ಈ ಹಿಂದಿನ ಭಾಗದಲ್ಲಿ ನಾವು ಮನುಷ್ಯ ತನ್ನ ಜೀವನದಲ್ಲಿ ಬಿಡಬೇಕಾದ 17 ಚಟಗಳಲ್ಲಿ 4 ಚಟಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಈಗ ಅದರ ಮುಂದುವರಿದ ಭಾಗವಾಗಿ, ಇನ್ನು 4 ಚಟಗಳ ಬಗ್ಗೆ ಹೇಳಲಿದ್ದೇವೆ..
ಐದನೇಯ ಚಟ ನಿಮ್ಮ ತಪ್ಪನ್ನು ನೀವು ಒಪ್ಪಿಕೊಳ್ಳದೇ, ಇನ್ನೊಬ್ಬರ ಮೇಲೆ ಆರೋಪ ಹೊರಿಸುವುದು. ಇದು ಮನುಷ್ಯ ತನ್ನ ಜೀವನದಲ್ಲಿ ಮಾಡುವ ದೊಡ್ಡ ತಪ್ಪು. ನೀವು ತಪ್ಪು ಮಾಡಿದ್ದರೆ, ತಕ್ಷಣ ಅದನ್ನು ಒಪ್ಪಿಕೊಂಡು ಕ್ಷಮೆ ಕೇಳಿ. ಇಲ್ಲವಾದಲ್ಲಿ ನೀವು ಮಾಡಿದ ತಪ್ಪನ್ನು ಒಪ್ಪಿಕೊಂಡು ಸುಮ್ಮನಿದ್ದು ಬಿಡಿ. ಅದನ್ನು ಬಿಟ್ಟು ನಾನು ಮಾಡಿದ್ದು ಸರಿ ಅಂತಾ ವಾದ ಮಾಡಿದರೆ, ಎದುರಿನವರಿಗೆ ನಿಮ್ಮ ಮೇಲಿರುವ ಗೌರವ ಕಡಿಮೆಯಾಗುತ್ತದೆ.
ಇದು ನೀವು ಬಿಡಬೇಕಾದ 17 ಕೆಟ್ಟ ಚಟಗಳು.. ಭಾಗ 1
ಆರನೇಯ ಚಟ ಯಶಸ್ಸಿನ ಮೆಟ್ಟಲೇರುವ ಮೊದಲೇ, ಹೆದರಿ ಹಿಂಜರಿಯುವುದು. ಕೆಲವರು ಯಾವುದೇ ಕೆಲಸ ಮಾಡಬೇಕಾದರೂ, ಮೊದಲು ಚೆನ್ನಾಗಿ ಯೋಚನೆ ಮಾಡುತ್ತಾರೆ. ಯಾವುದೇ ಅಡೆತಡೆ ಬಂದರೂ ಅದನ್ನು ಮೆಟ್ಟಿ ನಿಲ್ಲುತ್ತೇನೆ ಎಂಬ ಭರವಸೆ ಅವರಲ್ಲಿ ಬಂದರೆ, ಧೈರ್ಯದಿಂದ ಮುಂದುವರಿಯುತ್ತಾರೆ. ಈ ಪಯಣದಲ್ಲಿ ಕೆಲವರು ಅರ್ಧಕ್ಕೆ ಹಿಂಜರಿಯುತ್ತಾರೆ. ಇನ್ನು ಕೆಲವರು ತಮ್ಮ ಗುರಿಯನ್ನು ಮುಟ್ಟುತ್ತಾರೆ. ಹಾಗಾಗಿ ಹೆದರಿ ಹಿಂದರಿಯುವ ಕೆಟ್ಟ ಚಟವನ್ನು ಈಗಲೇ ಬಿಟ್ಟುಬಿಡಿ. ಧೈರ್ಯದಿಂದ ಯಶಸ್ಸು ಸಾಧಿಸಿ.
ಏಳನೇಯ ಚಟ ಲಿಮಿಟಿನಲ್ಲಿ ತಿನ್ನದಿರುವುದು. ಇದು ಕೆಟ್ಟ ಚಟವೇ ಹೌದು. ನೀವು ಲಿಮಿಟಿನಲ್ಲಿ ತಿಂದರೆ, ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಮತ್ತು ಆರೋಗ್ಯ ಉತ್ತಮವಾಗಿದ್ರೆ, ನೀವು ಏನನ್ನು ಬೇಕಾದ್ರೂ ಸಾಧಿಸಬಹುದು. ಆದ್ರೆ ನೀವು ಮಿತಿ ಮೀರಿ ತಿಂದರೆ, ನಿಮ್ಮ ಆರೋಗ್ಯ ಹಾಳಾಗುವುದರ ಜೊತೆಗೆ, ನೀವು ಯಸಸ್ಸು ಸಾಧಿಸುವುದು ಕೂಡ ಸಾಧ್ಯವಾಗುವುದಿಲ್ಲ.
‘ಸಿದ್ದರಾಮಯ್ಯನವರ ಕೋಲಾರ ಪ್ರವಾಸದ ಪಟಾಕಿ ಸಿಡಿಯುವ ಬದಲು ಟುಸ್ ಆಗಿದೆ’
ಎಂಟನೇಯ ಚಟ ಕೆಲಸದಲ್ಲಿ ನಿಧಾನವಾಗಿರುವುದು. ನೀವು ಯಾವುದೇ ಕೆಲಸ ಮಾಡಬೇಕಾದರೂ, ನಿಮ್ಮ ಗಮನ ಆ ಕೆಲಸದೆಡೆಗೆ ಇರಬೇಕು ವಿನಃ ಬೇರೆದರ ಕಡೆ ಇರಬಾರದು. ಆಗ ನಿಮ್ಮ ಕೆಲಸ ಬೇಗ ಬೇಗ ಆಗುತ್ತದೆ. ಆದ್ರೆ ನೀವು ಕೆಲಸ ಮಾಡುವಾಗ ಗಮನ ಬೇರೆಡೆ ಇದ್ದಲ್ಲಿ, ನಿಮ್ಮ ಕೆಲಸ ನಿಧಾನವಾಗಿ ಆಗುತ್ತದೆ. ಮತ್ತು ಇದರಿಂದ ನೀವೆಂದೂ ಯಶಸ್ಸು ಸಾಧಿಸಲು ಸಾಧ್ಯವಾಗುವುದಿಲ್ಲ.
ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಮುಂದಿನ ಭಾಗದಲ್ಲಿ ತಿಳಿಯೋಣ..