Friday, November 22, 2024

Latest Posts

ಇದು ಗರುಡ ಪುರಾಣದಲ್ಲಿ ಬರುವ 7 ಕಹಿ ಸತ್ಯಗಳು- ಭಾಗ1

- Advertisement -

ಗರುಡ ಪುರಾಣದಲ್ಲಿ ನರಕದಲ್ಲಿ ಯಾವ ರೀತಿಯ ಶಿಕ್ಷೆ ಕೊಡುತ್ತಾರೆ ಅನ್ನೋದರ ಜೊತೆಗೆ, ಜೀವನದಲ್ಲಿ ಯಾವ ಪಾಪಗಳನ್ನು ಮಾಡಬಾರದು. ಮತ್ತು ಯಾವ ಪುಣ್ಯ ಕಾರ್ಯಗಳನ್ನು ಮಾಡಬೇಕು ಅನ್ನೋ ಬಗ್ಗೆ ಹೇಳಲಾಗಿದೆ. ಅಲ್ಲದೇ, ಜೀವನದ ಕಡು ಸತ್ಯಗಳ ಬಗ್ಗೆಯೂ ಹೇಳಲಾಗಿದೆ. ಹಾಗಾಗಿ ನಾವಿಂದು ಮೊದಲ ಭಾಗದಲ್ಲಿ 4 ಕಟು ಸತ್ಯಗಳ ಬಗ್ಗೆ ಹೇಳಲಿದ್ದೇವೆ..

ಮೊದಲನೇಯ ಸತ್ಯ ತಾಳ್ಮೆ ಇಲ್ಲದವನು ಎಂದಿಗೂ ಉದ್ಧಾರವಾಗುವುದಿಲ್ಲ. ಯಾವ ಮನುಷ್ಯನಿಗೆ ತಾಳ್ಮೆ ಹೆಚ್ಚಿರುತ್ತದೆಯೋ, ಅವನು ಎಲ್ಲಿ ಹೋದರೂ ಗೆಲ್ಲುತ್ತಾನೆ. ಎಲ್ಲ ವಿಷಯದಲ್ಲೂ ತಾಳ್ಮೆಯಿಂದಿರಬಾರದು ಅನ್ನೋದು ನಿಜ. ಆದರೆ, ಜಗಳವಾಡಿ ನಂತರ ಪಶ್ಚಾತಾಪ ಪಡುವ ವಿಷಯವಾಗಿದ್ದರೆ, ಅಂಥ ಸಮಯದಲ್ಲಿ ತಾಳ್ಮೆಯಿಂದ ಇರಬೇಕು.

ಇಂಥ ಆಲೋಚನೆಗಳನ್ನ ಮಾಡೋದನ್ನ ಇಂದೇ ಬಿಟ್ಟುಬಿಡಿ..

ಎರಡನೇಯ ಸತ್ಯ ಜ್ಞಾನವಿದ್ದರೆ ಮಾತ್ರ ನೀವು ಬದುಕಬಹುದು. ಜ್ಞಾನವೆಂದರೆ ಬರೀ ವಿದ್ಯೆ ಅಲ್ಲ. ಯಾಕಂದ್ರೆ ನೀವು ಪುಸ್ತಕದ ಬದನೇಕಾಯಿಯಾಗಿದ್ದು, ನಿಮಗೆ ಸರ್ಟಿಫಿಕೇಟ್ ಇದ್ದರೂ, ನಿಮಗೆ ಜ್ಞಾನವಿಲ್ಲದಿದ್ದರೆ, ನೀವು ನಿಶ್ಪ್ರಯೋಜಕರಾಗ್ತೀರಿ. ಹಾಗಾಗಿ ವಿದ್ಯೆ ಇಲ್ಲದವನಿಗೆ ಜೀವನ ನಡೆಸುವ ಜ್ಞಾನವಿದ್ದಲ್ಲಿ, ಅವನು ಜೀವನವನ್ನು ಗೆಲ್ಲಬಹುದು.

ಮೂರನೇಯ ಸತ್ಯ ನೀವು ಧರ್ಮವನ್ನು ರಕ್ಷಿಸಿದರೆ, ಮಾತ್ರ ನಿಮ್ಮನ್ನು ಧರ್ಮ ರಕ್ಷಿಸುತ್ತದೆ. ನೀವು ಅನುಸರಿಸುವ ನಿಮ್ಮ ಧರ್ಮದ ಪದ್ಧತಿಯೇ ನಿಮ್ಮನ್ನು ಕಾಪಾಡುತ್ತದೆ. ಇದು ಕೆಲವರಿಗೆ ಕೋಪ ತರಿಸುವ ಮಾತಾಗಿರಬಹುದು. ಯಾಕಂದ್ರೆ ಹಲವು ನಾಸ್ತಿಕರು ಧರ್ಮದಲ್ಲೆಲ್ಲಾ ನಂಬಿಕೆ ಇಡುವುದಿಲ್ಲ. ಅವರಿಗೆ ಮನುಷ್ಯತ್ವವಷ್ಟೇ ಮುಖ್ಯ. ನಿಜ, ಮನುಷ್ಯತ್ವವೇ ದೊಡ್ಡ ಧರ್ಮ.. ಆದರೆ ನೀವು ನಿಮ್ಮ ಧರ್ಮದ ಬಗ್ಗೆ ತಿಳಿದುಕೊಂಡು, ಅದರಂತೆ ನಡೆದುಕೊಂಡರೆ, ಅದರ ಅರಿವೇ ನಿಮ್ಮನ್ನು ಕಾಪಾಡುತ್ತದೆ ಅನ್ನೋದು ಕೂಡ ಸತ್ಯ.

ಈ ಖುಷಿಯನ್ನು ಕಂಡುಕೊಳ್ಳಲು ಪ್ರಯತ್ನಿಸಿ.. ನಿಮ್ಮ ಜೀವನ ಉತ್ತಮವಾಗಿರುತ್ತದೆ..

ನಾಲ್ಕನೇಯ ಸತ್ಯ ಸ್ವಚ್ಛವಾದ ವಸ್ತ್ರ ಧರಿಸದಿದ್ದವನು ಎಂದೂ ಉದ್ಧಾರವಾಗುವುದಿಲ್ಲ. ಗರುಡ ಪುರಾಣದ ಪ್ರಕಾರ, ನಿಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಬೇಕು. ಜನ ನಿಮ್ಮೊಂದಿಗೆ ಚೆನ್ನಾಗಿ ನಡೆದುಕೊಳ್ಳಬೇಕು, ನಾಲ್ಕು ಜನ ನಿಮ್ಮ ಬಗ್ಗೆ ಒಳ್ಳೆಯ ಮಾತನ್ನಾಡಬೇಕು ಅಂದ್ರೆ ನೀವು ಸ್ವಚ್ಛವಾದ ಬಟ್ಟೆ ಧರಿಸಬೇಕು. ಧರಿಸಿದ ಬಟ್ಟೆಯೇ 10 ಬಾರಿ ಧರಿಸಿದರೂ, ಅದನ್ನ ತೊಳೆದು ಧರಿಸಿ. ಹೀಗೆ ಮಾಡಿದ್ದಲ್ಲಿ, ನಿಮ್ಮ ಮೇಲೆ ಲಕ್ಷ್ಮೀ ದೇವಿ ಕೃಪೆ ತೋರುವಳು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಮುಂದಿನ ಭಾಗದಲ್ಲಿ ತಿಳಿಯೋಣ..

- Advertisement -

Latest Posts

Don't Miss