ಇದರ ಮೊದಲ ಭಾಗದಲ್ಲಿ ನಾವು ಭೀಷ್ಮರ ಪ್ರತಿಜ್ಞೆ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ ಇಬ್ಬರ ಪ್ರತಿಜ್ಞೆ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಎರಡನೇಯ ಪ್ರತಿಜ್ಞೆ ಭೀಮನ ಪ್ರತಿಜ್ಞೆ. ರಾಜಸಭೆಯಲ್ಲಿ ಕೌರವರು ಪಾಂಡವರನ್ನ ಪಗಡೆಯಾಟದಲ್ಲಿ ಸೋಲಿಸಿ, ಅವಮಾನ ಮಾಡಿದರು. ಈ ವೇಳೆ ದ್ರೌಪದಿಯನ್ನ ಪಣಕ್ಕಿಡಬೇಕಾಯಿತು. ದ್ರೌಪದಿಯ ವಸ್ತ್ರಾಪಹರಣ ಮಾಡಿದ ದುರ್ಯೋಧನ, ಆಕೆಯ ಬಗ್ಗೆ ಕೆಟ್ಟದಾಗಿ ಮಾತನಾಡಿದ. ಆಗ ಭೀಮ ಈ ಅವಮಾನಕ್ಕೆ ಪ್ರತೀಕಾರವಾಗಿ, ಯುದ್ಧ ಮಾಡಿ, ಆ ಯುದ್ಧದಲ್ಲಿ ದುರ್ಯೋಧನನನ್ನು ಸೋಲಿಸಿ, ಅವನ ಎದೆ ಬಗೆದು ಅವನ ರಕ್ತ ಹರಿಸುತ್ತೇನೆ. ಮತ್ತು ಅದೇ ರಕ್ತದಿಂದ ದ್ರೌಪದಿಯ ಮುಡಿ ಕಟ್ಟುವಂತೆ ಮಾಡುತ್ತೇನೆಂದು ಪ್ರತಿಜ್ಞೆ ಮಾಡಿದ್ದ. ಅದರಂತೆ, ಮಹಾಭಾರತ ಯುದ್ಧದಲ್ಲಿ ದುರ್ಯೋಧನನನ್ನು ವಧೆ ಮಾಡಿ, ಅವನ ರಕ್ತ ಹರಿಸಿ, ಅದೇ ರಕ್ತದಿಂದ ದ್ರೌಪದಿ ಮುಡಿ ಕಟ್ಟುವಂತೆ ಮಾಡಿದ್ದ.
ಮೂರನೇಯ ಪ್ರತಿಜ್ಞೆ ಅರ್ಜುನ ತೆಗೆದುಕೊಂಡ ಪ್ರತಿಜ್ಞೆ. ಅಭಿಮನ್ಯು ಸಾವನ್ನಪ್ಪಿದಾಗ, ಜಯಧೃತ ಪಾಂಡವರನ್ನ ಅಭಿಮನ್ಯುವಿನ ಬಳಿ ಹೋಗದಂತೆ ತಡೆದಿದ್ದ. ಜಯಧೃತ ಹಾಗೆ ಮಾಡದಿದ್ದಲ್ಲಿ, ಅಭಿಮನ್ಯು ಬದುಕುಳಿಯುತ್ತಿದ್ದ ಎನ್ನಲಾಗಿದೆ. ಆದ್ರೆ ಜಯಧೃತ ಹೀಗೆ ಮಾಡಿದ ಕಾರಣಕ್ಕೆ, ಅಭಿಮನ್ಯುವಿನ ಸಾವಿಗೆ ಅವನೇ ಕಾರಣನಾಗಿದ್ದ. ಇದೇ ಸೇಡಿಗೆ ಅರ್ಜುನ ಪ್ರತಿಜ್ಞೆ ಮಾಡಿದ್ದ.
ತಾನು ಮರುದಿನವೇ ಜಯಧೃತನನ್ನು ವಧೆ ಮಾಡದಿದ್ದಲ್ಲಿ, ತನ್ನನ್ನು ತಾನು ಸುಟ್ಟುಕೊಂಡು ಸಾಯುತ್ತೇನೆಂದು ಅರ್ಜುನ ಪ್ರತಿಜ್ಞೆ ಮಾಡಿದ್ದ. ಮರುದಿನ ಮಹಾಭಾರತ ಯುದ್ಧ ಶುರುವಾಗುತ್ತದೆ. ಸಂಜೆಯಾಗುವವರೆಗೂ ಅರ್ಜುನ ಜಯಧೃತನನ್ನು ಸಾಯಿಸಲು ಸಾಧ್ಯವಾಗುವುದಿಲ್ಲ. ಇನ್ನು ಕೆಲ ಗಂಟೆಗಳಲ್ಲೇ ಸೂರ್ಯಾಸ್ತವಾಗುತ್ತದೆ. ಆದ್ರೆ ಇಂದು ಅರ್ಜುನ ಜಯಧೃತನನ್ನು ಸಾಯಿಸದಿದ್ದಲ್ಲಿ, ಅರ್ಜುನ ತನ್ನನ್ನು ತಾನೇ ಅಗ್ನಿಗಾಹುತಿ ಮಾಡಿಕೊಳ್ಳುತ್ತಾನೆ ಎಂದು ಕೃಷ್ಣ ಒಂದು ಉಪಾಯ ಮಾಡುತ್ತಾನೆ.
ತನ್ನ ಬಾಣದ ಸಹಾಯದಿಂದ ಸೂರ್ಯಾಸ್ತವಾದಂತೆ ವಾತಾವರಣವನ್ನು ಸೃಷ್ಟಿಸುತ್ತಾನೆ. ಆಗ ಜಯಧೃತ ಸೂರ್ಯಾಸ್ತವಾಯಿತೆಂದು ತಿಳಿದು, ಅರ್ಜುನನ ಎದುರು ಬಂದು ನಿಲ್ಲುತ್ತಾನೆ. ಆ ಕ್ಷಣವೇ ಕೃಷ್ಣ ಅರ್ಜುನನಿಗೆ ಜಯಧೃತನನ್ನು ಕೊಲ್ಲುವಂತೆ ಸಂದೇಶ ನೀಡುತ್ತಾನೆ. ಅರ್ಜುನ ಜಯಧೃತನನ್ನು ಕೊಲ್ಲುತ್ತಾನೆ. ಮತ್ತೆ ಸೂರ್ಯನ ಬೆಳಕು ಮೂಡುತ್ತದೆ. ಅರ್ಜುನನ ಪ್ರತಿಜ್ಞೆ ಪೂರ್ಣವಾಗುತ್ತದೆ. ಮತ್ತೆ ಯುದ್ಧ ಮುಂದುವರಿಯುತ್ತದೆ.
ಪಾಂಡವರು ಕುಂಭಕರಣನ ತಲೆ ಬುರುಡೆಯಲ್ಲಿ ಹೋಗಿದ್ದರಂತೆ.. ಯಾಕೆ ಗೊತ್ತಾ..?