ನಮ್ಮ ಹಲವರು ಜೀವನದಲ್ಲಿ ಏನಾದರೂ ಸಾಧನೆ ಮಾಡಲೇಬೇಕು ಎಂದು ಹವಣಿಸುತ್ತಾರೆ. ಆದ್ರೆ ಕೆಲವರ ಚುಚ್ಚು ಮಾತು, ಕೆಲವರ ಕಠೋರ ನಡುವಳಿಕೆ ಅಥವಾ ಇನ್ಯಾವುದೋ, ಕೆಟ್ಟ ಸಮಯ ಅವರ ಆ ಹವಣಿಕೆಯನ್ನು ಚಿವುಟಿ ಹಾಕತ್ತೆ. ಆತ್ಮ ವಿಶ್ವಾಸಕ್ಕೆ ಧಕ್ಕೆ ತರತ್ತೆ. ಹಾಗಾಗಿ ನಾವಿಂದು ಯಾವ 7 ಸಮಯ ನಮ್ಮ ಆತ್ಮ ವಿಶ್ವಾಸಕ್ಕೆ ಧಕ್ಕೆ ತರಬಹುದು..? ಯಾವ 7 ಕೆಲಸಗಳು ನಮ್ಮ ಗೌರವಕ್ಕೆ ಧಕ್ಕೆ ತರಬಹುದು..? ಅದರಿಂದ ನಾವು ಹೇಗೆ ತಪ್ಪಿಸಿಕೊಳ್ಳಬೇಕು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ..
ಬುದ್ಧಿಮಾಂದ್ಯ ಮತ್ತು ವಿಕಲಾಂಗ ಮಕ್ಕಳು ಹುಟ್ಟೋದಕ್ಕೆ ಕಾರಣವೇನು..?
ಮೊದಲನೇಯ ಕೆಲಸ, ತಪ್ಪು ಮಾಡಿದಾಗ ಅಗತ್ಯಕ್ಕಿಂತ ಹೆಚ್ಚು ಬಾರಿ ಸಾರಿ ಕೇಳುವುದು. ತಪ್ಪು ಮಾಡಿದಾಗ ಕ್ಷಮೆ ಕೇಳಬೇಕು ನಿಜ. ಆದರೆ, ಎದುರಿನವರು ನಿಮ್ಮನ್ನು ಕಡೆಗಣಿಸುತ್ತಿದ್ದಾರೆ. ನಿಮ್ಮ ಕ್ಷಮೆಗೆ ಬೆಲೆ ಕೊಡುತ್ತಿಲ್ಲವೆಂದಲ್ಲಿ, ಪದೇ ಪದೇ ಕ್ಷಮೆ ಕೇಳಬೇಡಿ. ಇದರಿಂದ ನಿಮ್ಮ ಗೌರವಕ್ಕೆ ಧಕ್ಕೆ ಬರುತ್ತದೆ. ನೀವು ಪದೇ ಪದೇ ಕ್ಷಮೆ ಕೇಳಿದರೆ, ಅವರು ನಿಮ್ಮನ್ನು ಕೀಳಾಗಿ ನೋಡುತ್ತಾರೆ. ಇವನು ನನಗಾಗಿ ಎಷ್ಟು ಬಾರಿ ಬೇಕಾದ್ರೂ ಕ್ಷಮೆ ಕೇಳುತ್ತಾನೆ, ಇವನನ್ನು ಆಟವಾಡಿಸೋಣವೆಂದು, ನಿಮ್ಮ ಬಗ್ಗೆ ತಮಾಷೆ ಮಾಡುತ್ತಾರೆ. ಹಾಗಾಗಿ ಅಗತ್ಯಕ್ಕಿಂತ ಹೆಚ್ಚು ಬಾರಿ ಕ್ಷಮೆ ಕೇಳಬೇಡಿ.
