Spiritual: ಓರ್ವ ವ್ಯಕ್ತಿ ಸಿಟ್ಟಿನಲ್ಲಿರುತ್ತಾರೆ, ಅಥವಾ ಸಿಡುಕುತ್ತಿರುತ್ತಾನೆ ಎಂದರೆ, ಅವನಿಗೆ ಮನೆಯಲ್ಲಿ ಅಥವಾ ಆಫೀಸಿನಲ್ಲಿ ಕಿರಿಕಿರಿಯಾಗುತ್ತಿದೆ ಎಂದರ್ಥ. ಆ ಸಿಟ್ಟಿಗೆ ಕಾರಣ ಅವನ ಮನೆ ಮಂದಿಯಾಗಿರುತ್ತಾರೆ. ಅಥವಾ ಯಾವುದಾದರೂ ಅತೃಪ್ತ ಮನುಷ್ಯನಾಗಿರುತ್ತಾನೆ. ಅಥವಾ ಮೂರ್ಖ ವ್ಯಕ್ತಿಯಾಗಿರುತ್ತಾನೆ. ಚಾಣಕ್ಯರ ಪ್ರಕಾರ ಈ ಮೂವರೇ ಓರ್ವ ವ್ಯಕ್ತಿಯ ದುಃಖಕ್ಕೆ ಕಾರಣರಾಗುತ್ತಾರಂತೆ. ಅದು ಹೇಗೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಮೂರ್ಖ ಶಿಷ್ಯ. ನೀವು ನಿಮ್ಮ ಶಿಷ್ಯನಿಗೆ ಯಾವುದಾದರೂ ವಿದ್ಯೆ ಹೇಳಿಕೊಡುತ್ತಿದ್ದಲ್ಲಿ, ಅವನು ಅದನ್ನು ಗಮನವಿಟ್ಟು ಕಲಿಯದಿದ್ದಲ್ಲಿ, ಕಲ್ಲಿನ ಮೇಲೆ ನೀರೆರೆದಂತೆ. ಅದರಿಂದ ಏನೂ ಪ್ರಯೋಜನವಾಗುವುದಿಲ್ಲ. ಇದರಿಂದ ಅವನ ಸಮಯ ಮತ್ತು ನಿಮ್ಮ ಸಮಯ ಮತ್ತು ಶಕ್ತಿ ಎರಡೂ ವ್ಯರ್ಥವಾಗುತ್ತದೆ. ಇಂಥವರು ಓರ್ವ ವ್ಯಕ್ತಿಯನ್ನು ದುಃಖಕ್ಕೆ ಕಾರಣವಾಗುತ್ತಾನೆ.
ದುಷ್ಟ ಪತ್ನಿ. ಪತ್ನಿಯಾದವಳು ಪತಿಯ ಬಗ್ಗೆ ಪ್ರೀತಿ, ಕಾಳಜಿಯಿಂದ ಇರಬೇಕು. ಇದ್ದುದರಲ್ಲೇ ಅನುಸರಿಸಿಕೊಂಡು ಹೋಗುವಂತವಳಾಗಿರಬೇಕು. ಅದನ್ನು ಬಿಟ್ಟು ಹಣಕ್ಕಾಗಿ, ಕಾಮಕ್ಕಾಗಿ, ಇತರೇ ಆಸೆ ಇಡೇರಿಸಬೇಕು ಎಂದು ಪತಿಯ ಜೀವ ಹಿಂಡುವವಳು ದುಷ್ಟ ಪತ್ನಿಯಾಗಿರುತ್ತಾಳೆ. ಇವಳ ಆಸೆ ಆಕಾಂಕ್ಷೆಗಳನ್ನು ಈಡೇರಿಸಲು ಪತಿ ತನ್ನ ಜೀವನವನ್ನ ಸವೆಸಬೇಕು. ಓರ್ವ ಮನುಷ್ಯ ದುಃಖಕ್ಕೀಡಾಗಲು ಇಂಥ ಪತ್ನಿ ಸಾಕು.
ಸದಾ ದುಃಖದಲ್ಲೇ ಇರುವವರು. ಅಂದ್ರೆ ನೀವು ಏನೇ ಮಾಡಿದರೂ, ಹೇಗೆ ಇದ್ದರೂ ತೃಪ್ತಿಯೇ ಇಲ್ಲದವರು, ಬರೀ ನಿಮ್ಮ ತಪ್ಪು ಕಂಡುಹಿಡಿಯುವವರು, ಕೊಂಕು ಮಾತನಾಡುವವರು ಸದಾ ದುಃಖದಲ್ಲೇ ಇರುತ್ತಾರೆ. ಅವರಿಗೆ ನೀವು ಸಂತೃಪ್ತಿ ಪಡಿಸಲು ಸಾಧ್ಯವೇ ಇರುವುದಿಲ್ಲ. ಅವರು ಇದ್ದದ್ದನ್ನು ಅನುಭವಿಸುವುದನ್ನು ಬಿಟ್ಟು, ಇಲ್ಲದ ವಸ್ತುವಿನ ಬಗ್ಗೆಯೇ ಯೋಚಿಸುತ್ತಾರೆ. ಇಂಥ ಮನುಷ್ಯರು ಇನ್ನೊಬ್ಬರ ದುಃಖಕ್ಕೆ ಕಾರಣರಾಗುತ್ತಾರೆ.
ತೃಪ್ತಿದಾಯಕವಾಗಿ ಜೀವನ ನಡೆಸುವವರ ಹಣೆಬರಹ ಹೀಗಿರಬೇಕು ಎನ್ನುತ್ತಾರೆ ಚಾಣಕ್ಯರು..
ಯಾರಿಗೆ ಇಂಥ ಯೋಗವಿರುತ್ತದೆಯೋ, ಅವರು ಅಸಮಾನ್ಯರು ಎನ್ನುತ್ತಾರೆ ಚಾಣಕ್ಯರು..

