿ, ಆ ಋಣವನ್ನು ತೀರಿಸಿಕೊಳ್ಳಲು ಅವರೂ ಕೂಡ ಕನ್ಯೆಯನ್ನು ದಾನ ಮಾಡಬೇಕಾಗುತ್ತದೆ. ಅದನ್ನೇ ಕನ್ಯಾದಾನ ಎನ್ನುವುದು. ಮತ್ತು ಕನ್ಯಾದಾನ ಎನ್ನುವುದು ಪುಣ್ಯದ ಕೆಲಸ.




