Friday, December 13, 2024

Latest Posts

ಈ 7 ಕೆಲಸಗಳು ನಿಮ್ಮ ಗೌರವಕ್ಕೆ ಧಕ್ಕೆ ತರುತ್ತದೆ.. ಭಾಗ 2

- Advertisement -

ಮೊದಲ ಭಾಗದಲ್ಲಿ ನಾವು ಯಾವ 7 ಕೆಲಸಗಳು ನಮ್ಮ ಗೌರವಕ್ಕೆ ಧಕ್ಕೆ ತರುತ್ತದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ, 3 ವಿಷಯಗಳ ಬಗ್ಗೆ ವಿವರಣೆ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ ಇನ್ನುಳಿದ ನಾಲ್ಕು ವಿಷಯಗಳ ಬಗ್ಗೆ ವಿವರಣೆ ನೀಡಲಿದ್ದೇವೆ.

ಬುದ್ಧಿಮಾಂದ್ಯ ಮತ್ತು ವಿಕಲಾಂಗ ಮಕ್ಕಳು ಹುಟ್ಟೋದಕ್ಕೆ ಕಾರಣವೇನು..?

ನಾಲ್ಕನೇಯ ಕೆಲಸ, ಗೌರವ, ಪ್ರೀತಿ, ಕಾಳಜಿ ಇಲ್ಲದ ಸಂಬಂಧಗಳಿಗೆ ಅಂಟಿಕೊಂಡಿರುವುದು. ಇಂದಿನ ಕಾಲದಲ್ಲಿ ಎದುರಿನವರು ಹೇಗಿರುತ್ತಾರೋ, ನಾವೂ ಹಾಗೆ ಇರಬೇಕು. ಆವಾಗಲೇ, ನಮಗೆ ಗೌರವ ಸಿಗುತ್ತದೆ. ಹಾಗಾಗಿ ನಿಮ್ಮನ್ನು ಯಾರು ಗೌರವಿಸುತ್ತಾರೋ, ಪ್ರೀತಿಸುತ್ತಾರೋ, ಕಾಳಜಿ ವಹಿಸುತ್ತಾರೋ, ಅಂಥವರಿಗೂ ನೀವು ಗೌರವಿಸಿ, ಪ್ರೀತಿಸಿ, ಕಾಳಜಿ ತೋರಿ. ಆದರೆ ನಿಮ್ಮ ಸಂಬಂಧಕ್ಕೆ ಗೌರವಿಸದ, ಕಾಳಜಿ ತೋರದ ಜನರಿಂದ ದೂರವಿರುವುದೇ ಲೇಸು. ಅಥವಾ ನೀವು ಅವರನ್ನೂ ಕೇರ್‌ಲೆಸ್ ಮಾಡಬೇಕು. ಇಲ್ಲದಿದ್ದಲ್ಲಿ, ನಿಮಗೆ ಗೌರವ ಸಿಗುವುದಿಲ್ಲ.

ಐದನೇಯ ಕೆಲಸ, ನಿಮ್ಮ ಸಾಧನೆಯ್ನನು ನೀವು ಗೌರವಿಸಿ. ಅದು ದೊಡ್ಡದಿರಲಿ, ಅಥವಾ ಸಣ್ಣದಿರಲಿ. ನಿಮ್ಮ ಸಾಧನೆಯನ್ನ ನೀವೇ ಕೀಳಾಗಿ ಕಂಡರೆ, ಇನ್ನುಳಿದವರು ನಿಮ್ಮ ಸಾಧನೆಯನ್ನು ಹೇಗೆ ಗೌರವಿಸುತ್ತಾರೆ..? ಹಾಗಾಗಿ ನಿಮ್ಮ ಸಾಧನೆಯನ್ನು ಗೌರವಿಸಿ. ಹೀಗೆ ಮಾಡಿದಾಗಲೇ ಏನಾದರೂ, ದೊಡ್ಡ ಸಾಧನೆ ಮಾಡಲು ಸಾಧ್ಯವಾಗೋದು.

ಎಣ್ಣೆಯಿಂದ ಬಾಯಿ ಮುಕ್ಕಳಿಸುವುದರಿಂದ (OIL PULLING) ಏನು ಲಾಭ..?

