Sunday, September 8, 2024

Latest Posts

ಇದು ನೀವು ಬಿಡಬೇಕಾದ 17 ಕೆಟ್ಟ ಚಟಗಳು.. ಭಾಗ 1

- Advertisement -

ಕೆಲವರು ಕೆಲವು ಕೆಟ್ಟ ಚಟಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುತ್ತಾರೆ. ಆದ್ರೆ ಅದು ಕೆಟ್ಟದ್ದು ಅಂತಾ ಅವರಿಗೆ ಗೊತ್ತಿರುವುದಿಲ್ಲ. ಆದ್ರೆ ಆಚಟದಿಂದಲೇ ಅವರಿಗೆ ಯಶಸ್ಸು ಸಿಗುತ್ತಿಲ್ಲವೆಂದು ಅವರಿಗೆ ಗೊತ್ತಿರುವುದಿಲ್ಲ. ಹಾಗಾಗಿ ನಾವಿಂದು ಯಾವ ಚಟಗಳನ್ನು ಮನುಷ್ಯ ಬಿಡಬೇಕು ಅನ್ನೋ ಬಗ್ಗೆ ಹೇಳಿದ್ದೇವೆ.

ಮೊದಲನೇಯ ಚಟ ಶೋಕಿಗಾಗಿ ಸಮಯ ವ್ಯರ್ಥ ಮಾಡುವುದು. ಸೋಶಿಯಲ್ ಮೀಡಿಯಾ ಬಂದ ಮೇಲೆ ಯುವ ಪೀಳಿಗೆಯ ಶೋಕಿ ಸ್ವಲ್ಪ ಹೆಚ್ಚಾಗಿದೆ. ಎಲ್ಲರೂ ಹಾಗಿಲ್ಲದಿದ್ದರೂ, ಕೆಲವರಂತೂ ಖಂಡಿತವಾಗಿಯೂ ಸೋಶಿಯಲ್ ಮೀಡಿಯಾದಲ್ಲಿ ಸಿಗುವ ಲೈಕ್ ಕಾಮೆಂಟ್ಸ್‌ಗೋಸ್ಕರ ಶೋಕಿ ತೋರಿಸಿಕೊಂಡು ಸಮಯ ವ್ಯರ್ಥ ಮಾಡುತ್ತಿದ್ದಾರೆ. ನೀವು ಮಾಡುವ ರೀಲ್ಸ್, ಪೋಸ್ಟ್‌ಗಳೆಲ್ಲ ಎಲ್ಲರಿಗೂ ಉತ್ತಮ ಸಂದೇಶ ಕೊಡುತ್ತಿದೆ. ಮತ್ತು ಅದರಿಂದ ನಿಮಗೆ ಯಶಸ್ಸು ಸಿಗುತ್ತಿದೆ ಎಂದಾದಲ್ಲಿ ಮಾತ್ರ, ಆ ಕೆಲಸ ಮಾಡಿ. ಇಲ್ಲವಾದಲ್ಲಿ. ಜೀವನದ ಬಗ್ಗೆ ಸಿರಿಯಸ್‌ ಆಗಿ ಯೋಚಿಸಲು ಶುರು ಮಾಡಿ.

‘ಸಿದ್ದರಾಮಯ್ಯನವರ ಕೋಲಾರ ಪ್ರವಾಸದ ಪಟಾಕಿ ಸಿಡಿಯುವ ಬದಲು ಟುಸ್ ಆಗಿದೆ’

ಎರಡನೇಯ ಚಟ ನೀವು ಮಾಡುವ ಕೆಲಸವನ್ನು ಮೊದಲೇ ಎಲ್ಲರಲ್ಲಿ ಹೇಳಿಕೊಳ್ಳುವುದು. ಉದಾಹರಣೆಗೆ ನೀವು ಒಂದು ಹೊಟೇಲ್ ಇಡಲಿದ್ದೀರಿ ಎಂದಿಟ್ಟುಕೊಳ್ಳಿ. ಆದ್ರೆ ಅದಕ್ಕೂ ಮೊದಲೇ, ನಾನು ಹೊಟೇಲ್ ಇಡುತ್ತೇನೆ. ಅದರಲ್ಲಿ ಮೆನುಕಾರ್ಡ್ ಹೀಗಿರುತ್ತೆ. ಒಳ್ಳೆ ಲಾಭ ಬರುತ್ತೆ ಅಂತಾ ಹೇಳಿ. ಕೊನೆಗೆ ನೀವು ಹೊಟೇಲ್ ಇಡಲು ಆಗದಿದ್ದಲ್ಲಿ, ಜನ ನಿಮ್ಮನ್ನು ನೋಡಿ ಹೀಯಾಳಿಸುತ್ತಾರೆ. ಹಾಗಾಗಿ ಕೆಲಸಕ್ಕೂ ಮೊದಲೇ ಬಡಾಯಿ ಕೊಚ್ಚಿಕೊಳ್ಳುವುದು ಕೂಡ ಕೆಟ್ಟಭ್ಯಾಸ.

