Friday, October 18, 2024

Latest Posts

ಚಹಾ ಮಾಡುವಾಗ ಈ ಪದಾರ್ಥಗಳನ್ನು ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದು..

- Advertisement -

Health Tips: ಚಹಾ ಕುಡಿದವರಿಗೆ, ಅದರ ಚಟ ಹತ್ತುತ್ತದೆ ಎಂದು ಹೇಳುತ್ತಾರೆ. ಅದು ನಿಜ. ಕೆಲವರಿಗೆ ಅವರು ಟೀ ಕುಡಿಯುವ ಸಮಯಕ್ಕೆ ಟೀ ಕುಡಿಯದಿದ್ದರೆ, ಏನೋ ಕಳೆದುಕೊಂಡ ಹಾಗೆ ಚಡಪಡಿಸುತ್ತಾರೆ. ಹೀಗೆ ಟೀ ಚಟ ನಿಮಗೂ ಇದ್ದಲ್ಲಿ, ದಿನಕ್ಕೆ ಎರಡು ಬಾರಿ ಮಾತ್ರ ಟೀ ಕುಡಿಯಿರಿ. 2ಕ್ಕಿಂತ ಹೆಚ್ಚು ಬಾರಿ ಟೀ ಕುಡಿಯುವುದು ಆರೋಗ್ಯಕ್ಕೆ ಅಷ್ಟು ಉತ್ತಮವಲ್ಲ. ಇನ್ನು ಟೀ ಕುಡಿಯುವಾಗ, ಅದಕ್ಕೆ ಕೆಲ ವಸ್ತುಗಳನ್ನು ಹಾಕಿದರೆ, ಅದು ಆರೋಗ್ಯಕ್ಕೆ ಒಳ್ಳೆಯದು. ಹಾಗಾದ್ರೆ ಅದು ಯಾವ ಪದಾರ್ಥ ಅಂತಾ ತಿಳಿಯೋಣ ಬನ್ನಿ..

ಚಹಾ ಮಾಡುವಾಗ, ಚಕ್ಕೆ, ಲವಂಗ, ಏಲಕ್ಕಿ, ಶುಂಠಿ, ತುಳಸಿ ಎಲೆ. ಇವಿಷ್ಟನ್ನು ನೀವು ಚಹಾ ಮಾಡುವ ಸಂದರ್ಭದಲ್ಲಿ ಬಳಸಬಹುದು. ಆದರೆ ಪ್ರತಿದಿನ ಇದನ್ನು ಬಳಸಿದರೆ, ಉಷ್ಣತೆ ಹೆಚ್ಚಬಹುದು. ಹಾಗಾಗಿ ವಾರಕ್ಕೆ ಮೂರು ಬಾರಿ ಬಳಸಿದರೆ ಸಾಕು. ಇದರಲ್ಲಿ ಯಾವುದಾದರೂ ಒಂದು ವಸ್ತುವನ್ನಷ್ಟೇ ಕೂಡ ನೀವು ಚಹಾ ಮಾಡುವಾಗ ಬಳಸಬಹುದು. ಈ ಎಲ್ಲ ವಸ್ತುಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ.

ಶುಗರ್ ಇದ್ದವರು ತುಳಸಿ ಎಲೆಯನ್ನ ಬಳಸಿ ಟೀ ಮಾಡಿ, ಸೇವಿಸಬಹುದು. ಇದು ಮಧುಮೇಹಿಗಳಿಗೆ ಉತ್ತಮವಾಗಿದ್ದು, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಮಾಡುತ್ತದೆ. ಹಾಗಾಗಿ ಇದರ ಟೀ ಮಾಡಿ ಕುಡಿದಲ್ಲಿ, ಪದೇ ಪದೇ ಶೀತ, ಜ್ವರ ಬರುವುದಿಲ್ಲ. ಲವಂಗ ನೀವು ತಿಂದ ಆಹಾರವನ್ನು ಸರಿಯಾಗಿ ಜೀರ್ಣ ಮಾಡಲು ಸಹಾಯ ಮಾಡುತ್ತದೆ. ಏಲಕ್ಕಿ ಬಳಕೆಯಿಂದ ಬಾಯಿ ವಾಸನೆ ಹೋಗುವುದಲ್ಲದೇ, ಗಂಟಲು ನೋವು ನಿವಾರಿಸುತ್ತದೆ.

ಶೀತ, ಗಂಟಲು ನೋವು, ಜೀರ್ಣಕ್ರಿಯೆ ಸಮಸ್ಯೆ ಎಲ್ಲವನ್ನೂ ಸರಿ ಮಾಡುವಲ್ಲಿ ಚಕ್ಕೆ ಮತ್ತು ಶುಂಠಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಒಟ್ಟಾರೆಯಾಗಿ ಈ ಮಸಾಲೆ ಟೀಯನ್ನು ವಾರಕ್ಕೆ ಮೂರು ಬಾರಿ ಕುಡಿದಲ್ಲಿ, ನೀವು ಚೈತನ್ಯದಾಯಕರಾಗಿರುವುದು ಖಚಿತ.

ಗರ್ಭಿಣಿಯರು 3 ತಿಂಗಳು ತುಂಬಿದ ಬಳಿಕ ಈ ಆಹಾರಗಳನ್ನು ಸೇವನೆ ಮಾಡಬೇಕು..

ಪಿಸ್ತಾ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು..?

ಬೇರುಹಲಸಿನಕಾಯಿ (ಜೀಗುಜ್ಜೆ) ಸ್ಪೆಶಲ್ ಬಜ್ಜಿ ರೆಸಿಪಿ

- Advertisement -

Latest Posts

Don't Miss