ಆರನೇಯ ಕೆಲಸ, ನಿಮ್ಮನ್ನು ನೀವು ನಿರ್ಲಕ್ಷಿಸುವುದು. ಇದು ನೀವು ಮಾಡುವ ತಪ್ಪು ಕೆಲಸ. ಈ ಕೆಲಸದಿಂದಲೇ ಜನ ನಿಮ್ಮನ್ನು ಗೌರವಿಸುವುದಿಲ್ಲ. ನಿಮ್ಮನ್ನು ನೀವು ಎಂದಿಗೂ ಕೀಳು ಎಂದು ತಿಳಿದುಕೊಳ್ಳಬೇಡಿ. ಬರೀ ನಿಮ್ಮ ಮೇಲಿನವರನ್ನಷ್ಟೇ ಅಲ್ಲ, ನಿಮಗಿಂತ ಕೆಳಮಟ್ಟದಲ್ಲಿರುವವರನ್ನ ಕೂಡ ನೋಡಿ. ಅವರು ನಿಮ್ಮ ಲೇವಲ್‌ಗೆ ಬರಲು ಹೆಣಗಾಡುತ್ತಿರುತ್ತಾರೆ. ಹಾಗಾಗಿ ನೀವು ಇಷ್ಟಾದರೂ ಇದ್ದೀರ ಎಂದು ಖುಷಿ ಪಡಿ. ನಿಮ್ಮ ಬಗ್ಗೆ ಕಾಳಜಿ ವಹಿಸಿ, ನಿಮ್ಮ ನೆಮ್ಮದಿಯ ಬಗ್ಗೆ ಯೋಚಿಸಿ. ಎಷ್ಟೋ ಜನ ತಮ್ಮನ್ನು ತಾವು ನಿರ್ಲಕ್ಷಿಸಿಯೇ, ಸಾಧಕರಾಗುವುದರಿಂದ ತಪ್ಪಿಸಿಕೊಂಡಿದ್ದಾರೆ. ಹಾಗಾಗಿ ನಮ್ಮನ್ನು ಮತ್ತು ನಮ್ಮ ಕೆಲಸವನ್ನು ನಾವು ಗೌರವಿಸುವುದು ತುಂಬಾ ಮುಖ್ಯ.

ಏಳನೇಯ ಕೆಲಸ, ಭೂತಕಾಲದಲ್ಲಿ ನಡೆದ ಘಟನೆಯನ್ನು ಪದೇ ಪದೇ ನೆನಪು ಮಾಡಿಕೊಂಡು, ದುಃಖ ಪಡುವುದು. ನಿಮ್ಮ ಜೀವನದಲ್ಲಿ ಏನೋ ಒಂದು ಕಹಿ ಘಟನೆ ನಡೆದಿರಬಹುದು. ಅದು ಹೆಚ್ಚು ಸಮಯದ ವರೆಗೆ ನಿಮಗೆ ಬೇಸರ ತರಿಸಿರಬಹುದು. ಆದ್ರೆ ಹಳೆಯ ಘಟನೆ ಬಗ್ಗೆ ಹೆಚ್ಚು ತೆಲಕೆಡಿಸಿಕೊಳ್ಳುವುದು ಉತ್ತಮವಲ್ಲ. ಯಾಕಂದ್ರೆ ಅದರಿಂದ ನಿಮಗೇನೂ ಲಾಭವಿಲ್ಲ. ನಿಮ್ಮ ಆರೋಗ್ಯ ಹಾಳಾಗುತ್ತದೆ. ನಿಮ್ಮ ಸಮಯ ವ್ಯರ್ಥವಾಗುತ್ತದೆ ಹೊರತು, ನೀವು ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಹಾಗಾಗಿ ಮುಂದಿನ ದಿನಗಳ ಬಗ್ಗೆ ಯೋಚಿಸಿ. ಇಂದಿನ ದಿನವನ್ನು ಎಂಜಾಯ್ ಮಾಡಿ.

ಜಿಮ್ ಹೋಗುವುದರಿಂದ ಆಗುವ ನಷ್ಟವೇನು ಗೊತ್ತಾ..?

- Advertisement -

Latest Posts

Don't Miss