Horoscope: ಹೆಣ್ಣು ಮಕ್ಕಳಿಗೆ ಧೈರ್ಯ ಅನ್ನುವುದು ತುಂಬಾ ಮುಖ್ಯ. ಹಾಗೆ ಧೈರ್ಯವಿದ್ದಾಗ ಮಾತ್ರ ಆಕೆ ನಿಶ್ಚಿಂತೆಯಿಂದ ಬದುಕಲು ಸಾಧ್ಯವಾಗುತ್ತದೆ. ಆದ್ರೆ ಎಲ್ಲ ಹೆಣ್ಣು ಮಕ್ಕಳಿಗೂ ಧೈರ್ಯ ಬರಲು ಸಾಧ್ಯವಿಲ್ಲ. ಆದರೆ 4 ರಾಶಿಯ ಮಹಿಳೆಯರು ಮಾತ್ರ ಧೈರ್ಯವಂತರಾಗಿರುತ್ತಾರೆ. ಹಾಗಾದ್ರೆ ಯಾವುದು ಆ 4 ರಾಶಿ ಎಂದು ತಿಳಿಯೋಣ ಬನ್ನಿ..
ಮೇಷ ರಾಶಿ: ಮೇಷ ರಾಶಿಯ ಮಕ್ಕಳು ಧೈರ್ಯದಿಂದಲೇ ಯಶಸ್ಸು ಸಾಧಿಸುತ್ತಾರೆ. ಏಕೆಂದರೆ ಈ ರಾಶಿಯವರ ಗ್ರಹ ಮಂಗಳವಾಗಿದೆ. ಮತ್ತು ಯಾವ ರಾಶಿ ಮಂಗಳ ಗ್ರಹದಿಂದ ನಡೆಸಲ್ಪಡುತ್ತದೆಯೋ, ಅಂಥ ವ್ಯಕ್ತಿಗಳು ಧೈರ್ಯವಂತರಾಗಿರುತ್ತಾರೆ. ಇವರು ಯಾವುದಾದರೂ ಕೆಲಸ ಮಾಡಲೇಬೇಕೆಂದು ನಿರ್ಧರಿಸಿದರೆ, ಅದನ್ನು ಮಾಡದೇ ಬಿಡುವುದಿಲ್ಲ.
ತುಲಾ ರಾಶಿ: ತುಲಾ ರಾಶಿಯವರು ಅಗತ್ಯಕ್ಕಿಂತ ಹೆಚ್ಚು ಟೆನ್ಶನ್ ತೆಗೆದುಕೊಳ್ಳುವುದಿಲ್ಲ. ಇವರು ತಮ್ಮದೇ ಲೋಕದಲ್ಲಿರುತ್ತಾರೆ. ಈ ರಾಶಿಯ ಹೆಣ್ಣು ಮಕ್ಕಳು ಎಂಥದ್ದೇ ಅಡೆತಡೆ ಇದ್ದರೂ, ಅದನ್ನು ದಾಟಿ ಗೆಲ್ಲುತ್ತಾರೆ. ಏಕೆಂದರೆ ಇವರು ತಮ್ಮ ಮೇಲೆ ವಿಶ್ವಾಸವಿಟ್ಟಿರುತ್ತಾರೆ. ಹಾಗಾಗಿ ಧೈರ್ಯ ಮಾಡಿ, ತಮ್ಮ ಕೆಲಸದಲ್ಲಿ ಯಶಸ್ವಿಯಾಗುತ್ತಾರೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯ ಹೆಣ್ಣು ಮಕ್ಕಳಿಗೆ ಧೈರ್ಯದ ಜೊತೆ ಸಿಟ್ಟು ಕೂಡ ಹೆಚ್ಚಾಗಿರುತ್ತದೆ. ಹಾಗಾಗಿ ಇವರು ಎಷ್ಟೇ ಕಷ್ಟವಾದರೂ ಕೂಡ, ಯಾವುದೇ ಕೆಲಸಕ್ಕೂ ಧೈರ್ಯದಿಂದ ಮುನ್ನುಗ್ಗುತ್ತಾರೆ. ಇವರಿಗೆ ಎಷ್ಟೇ ಕೋಪವಿದ್ದರೂ, ಪ್ರೀತಿಪಾತ್ರರ ಪರವಾಗಿ ನಿಲ್ಲುತ್ತಾರೆ.
ಕುಂಭ ರಾಶಿ: ಕುಂಭ ರಾಶಿಯ ಮಹಿಳೆಯರು ತಮಗೆ ಇಷ್ಟವಾಗದ್ದನ್ನು ಖಡಾಖಂಡಿತವಾಗಿ ವಿರೋಧಿಸುತ್ತಾರೆ. ಮತ್ತು ಆ ಕೆಲಸದಿಂದ ದೂರ ಸರಿಯುತ್ತಾರೆ. ಇದಕ್ಕೆ ಇವರಲ್ಲಿರುವ ಧೈರ್ಯವೇ ಕಾರಣವೆನ್ನಬಹುದು.
Janmashtami Special: ಶ್ರೀಕೃಷ್ಣನಿಗೆ 56 ರೀತಿಯ ಭೋಜನವನ್ನೇಕೆ ನೈವೇದ್ಯ ಮಾಡುತ್ತಾರೆ..?
Janmashtami Special: ಶ್ರೀಕೃಷ್ಣನನ್ನು ಗುರುವಾಯೂರಪ್ಪ ಎಂದು ಪೂಜಿಸಲು ಕಾರಣವೇನು..?
Janmashtami Special: ಕೃಷ್ಣ ಒಂದೇ ಜಗದ್ಗುರುಂ ಅಂತಾ ಹೇಳಲು ಕಾರಣವೇನು..?