ಎರಡನೇಯ ಕೆಲಸ, ನೀವು ಧರಿಸುವ ಬಟ್ಟೆ. ಹೌದು, ಇದು ವಿಚಿತ್ರವಾದ್ರೂ ನಿಜವೇ, ನೀವು ಧರಿಸುವ ಬಟ್ಟೆ, ನಿಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸುವಂತಿರಬೇಕು. ಆ ಬಟ್ಟೆ ಹಾಕಿ ನಿಮಗೆ ಇರುಸುಮುರುಸು ಉಂಟಾಗಬಾರದು. ನೀವು ಧರಿಸುವ ಬಟ್ಟೆ ಕಂಫರ್ಟೇಬಲ್ ಆಗಿರಬೇಕು. ಇದರಿಂದಲೇ ನಿಮ್ಮ ಆತ್ಮ ವಿಶ್ವಾಸ ಹೆಚ್ಚುತ್ತದೆ. ಇಲ್ಲದಿದ್ದಲ್ಲಿ, ನಾನು ಹೇಗೆ ಕಾಣುತ್ತಿರಬಹುದು..? ಎಲ್ಲರೂ ನನ್ನನ್ನು ಹೀಗೆಕೆ ನೋಡುತ್ತಿದ್ದಾರೆ. ನನ್ನ ಬಟ್ಟೆಯಲ್ಲಿ ಏನೋ ಸಮಸ್ಯೆ ಇರಬಹುದು ಎಂದು ನಿಮಗೆ ಅನ್ನಿಸುತ್ತದೆ. ಹಾಗಾಗಿ ಎಲ್ಲೇ ಹೋಗುವುದಿದ್ದರೂ, ನಿಮ್ಮ ಬಟ್ಟೆ ಸ್ವಚ್ಛವಾಗಿ, ಕಂಫರ್ಟೇಬಲ್ ಆಗಿ ಇರಲಿ.
ಎಣ್ಣೆಯಿಂದ ಬಾಯಿ ಮುಕ್ಕಳಿಸುವುದರಿಂದ (OIL PULLING) ಏನು ಲಾಭ..?
ಮೂರನೇಯ ಕೆಲಸ, ಇನ್ನೊಬ್ಬರಿಗೆ ಹೆಚ್ಚು ಬೆಲೆ ಕೊಡಬೇಡಿ. ನಿಮ್ಮ ಮೇಲೆ ನಿಮಗೆ ಕಾನ್ಫಿಡೆನ್‌ಸ್ ಇರಲಿ. ಎಲ್ಲರಿಗೂ ಈ ರೀತಿ ಅನ್ನಿಸೋದು ಸಹಜ. ಏನೆಂದರೆ, ಅವನು ಅಥವಾ ಅವಳು ನನಗಿಂತ ಹೆಚ್ಚು ಬುದ್ಧಿವಂತಳು, ಸುಂದರಿ, ಬೆಟರ್ ಎಂದು ನಿಮಗೆ ಅನ್ನಿಸಬಹುದು. ಹಾಗಾಗಿ ನೀವು ಅವರಿಗೆ ಹೆಚ್ಚು ಬೆಲೆ ಕೊಡಬಹುದು. ಆದ್ರೆ ಅವರಿಗೂ ಇನ್ನೊಬ್ಬರು, ಅವರಿಗಿಂತ ಬೆಟರ್ ಇದ್ದಾರೆ ಎಂದು ಅನ್ನಿಸಿಯೇ ಅನ್ನಿಸುತ್ತದೆ. ಹಾಗಾಗಿ ನಿಮ್ಮನ್ನು ನೀವೇ ಕುಗ್ಗಿಸಿ, ಇನ್ನೊಬ್ಬರನ್ನು ಹೊಗಳಲು ಹೋಗಬೇಡಿ. ಇದರಿಂದ ನಿಮ್ಮ ಗೌರವ ಕಡಿಮೆಯಾಗುತ್ತದೆ.
ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನ ಮುಂದಿನ ಭಾಗದಲ್ಲಿ ತಿಳಿಯೋಣ..