Friday, July 4, 2025

Latest Posts

ಕಡಿಮೆ ಮಾತನಾಡುವವರಲ್ಲಿ ಈ 8 ಉತ್ತಮ ಗುಣಗಳಿರುತ್ತದೆ- ಭಾಗ 1

- Advertisement -

ಜನರಲ್ಲಿ ಹಲವು ರೀತಿಯ ಗುಣವುಳ್ಳವರಿರುತ್ತಾರೆ. ಕೆಲವರು ಪಟ ಪಟ ಮಾತನಾಡಿದರೆ, ಇನ್ನು ಕೆಲವರು ಗುಸು ಗುಸು ಮಾಡುವವರಿರುತ್ತಾರೆ. ಕೆಲವರು ಕೋಪದಲ್ಲಿ ಮುಖಕ್ಕೆ ಹೊಡೆದವರ ಹಾಗೆ ಮಾತನಾಡುವವರಿದ್ದರೆ, ಇನ್ನು ಕೆಲವು ಗೊಣಗುತ್ತ ಕೋಪ ತೋರಿಸುವವರಿರುತ್ತಾರೆ. ಆದ್ರೆ ಇವರೆಲ್ಲರಿಗಿಂತ ಕಡಿಮೆ ಮಾತನಾಡುವವರಲ್ಲಿ 8 ಉತ್ತಮ ಗುಣಗಳಿರುತ್ತದೆಯಂತೆ. ಆ 8 ಉತ್ತಮ ಗುಣಗಳಲ್ಲಿ ನಾವು 4 ಗುಣಗಳ ಬಗ್ಗೆ ತಿಳಿಯೋಣ.

ಮಹಾನ್ ಫಿಲೋಸಫರ್ ಪ್ಲ್ಯಾಟೋ ಹೇಳುತ್ತಾರೆ. ಓರ್ವ ಬುದ್ಧಿವಂತ ವ್ಯಕ್ತಿ ಆಗ ಮಾತನಾಡುತ್ತಾನೆ. ಯಾವಾಗ ಅವನ ಬಳಿ ಮಾತನಾಡಲು ಏನಾದರೂ ವಿಷಯ ಇರುತ್ತದೆ. ಆದ್ರೆ ಮೂರ್ಖ ವ್ಯಕ್ತಿ ವಿಷಯ ಇಲ್ಲದಿದ್ದರೂ, ಸುಮ್ಮ ಸುಮ್ಮನೆ ಮಾತನಾಡುತ್ತಾನೆ. ಯಾಕಂದ್ರೆ ಅವನಿಗೆ ಮಾತನಾಡಬೇಕಷ್ಟೇ. ಇದರ ಅರ್ಥವೇನೆಂದರೆ, ಕಡಿಮೆ ಮಾತನಾಡುವ ಗುಣವಿದ್ದರೆ ಭಾರೀ ಉತ್ತಮ ಅಂತ. ಇನ್ನು ಚಾಣಕ್ಯ ಕೂಡ ಹೀಗೆ ಹೇಳುತ್ತಾರೆ. ಅಗತ್ಯಕ್ಕಿಂತ ಹೆಚ್ಚು ಮಾತನಾಡುವವರು ಕಾಗೆಗೆ ಸಮ. ಮಾತನಾಡಬೇಕಾದ ಸಮಯದಲ್ಲಿ ಮಾತನಾಡುವವನು ಕೋಗಿಲೆಗೆ ಸಮ ಅಂತ.