ಮೂರನೇಯ ಚಟ ಈ ಪ್ರಪಂಚದಲ್ಲಿ ಯಾರೂ ಪರ್ಫೆಕ್ಟ್ ಅಲ್ಲ ಅನ್ನೋದನ್ನ ಅರಿತುಕೊಳ್ಳಬೇಕು. ನೀವು ಓರ್ವ ಫೇಮಸ್ ಡೈರೆಕ್ಟರ್ ಬಳಿ ಅವನ ಸಿನಿಮಾ ಬಗ್ಗೆ ಕೇಳಿದ್ದಲ್ಲಿ, ಅವನು ತನ್ನ ಸಿನಿಮಾದಲ್ಲಿ ಇನ್ನೂ ಒಳ್ಳೆಯದು ಮಾಡಬಹುದಿತ್ತು ಅಂತಾ ಹೇಳುತ್ತಾನೆ. ಅದೇ ರೀತಿ ಓರ್ವ ಕಲಾಕಾರ, ನೃತ್ಯಪಟು, ಹೀಗೆ ಇತ್ಯಾದಿ ಪ್ರಸಿದ್ಧ ವ್ಯಕ್ತಿಗಳಲ್ಲಿ ನೀವು ಅವರ ಕಲೆಯ ಬಗ್ಗೆ ಕೇಳಿದ್ದಲ್ಲಿ, ಅವರು ನಾನು ಇನ್ನೂ ಉತ್ತಮವಾಗಿ ಮಾಡಬಹುದಿತ್ತು ಅಂತಲೂ ಹೇಳುತ್ತಾರೆ. ಹಾಗಾಗಿ ನಿಮ್ಮನ್ನು ನೀವು ಎಂದಿಗೂ ಇಂಪರ್ಫೆಕ್ಟ್ ಎಂದುಕೊಳ್ಳಬೇಡಿ. ನಿಮ್ಮ ಮೇಲೆ ನೀವು ಭರವಸೆ ಇಡದಿರುವುದು ಕೂಡ ನಿಮ್ಮ ಯಶಸ್ಸಿಗೆ ಧಕ್ಕೆ ತರಬಹುದು.

ನೀವು ಹೆಚ್ಚು ಡ್ರೈ ಫ್ರೂಟ್ಸ್ ತಿನ್ನುತ್ತಿದ್ದೀರಾ…? ಹುಷಾರಾಗಿರಿ..!

ನಾಲ್ಕನೇಯ ಚಟ ನಿಮ್ಮನ್ನು ನೀವು ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಳ್ಳುವುದು. ಇದು ಮನುಷ್ಯನಲ್ಲಿರುವ ಅತೀ ಕೆಟ್ಟ ಚಟ. ಅವಳು ನನಗಿಂತ ಹೆಚ್ಚು ಸುಂದರವಾಗಿದ್ದಾಳೆ. ಅವನು ನನಗಿಂತ ಚೆಂದವಾಗಿ ಮಾತನಾಡುತ್ತಾನೆ. ಅವರ ಮಗ ನೋಡು ಓದುವುದರಲ್ಲಿ ಎಷ್ಟು ಜಾಣನಿದ್ದಾನೆ. ನೀನು ಯಾವಾಗ ನೋಡಿದ್ರೂ ಆಡುತ್ತಿರುತ್ತಿಯಾ.. ಹೀಗೆ ಒಂದಲ್ಲ ಒಂದು ರೀತಿ ನಿಮ್ಮನ್ನು ನೀವು ಅಥವಾ ಇತರರನ್ನು ನೀವು ಇನ್ನೊಬ್ಬರೊಂದಿಗೆ ಹೋಲಿಸು ಮಾತನಾಡಬೇಡಿ. ಯಾಕಂದ್ರೆ ಹೋಲಿಸುವುದೇ ಒಂದು ಹೊಲಸ್ಸು. ಇದಕ್ಕಿಂತ ಕೆಟ್ಟ ಚಟ ಮತ್ತೊಂದಿಲ್ಲ. ಯಾಕಂದ್ರೆ ಇದರಿಂದ ನಿಮ್ಮಲ್ಲಿರುವ ಆಥ್ಮಸ್ಥೈರ್ಯ ಕುಂದುತ್ತದೆ.

ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಮುಂದಿನ ಭಾಗದಲ್ಲಿ ತಿಳಿಯೋಣ..

- Advertisement -

Latest Posts

Don't Miss