Sunday, December 22, 2024

Latest Posts

ಇದು ಮಹಾಭಾರತ ಕಾಲದಲ್ಲಿ ಮಾಡಿದ ಭಯಂಕರ ಪ್ರತಿಜ್ಞೆಗಳು.. ಭಾಗ 1

- Advertisement -

ನೀವು ನಿಮ್ಮ ಜೀವನದಲ್ಲಿ ಯಾವುದಾದರೂ ಕಠಿಣ ನಿರ್ಧಾರ ತೆಗೆದುಕೊಂಡಲ್ಲಿ, ಅದರಿಂದ ನಿಮ್ಮ ಮನೆಯವರ ಮನಸ್ಸಿಗೆ ನೋವುಂಟಾಗುತ್ತದೆ. ಆದ್ರೆ ಮಹಾಭಾರತ ಕಾಲದಲ್ಲಿ ಕೆಲ ಮಹಾಪುರುಷರು ಮಾಡಿದ ಕೆಲ ಪ್ರತಿಜ್ಞೆಗಳು, ಹಲವರನ್ನ ನಡುಗಿಸಿತ್ತು. ಹಾಗಾದ್ರೆ ಮಹಾಭಾರತ ಕಾಲದಲ್ಲಿ ಮಾಡಿದ ಭಯಂಕರ ಪ್ರತಿಜ್ಞೆಗಳು ಯಾವುದು ಅಂತಾ ತಿಳಿಯೋಣ ಬನ್ನಿ..

ಭೀಷ್ಮರ ಪ್ರತಿಜ್ಞೆ: ಭೀಷ್ಮರ ತಂದೆ ಶಂತನು ಮಹಾರಾಜ, ನದಿಯ ಬಳಿ ವಾಯುವಿಹಾರಕ್ಕೆ ಹೋದಾಗ, ಅಲ್ಲಿ ಮೀನುಗಾರರ ಹೆಣ್ಣಾಗಿದ್ದ ಸತ್ಯವತಿಯ ಮೇಲೆ ಮೋಹ ಉಂಟಾಯಿತು. ಹಾಗಾಗಿ ಆಕೆಯನ್ನು ಮದುವೆಯಾಗಬೇಕೆಂದು ಆಕೆಯ ತಂದೆಯ ಎದುರು ಪ್ರಸ್ತಾವವಿಟ್ಟರು. ಅದಕ್ಕೆ ಸತ್ಯವತಿಯ ತಂದೆ, ನಾನು ಮದುವೆಗೆ ಒಪ್ಪುತ್ತೇನೆ. ಆದ್ರೆ ನನ್ನ ಮಗಳಿಂದ ಹುಟ್ಟುವ ಪುತ್ರರೇ, ನಿನ್ನ ವಂಶದ ರಾಜರಾಗಬೇಕು. ಆ ಪಟ್ಟ ಬೇರೆ ಯಾರಿಗೂ ಸಿಗಬಾರದು ಎಂದು ಹೇಳುತ್ತಾರೆ. ಆದರೆ ಶಂತನುವಿಗೆ ಆಗಲೇ ಪರಾಕ್ರಮಿಯಾಗಿದ್ದ ಮಗನಾದ ಭೀಷ್ಮನಿದ್ದ. ಇಂಥ ಪರಾಕ್ರಮಿಯನ್ನು ಬಿಟ್ಟು ಬೇರೆಯವರಿಗೆ ರಾಜನ ಪಟ್ಟ ಕಟ್ಟಲು ಶಂತನುವಿಗೆ ಮನಸ್ಸಾಗಲಿಲ್ಲ. ಹಾಗಾಗಿ ಮರಳಿ ಅವನು ಅರಮನೆಗೆ ಬರುತ್ತಾನೆ.

ಆದರೆ ರಾಜನ ಮನಸ್ಸಿನಲ್ಲಿ ಸತ್ಯವತಿಯೇ ಇರುತ್ತಾಳೆ. ರಾಜನ ಚಿಂತೆಗೆ ಕಾರಣವೇನೆಂದು ಭೀಷ್ಮ ಕೇಳುತ್ತಾನೆ. ಅದಕ್ಕೆ ರಾಜ ಇರುವ ವಿಷಯವನ್ನು ಹೇಳುತ್ತಾನೆ. ಆಗ ಭೀಷ್ಮರು, ನೀವು ಸತ್ಯವತಿಯನ್ನೇ ವಿವಾಹವಾಗಿ, ಅವರಿಗೆ ಹುಟ್ಟುವ ಮಕ್ಕಳಿಗೆ ಪಟ್ಟ ಕೊಡಿ. ನನಗೆ ರಾಜನ ಪಟ್ಟ ಬೇಡ. ಮುಂದೆ ನಾನು ವಿವಾಹವಾದ್ರೆ, ನನ್ನ ಮಕ್ಕಳಿಗೂ ಪಟ್ಟ ಕೊಡಬೇಕಾಗುತ್ತದೆ. ಹಾಗಾಗಿ ನಾನು ವಿವಾಹವೂ ಆಗುವುದಿಲ್ಲ.

ನಾನು ಕುರುವಂಶದ ಏಳಿಗೆಗಾಗಿಯೇ ಬದುಕುತ್ತೇನೆಂದು ಹೇಳುತ್ತಾನೆ ಭೀಷ್ಮ. ಭೀಷ್ಮ ತಂದೆಯ ಮುಂದೆ ಈ ಪ್ರತಿಜ್ಞೆ ಮಾಡದಿದ್ದಲ್ಲಿ, ಕುರುವಂಶಕ್ಕೆ ಶಕುನಿ ಬರುತ್ತಿರಲಿಲ್ಲ. ಪಾಂಡವರು ಕೌರವರ ಮಧ್ಯೆ ಬಿರುಕು ಮೂಡುತ್ತಿರಲಿಲ್ಲ. ಮಹಾಭಾರತ ಯುದ್ಧವಾಗುತ್ತಿರಲಿಲ್ಲ. ಹಾಗಾಗಿ ಇದು ಮಹಾಭಾರತದ ಭಯಂಕರ ಪ್ರತಿಜ್ಞೆಗಳಲ್ಲಿ ಒಂದಾಗಿದೆ. ಇನ್ನುಳಿದ ಎರಡು ಪ್ರತಿಜ್ಞೆ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ..

ದೇವತೆಗಳು ಏಕೆ ಮದ್ಯಪಾನ ಮಾಡುತ್ತಿದ್ದರು..? ಸೋಮರಸದ ರಹಸ್ಯ..

ಪಾಂಡವರು ಕುಂಭಕರಣನ ತಲೆ ಬುರುಡೆಯಲ್ಲಿ ಹೋಗಿದ್ದರಂತೆ.. ಯಾಕೆ ಗೊತ್ತಾ..?

ಹವನ ಮಾಡುವಾಗ ಸ್ವಾಹಾ ಎಂದು ಹೇಳಲು ಕಾರಣವೇನು..?

- Advertisement -

Latest Posts

Don't Miss