Thursday, December 12, 2024

Latest Posts

ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತೆ, ಈ ಮೂರು ಫ್ಯಾಷನ್ ಮಿಸ್ಟೇಕ್ಸ್

- Advertisement -

ಫ್ಯಾಷನ್ ಅನ್ನೋದು ಈಗಿನ ಕಾಲದಲ್ಲಿ ಕಾಮನ್ ಆಗಿದೆ. ಫ್ಯಾಷನ್ ಅನ್ನೋದು ಕೆಲವರಿಗೆ ಜೀವನದ ಒಂದು ಭಾಗವಾದರೆ, ಇನ್ನು ಕೆಲವರಿಗೆ ಅದು ಜೀವನವೇ ಆಗಿದೆ. ಕೊಂಚವಾದರೂ ಫ್ಯಾಷನ್ ಸೆನ್ಸ್ ಇರಬೇಕು ಅನ್ನೋದು ನಿಜ. ಆದರೆ ಅದೇ ಫ್ಯಾಷನ್ ಮಾಡುವಾಗ ಮಿಸ್ಟೇಕ್ ಆದ್ರೆ, ಅದು ನಿಮ್ಮ ಆರೋಗ್ಯವನ್ನೂ ಹಾಳು ಮಾಡಬಹುದು. ಹಾಗಾಗಿ ನಾವಿಂದು 3 ಫ್ಯಾಶನ್ ಮಿಸ್ಟೇಕ್ ಬಗ್ಗೆ ನಿಮಗೆ ವಿವರಣೆ ನೀಡಲಿದ್ದೇವೆ.

ಮೊದಲನೇಯ ಮಿಸ್ಟೇಕ್, ಭಾರವಾದ ವ್ಯಾನೆಟಿ ಬ್ಯಾಗ್ ಧರಿಸುವುದು. ನೋಡೋಕ್ಕೆ ಚಂದಗಾಣಲಿ ಎಂದೇ ವ್ಯಾನೆಟಿ ಬ್ಯಾಗ್‌ ಧರಿಸುತ್ತಾರೆ ನಿಜ. ಆದರೆ ಆ ಬ್ಯಾಗ್ ಹೆಚ್ಚು ಭಾರವಿರದಿದ್ದಲ್ಲಿ ಉತ್ತಮ. ನೀವು ಧರಿಸಿರುವ ವ್ಯಾನೆಟಿ ಬ್ಯಾಗ್ ಭಾರವಾಗಿದ್ದರೆ, ಅದರಿಂದ ನಿಮಗೆ ಮೂಳೆ ನೋವು ಬರುತ್ತದೆ. ಭುಜಕ್ಕೆ ಧರಿಸಿದಾಗ, ಭುಜದ ನೋವು ಕೂಡ ಬರುತ್ತದೆ. ಇದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ.  ಹಾಗಾಗಿ ಭಾರವಾದ ವ್ಯಾನೆಟಿ ಬ್ಯಾಗ್ ಧರಿಸಬೇಡಿ.

ಎರಡನೇಯ ಮಿಸ್ಟೇಕ್, ಲಿಪ್‌ಸ್ಟಿಕ್ ಮತ್ತು ನೇಲ್ ಪಾಲೀಶ್ ಬಳಸುವುದು. ಲಿಪ್‌ಸ್ಟಿಕ್‌ ಬಳಸಿದ್ರೆ, ಮುಖದ ಅಂದ ಇಮ್ಮಡಿಯಾಗತ್ತೆ ಅನ್ನೋದು ನಿಜ. ಆದರೆ ನೀವು ಊಟ ಮಾಡುವಾಗ ಅದೇ ಲಿಪ್‌ಸ್ಟಿಕ್‌ನಲ್ಲಿರುವ ಕೆಮಿಕಲ್, ನಿಮ್ಮ ಹೊಟ್ಟೆಗೆ ಹೋಗಬಹುದು. ಇದರಿಂದ ತರಹೇವಾರಿ ರೋಗವೂ ಬರಬಹುದು. ಈ ವಿಷಯ ಗೊತ್ತಿದ್ದರೂ, ಕೆಲವು ಹೆಣ್ಣು ಮಕ್ಕಳು ನೆಗ್ಲೇಕ್ಟ್ ಮಾಡುತ್ತಾರೆ. ಆದರೆ ಇದು ತುಂಬಾ ಅಪಾಯಕಾರಿ. ಇನ್ನು ನೇಲ್ ಪಾಲೀಶ್ ಕೂಡ ಅಷ್ಟೇ. ಕೈಯಿಂದ ಊಟ ಮಾಡುವಾಗ, ಅದರ ಅಂಶ ನಿಮ್ಮ ಹೊಟ್ಟೆ ಸೇರಬಹುದು. ಆರೋಗ್ಯವೂ ಹಾಳಾಗಬಹುದು.

ಮೂರನೇಯ ಮಿಸ್ಟೇಕ್ ಹೈ ಹೀಲ್ಸ್ ಪಾದರಕ್ಷೆ ಧರಿಸುವುದು. ಕುಳ್ಳಗೆ ಇರುವವರು ಹೆಚ್ಚಾಗಿ ಹೈ ಹೀಲ್ಸ್ ಧರಿಸುತ್ತಾರೆ. ಆದರೆ ಇದು, ನಿಮ್ಮ ಸೊಂಟ, ಬೆನ್ನಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೈ ಹೀಲ್ಸ್ ಧರಿಸಿ ನಡೆಯುವಾಗ, ನಿಮಗೆ ಈ ಬಗ್ಗೆ ಗೊತ್ತಾಗುವುದಿಲ್ಲ. ಆದರೆ ನೀವು ಹೈ ಹೀಲ್ಸ್ ಹಾಕಿ ನಡೆಯುವಾಗ, ಆ ಭಾರ ನಿಮ್ಮ ಸೊಂಟ ಮತ್ತು ಬೆನ್ನ ಮೇಲೆ ಬೀಳುತ್ತದೆ. ಭವಿಷ್ಯದಲ್ಲಿ ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ.

ಸೌಂದರ್ಯ ಮತ್ತು ಆರೋಗ್ಯ ವೃದ್ಧಿಗಾಗಿ ಹೀಗೆ ಮಾಡಿ..

ಇಂದಿನ ಊಟವನ್ನು ನಾಳೆ ಬಿಸಿ ಮಾಡಿಕೊಂಡು ತಿನ್ನುವುದು ಒಳ್ಳೇದಾ..? ಕೆಟ್ಟದ್ದಾ..?

ನೀವು ಮಾಡುವ ಈ ತಪ್ಪೇ, ನೀವು ಲೇಟಾಗಿ ಏಳಲು ಕಾರಣವಾಗುತ್ತದೆ.

- Advertisement -

Latest Posts

Don't Miss