ಹಾಗದ್ರೆ ಕಡಿಮೆ ಮಾತನಾಡುವವರಲ್ಲಿ ಇರುವ ಮೊದಲ ಗುಣ ಅಂದ್ರೆ, ಅವರು ಬುದ್ಧಿವಂತರಾಗಿರ್ತಾರೆ. ಯಾಕಂದ್ರೆ ಅವರು ಕಡಿಮೆ ಮಾತನಾಡುತ್ತಾರೆ ಮತ್ತು ಹೆಚ್ಚು ಕೇಳುತ್ತಾರೆ. ಅವರಲ್ಲಿ ಹೊಸ ಹೊಸ ಐಡಿಯಾಗಳಿರುತ್ತದೆ. ಈ ಕಂಪೆನಿಗಳಲ್ಲಿ ಹೆಚ್ಚು ಸೈಲೆಂಟ್ ಇರುವ ವ್ಯಕ್ತಿಗಳೇ ಉತ್ತಮ ಕೆಲಸ ನಿಭಾಯಿಸುತ್ತಾರೆ. ದಲೈಲಾಮಾ ಪ್ರಕಾರ, ನಾವು ಗಮನವಿಟ್ಟು ಕೇಳಿದಷ್ಟು ಕಲಿತುಕೊಳ್ಳುತ್ತೇವೆ.

ಎರಡನೇಯ ಗುಣ, ಕಡಿಮೆ ಮಾತನಾಡುವವರು ಹೆಚ್ಚಾಗಿ ಎದುರುತ್ತರ ನೀಡುವುದಿಲ್ಲ. ಯಾಕಂದ್ರೆ ಅವರಿಗೆ ಹಾಗೆ ಮಾಡಿದ್ರೆ, ಅದರ ಪರಿಣಾಮವೇನಾಗುತ್ತದೆ ಅಂತಾ ಗೊತ್ತಿರುತ್ತದೆ. ಆ ಪರಿಣಾಮದಿಂದ ಎಂಥ ಕಷ್ಟ ಬರಬುಹುದು ಅನ್ನೋ ಅಂದಾಜು ಕೂಡ ಇರುತ್ತದೆ. ಹಾಗಾಗಿ ಕಡಿಮೆ ಮಾತನಾಡುವವರು, ಹಂಗಿಸಿ ಮಾತನಾಡುವುದು, ಕೊಂಕು ಮಾತನಾಡುವುದು, ಎದುರುತ್ತರ ನೀಡುವುದೆಲ್ಲ ಮಾಡುವುದಿಲ್ಲ.

ಮೂರನೇಯ ಗುಣ ಮಾತು ಕೊಡುವುದು. ಕಡಿಮೆ ಮಾತನಾಡುವವರು ಸಡನ್ನಾಗಿ ಮಾತು ಕೊಡುವುದಿಲ್ಲ. ಬದಲಾಗಿ ತಾನು ಮಾತು ಕೊಟ್ಟರೆ, ಅದರಿಂದ ಯಾವ ಪರಿಣಾಮ ಉಂಟಾಗುತ್ತದೆ. ನಾನು ಆ ಮಾತನ್ನ ಉಳಿಸಿಕೊಂಡದ್ರೆ ಓಕೆ. ಇಲ್ಲವಾದಲ್ಲಿ ತಾನು ಎಂಥ ಕಷ್ಟದ ಪರಿಸ್ಥಿತಿ ಅನುಭವಿಸಬೇಕಾಗುತ್ತದೆ ಅನ್ನೋದು ಅವರಿಗೆ ಗೊತ್ತಿರುತ್ತದೆ. ಹಾಗಾಗಿ ಇವರು ತಾನು ಈ ಕೆಲಸ ಮಾಡೇ ಮಾಡುತ್ತೇನೆಂದು ಮಾತು ಕೊಡುವುದಿಲ್ಲ.

ನಾಲ್ಕನೇಯ ಗುಣ, ವಟ ವಟ ಅಂತಾ ಮಾತನಾಡುವವರಿಗಿಂತ, ಮೌನಿಯಾಗಿರುವವರೇ ಜೀವನದಲ್ಲಿ ಹೆಚ್ಚು ಯಶಸ್ಸು ಕಾಣ್ತಾರೆ ಅಂತಾ ಹೇಳಲಾಗಿದೆ. ಹಾಗಂತ ಹೆಚ್ಚು ಮಾತನಾಡುವವರು ಯಶಸ್ವಿಯಾಗಲ್ಲ ಅಂತಲ್ಲ, ಬದಲಾಗಿ ಕಡಿಮೆ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿ ಯಶಸ್ಸು ಕಂಡಿದ್ದಾರಂತೆ.

- Advertisement -

Latest Posts

Don't Miss